ಹೈದರಾಬಾದ್:ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರು ಸೇವೆಯಿಂದ ನಿವೃತ್ತಿಯಾದ ನೆನಪಿಗಾಗಿ ಪ್ರತಿವರ್ಷ ಜನವರಿ 14 ರಂದು ಸಶಸ್ತ್ರ ಪಡೆಗಳ ಹಿರಿಯ ಯೋಧರ ದಿನವನ್ನು(ಸಶಸ್ತ್ರ ಪಡೆಗಳ ವೆಟರನ್ಸ್ ಡೇ) ಆಚರಿಸಲಾಗುತ್ತದೆ. ರಾಷ್ಟ್ರದ ಸೇವೆಗಾಗಿ ಮತ್ತು ದೇಶವನ್ನು ರಕ್ಷಿಸಲು ಯೋಧರ ತ್ಯಾಗ ಮತ್ತು ಅಮೂಲ್ಯ ಕೊಡುಗೆಗಳನ್ನು ಸ್ಮರಿಸಲು ಸಶಸ್ತ್ರ ಪಡೆಗಳ ಹಿರಿಯ ಯೋಧರ ದಿನವನ್ನು ಪ್ರತಿವರ್ಷ ಆಚರಿಸುತ್ತಾ ಬರಲಾಗುತ್ತಿದೆ.
ಈ ದಿನದ ಮಹತ್ವ: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಹುದ್ದೆಯಿಂದ 1953 ಜನವರಿ 14 ರಂದು ನಿವೃತ್ತಿಯಾದರು. ಇಂತಹ ಹಿರಿಯ ಯೋಧರನ್ನು ಗೌರವಿಸುವ ಸಲುವಾಗಿ ಜನವರಿ 14ರಂದು ಹಿರಿಯ ಯೋಧರ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಇಂದು ದೇಶದಾದ್ಯಂತ ವಿವಿಧ ನಗರಗಳಲ್ಲಿ ಅಂದು ನಿವೃತ್ತ ಯೋಧರ ಸಭೆಗಳು ನಡೆಯುತ್ತವೆ.
ಪ್ರತಿ ವರ್ಷ ನಿವೃತ್ತಿಯಾಗುವ ಸೈನಿಕರ ಎಷ್ಟು?: ದೇಶದಲ್ಲಿ ಅಂದಾಜು 25 ಲಕ್ಷ ಮಾಜಿ ಸೈನಿಕರಿದ್ದಾರೆ (ನಾಲ್ಕು ಲಕ್ಷ ಮೃತ ಸೈನಿಕರ ಪತ್ನಿಯರು ಸೇರಿದಂತೆ). ವಾರ್ಷಿಕವಾಗಿ ಸುಮಾರು 60 ಸಾವಿರ ಯೋಧರು ನಿವೃತ್ತಿಯಾಗುತ್ತಿದ್ದಾರೆ.
ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ: 2015 ನವೆಂಬರ್ 7 ರಂದು ಒಂದು ಶ್ರೇಣಿ, ಒಂದು ಪಿಂಚಣಿ ಅನ್ನು ಜಾರಿಗೆ ತರಲಾಯಿತು. ಇದು ನಮ್ಮ ರಾಷ್ಟ್ರವನ್ನು ರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಯೋಧರು ಮತ್ತು ಮಾಜಿ ಸೇನಾ ಸಿಬ್ಬಂದಿಯ ಧೈರ್ಯ ಮತ್ತು ತ್ಯಾಗಗಳಿಗೆ ಗೌರವವನ್ನು ಸೂಚಿಸುತ್ತದೆ.