ನವದೆಹಲಿ:ವಕೀಲರ ಸಂಸ್ಥೆಯಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ವೃತ್ತಿಪರತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು 2019ರಿಂದ 2024ರ ನಡುವೆ 107 ನಕಲಿ ವಕೀಲರ ಸದಸ್ಯತ್ವವನ್ನು ರದ್ದು ಮಾಡಿದೆ. ವಕೀಲಿಕೆ ವೃತ್ತಿಯಲ್ಲಿ ಸಾರ್ವಜನಿಕರ ನಂಬಿಕೆ, ಕಾನೂನು ವ್ಯವಸ್ಥೆಯ ರಕ್ಷಣೆ, ಅಕ್ರಮಗಳ ತಡೆಗೆ ಬಾರ್ ಕೌನ್ಸಿಲ್ ಈ ದಿಟ್ಟ ಕ್ರಮ ಕೈಗೊಂಡಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಐ, 'ನಕಲಿ ವಕೀಲರು ಮತ್ತು ದೀರ್ಘಕಾಲ ವೃತ್ತಿಯಿಂದ ಹೊರಗುಳಿದವರನ್ನು ಕಾನೂನು ಸಂಸ್ಥೆಯಿಂದ ಕೈಬಿಡಲು ಈ ನಿರ್ಣಯ ಕೈಗೊಳ್ಳಲಾಗಿದೆ. ಇದು ಜನರ ನಂಬಿಕೆಯನ್ನು ಉಳಿಸಿಕೊಳ್ಳುವುದರ ಜೊತೆಗೆ, ಕಾನೂನನ್ನು ದುರ್ಬಳಕೆಯ ತಡೆಗೆ ಸಹಕಾರಿಯಾಗಲಿದೆ' ಎಂದು ತಿಳಿಸಿದೆ.
ವೃತ್ತಿಪರತೆಯ ರಕ್ಷಣೆ:ಬಿಸಿಐ ಕಾರ್ಯದರ್ಶಿ ಶ್ರೀಮಂತೋ ಸೇನ್ ಮಾತನಾಡಿದ್ದು, ಕಾನೂನು ಕ್ಷೇತ್ರದ ಸಮಗ್ರತೆ ಮತ್ತು ವೃತ್ತಿಪರತೆಯನ್ನು ಕಾಪಾಡುವ ಪ್ರಯತ್ನದ ಭಾಗವಾಗಿ ದೆಹಲಿಯಲ್ಲಿ 107 ನಕಲಿ ವಕೀಲರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.
ತರಬೇತಿ ಕೊರತೆ, ನಕಲಿ ವಕೀಲಿಕೆ ಕುರಿತು ನಡೆದ ತನಿಖೆಯ ಆಧಾರದ ಮೇಲೆ 2019 ಮತ್ತು 2023 ರ ನಡುವೆ ಸಾವಿರಾರು ಖೊಟ್ಟಿ ವಕೀಲರನ್ನು ಕಿತ್ತು ಹಾಕಲಾಗಿದೆ. ಅದರಲ್ಲಿ ಹಲವರು ನಕಲಿ ಪ್ರಮಾಣಪತ್ರಗಳ ಸಲ್ಲಿಕೆ, ಬಿಸಿಐನಲ್ಲಿ ದಾಖಲಾತಿ ವೇಳೆ ತಪ್ಪು ಮಾಹಿತಿ, ಸಕ್ರಿಯ ತರಬೇತಿ ಪಡೆಯದೇ ಇರುವುದು, ಬಾರ್ ಕೌನ್ಸಿಲ್‌ನ ನಿಯಮಗಳನ್ನು ಅನುಸರಿಸದಿರುವುದು ಇರುವ ವಕೀಲರನ್ನು ಸಂಸ್ಥೆಯಿಂ ಕೈಬಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತನಿಖಾ ಸಮಿತಿ ಶಿಫಾರಸು:ನಕಲಿ ವಕೀಲರನ್ನು ವಕೀಲ ವೃತ್ತಿಯಿಂದ ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಪಾಲಿಸಲಾಗಿದೆ. ಅಜಯ್ ಶಂಕರ್ ಶ್ರೀವಾಸ್ತವ್ ವರ್ಸಸ್ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕರಣದಲ್ಲಿ ನಕಲಿ ವಕೀಲರ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ರಚಿಸಿದ್ದ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಲಾಗಿದೆ. ಸಮಿತಿಯು ತನಿಖೆಯಲ್ಲಿ ಕಂಡುಬಂದ ನಕಲಿ ವಕೀಲರನ್ನು ಗುರುತಿಸಲಾಗಿದೆ. ಫೋರ್ಜರಿಗೆ ಸಂಬಂಧಿಸಿದ ಇನ್ನಷ್ಟು ಪ್ರಕರಣಗಳು ಪರಿಶೀಲನೆಯಲ್ಲಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:2025ರಲ್ಲಿ ಜನಗಣತಿಗೆ ಕೇಂದ್ರ ಸರ್ಕಾರ ಸಿದ್ಧತೆ: ಜಾತಿ ಗಣತಿ ಗೊಂದಲ ಮುಂದುವರಿಕೆ