ಏಲೂರು(ಆಂಧ್ರ ಪ್ರದೇಶ):ಇಲ್ಲಿನ ದ್ವಾರಕಾತಿರುಮಲ ತಾಲೂಕಿನ ಲಕ್ಷ್ಮೀನಗರದಲ್ಲಿ ನಿಂತಿದ್ದ ಕಂಟೈನರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತದೇಹಗಳನ್ನು ಕಾರಿನಿಂದ ಹೊರತೆಗೆಯಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟರು.
ಅಪಘಾತಕ್ಕೆ ಕಾರಣವಾದ ಕಾರು ನಲ್ಲಜರ್ಲದಿಂದ ರಾಜಮಹೇಂದ್ರವರಂ ಕಡೆಗೆ ಸಂಚರಿಸುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.