ಹೈದರಾಬಾದ್: ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ವೇಗದ ಬೌಲರ್ ಮೊಹಮ್ಮದ್ ಶಮಿ 14 ತಿಂಗಳ ಬಳಿಕ ಟೀಮ್ ಇಂಡಿಯಾಗೆ ಮರಳಿದ್ದಾರೆ. ಜನವರಿ 22ರಿಂದ ಕೋಲ್ಕತ್ತಾದಲ್ಲಿ ಆರಂಭವಾಗಲಿರುವ ಸರಣಿಗೆ ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶನಿವಾರ ಸಂಜೆ 15 ಸದಸ್ಯರ ತಂಡವನ್ನು ಪ್ರಕಟಿಸಿದರು.
ಅಜಿತ್ ಅಗರ್ಕರ್ ನೇತೃತ್ವದ ಐವರು ಸದಸ್ಯರ ಆಯ್ಕೆ ಸಮಿತಿಯು ಸೂರ್ಯಕುಮಾರ್ ಯಾದವ್ಗೆ ನಾಯಕ ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್ಗೆ ಉಪ ನಾಯಕನ ಜವಾಬ್ದಾರಿ ನೀಡಿದೆ.
ಈ ಆಟಗಾರರಿಗೆ ಕೊಕ್ : ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್, ಇಶಾನ್ ಕಿಶನ್ ಮತ್ತು ಶಿವಂ ದುಬೆಗೆ ಕೊಕ್ ನೀಡಲಾಗಿದೆ. ರಿಷಬ್ ಪಂತ್ ಬದಲಿಗೆ ಧ್ರುವ್ ಜುರೆಲ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವೇಗದ ಬೌಲಿಂಗ್ನಲ್ಲಿ ಹಿರಿಯ ಪೇಸರ್ ಮಹ್ಮದ್ ಶಮಿಗೆ ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದಾರೆ. 2025ರ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ.
ಟಿ20 ಸರಣಿಗೆ ಭಾರತ ತಂಡ : ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
ಜನವರಿ 22ರಿಂದ ಫೆಬ್ರುವರಿ 2ರ ವರೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ನಡೆಯಲಿದೆ.
ಟಿ20 ಸರಣಿ ವೇಳಾಪಟ್ಟಿ:
ಪಂದ್ಯ | ದಿನಾಂಕ | ಸ್ಥಳ |
ಮೊದಲ ಟಿ20 ಪಂದ್ಯ | ಜನವರಿ 22 | ಕೋಲ್ಕತ್ತಾ |
ಎರಡನೇ ಟಿ20 ಪಂದ್ಯ | ಜನವರಿ 25 | ಚೆನ್ನೈ |
ಮೂರನೇ ಟಿ20 ಪಂದ್ಯ | ಜನವರಿ 28 | ರಾಜ್‌ಕೋಟ್ |
ನಾಲ್ಕನೇ ಟಿ20 ಪಂದ್ಯ | ಜನವರಿ 31 | ಪುಣೆ |
ಐದನೇ ಟಿ20 ಪಂದ್ಯ | ಫೆಬ್ರವರಿ 2 | ಮುಂಬೈ |
ಇದನ್ನೂ ಓದಿ: RCB ಆಟಗಾರನ ಸ್ಪೋಟಕ ಶತಕ: ಬರೋಡ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ!
ಇದನ್ನೂ ಓದಿ: 6,6,6,6,6,6! RCB ಆಟಗಾರನ ಸಿಡಿಲಬ್ಬರದ ಬ್ಯಾಟಿಂಗ್; ಫ್ಯಾನ್ಸ್ ಫುಲ್ ಖುಷ್!