ಅಯೋಧ್ಯೆ: ರಾಮ ಮಂದಿರದ ಸಂಪೂರ್ಣ ಕಾಮಗಾರಿ ಜೂನ್ 30, 2025ಗೆ ಪೂರ್ಣಗೊಳ್ಳಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನ್ರಿಪೆಂದ್ರ ಮಿಶ್ರಾ ತಿಳಿಸಿದರು. ರಾಮ ಮಂದಿರ ನಿರ್ಮಾಣ ಸಮಿತಿ ಮೂರು ದಿನಗಳ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.
ದೇಗುಲದ ಶಿಖರ ನಿರ್ಮಾಣಕ್ಕೆ 120 ದಿನಗಳ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಡಿಸೆಂಬರ್ ಒಳಗೆ ದೇಗುಲದ ಶಿಖರ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆಯಾದರೂ ಇದು ಪೂರ್ಣಗೊಳ್ಳುವುದಿಲ್ಲ. 2025ರ ಫೆಬ್ರವರಿ ಒಳಗೆ ದೇಗುಲದ ಸಂಪೂರ್ಣವಾಗಿ ನಿರ್ಮಾಣಗೊಳ್ಳಲಿದೆ. ದೇಗುಲದೊಳಗೆ ನಿರ್ಮಾಣವಾಗುವ ಸಪ್ತ ಮಂದಿರದ ಮೂರ್ತಿಗಳನ್ನು ಜೈಪುರದಲ್ಲಿ ತಯಾರಿಸಲಾಗುತ್ತಿದೆ.
ಋಷಿ - ಸಂತರ ಮೂರ್ತಿಗಳ ನಿರ್ಮಾಣ:ಈ ಸಪ್ತ ಮಂದಿರದೊಳಗೆ ಋಷಿ ಮತ್ತು ಸಂತರ ಮೂರ್ತಿಗಳನ್ನು ನಿರ್ಮಾಣ ಮಾಡಲಾಗುವುದು. ಈ ಕೆಲಸವೂ 2024ರ ಡಿಸೆಂಬರ್ನೊಳಗೆ ಪೂರ್ಣ ಮಾಡಲಾಗುವುದು. ಉಳಿದ ರಾಮ ಮಂದಿರದ ಕೆಲಸಗಳು ಜೂನ್ 20, 2025ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಮಾತನಾಡಿ, ದೇಗುಲದ ಮೇಲಿನ ಮಹಡಿ ನಿರ್ಮಾಣ ಮಾಡಲು ಬೇಕಾದ ಶಿಲೆ, ಕಲ್ಲು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಾರ್ಮಿಕರ ವ್ಯವಸ್ಥೆಗಾಗಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ.
ಬಿಳಿ ಬಣ್ಣದ ಮಾರ್ಬಲ್ನಲ್ಲಿ ಗರ್ಭಗುಡಿ:ಮೊದಲ ಮಹಡಿಯು ಇನ್ನೇನು ಮುಗಿಯುವ ಹಂತ ತಲುಪಿದ್ದು, ನೆಲ ಸಮತಟ್ಟು (ಫ್ಲೋರಿಂಗ್) ಕಾರ್ಯ ನಡೆಯುತ್ತಿದೆ. ಎರಡನೇ ಮಹಡಿ ಅಭಿವೃದ್ಧಿಯು ಕೂಡ ವೇಗವಾಗಿ ಸಾಗುತ್ತಿದ್ದು, ಯಾವುದೆ ಕಲೆ ಇರದ ಬಿಳಿ ಬಣ್ಣ ಮಾರ್ಬಲ್ ಕಲ್ಲಿನಲ್ಲಿ ಗರ್ಭಗುಡಿ ನಿರ್ಮಾಣ ಮಾಡಲಾಗುವುದು.