ಕರ್ನಾಟಕ

karnataka

ETV Bharat / bharat

ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಾಗಿ ಅರುಣ ಕುಮಾರ ನಂಬೂದಿರಿ ನೇಮಕ - SABARIMALA TEMPLE

ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕರಾಗಿ ಅರುಣ ಕುಮಾರ ನಂಬೂದಿರಿ ಅವರು ನೇಮಕವಾಗಿದ್ದಾರೆ.

ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ (IANS)

By ETV Bharat Karnataka Team

Published : Oct 17, 2024, 2:03 PM IST

ಪಥನಂತಿಟ್ಟ, ಕೇರಳ: ಅರುಣ ಕುಮಾರ ನಂಬೂದಿರಿ ಇವರು ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕವಾಗಿದ್ದಾರೆ. ಇವರು ಕೊಲ್ಲಂ ಶಕ್ತಿಕುಲಂಗರ ಮೂಲದವರು. ಅವರು ಈ ಹಿಂದೆ ಅಟ್ಟುಕಲ್ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾಗಿದ್ದರು ಮತ್ತು ಪ್ರಸ್ತುತ ಲಕ್ಷ್ಮಿ ನಟ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಯಿಕ್ಕೋಡ್ ತಿರುಮಂಗಲಂ ಇಲ್ಲಂ ಟಿ ವಾಸುದೇವನ್ ನಂಬೂದಿರಿ ಇದು ಅವರ ಪೂರ್ಣ ನಾಮಧೇಯವಾಗಿದೆ.

ಅರ್ಚಕರ ನೇಮಕಕ್ಕಾಗಿ ಉಷಾ ಪೂಜೆಯ ನಂತರ, ಬೆಳಿಗ್ಗೆ 7.30 ರ ಸುಮಾರಿಗೆ ಡ್ರಾ ನಡೆಯಿತು. ಪಂದಳಂ ಅರಮನೆಯ ಪ್ರತಿನಿಧಿಗಳಾದ ರಿಷಿಕೇಶ್ ವರ್ಮಾ ಮತ್ತು ವೈಷ್ಣವಿ ಸದಸ್ಯರನ್ನು ಆಯ್ಕೆ ಮಾಡಲು ಡ್ರಾ ಪ್ರಕ್ರಿಯೆಯನ್ನು ನಿರ್ವಹಿಸಿದರು. ಮಂಡಲಕಾಲಂನ ಆರಂಭವನ್ನು ಸೂಚಿಸುವ ನವೆಂಬರ್ 15 ರಂದು ಹೊಸ ಮುಖ್ಯ ಅರ್ಚಕರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಎಚ್ಚರ.. ಎಚ್ಚರ..: ನೀರಿನ ಬಿಕ್ಕಟ್ಟಿನಿಂದ ಜಾಗತಿಕ ಆಹಾರ ಉತ್ಪಾದನೆ ಮೇಲೆ ಭಾರಿ ಅಪಾಯ: ವರದಿ

ABOUT THE AUTHOR

...view details