ಕರ್ನಾಟಕ

karnataka

ETV Bharat / bharat

ಈ ವಿಶ್ವವಿದ್ಯಾಲಯದಲ್ಲಿದೆ 700 ವರ್ಷಗಳಷ್ಟು ಹಳೆಯ ಆಯುರ್ವೇದ ಪಠ್ಯ: ತುಳು, ಪ್ರಾಚೀನ ಕನ್ನಡದಲ್ಲೂ ಲಭ್ಯ - 700 YEARS OLD AYURVEDIC TEXTS

ಜೈಪುರದ ನ್ಯಾಷನಲ್​ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ವಿಶ್ವವಿದ್ಯಾಲಯದಲ್ಲಿ 100 ರಿಂದ 700 ವರ್ಷಗಳಷ್ಟು ಹಳೆಯದಾದ ಆಯುರ್ವೇದ ಪಠ್ಯಗಳನ್ನು ಡಿಜಿಟಲ್​ ರೂಪದಲ್ಲಿ ಸಂರಕ್ಷಿಸಲಾಗುತ್ತಿದೆ.

AYURVEDIC TEXTS ARE BEING DIGITALLY PRESERVED AT THE NATIONAL INSTITUTE OF AYURVEDA, JAIPUR
ಈ ವಿಶ್ವವಿದ್ಯಾಲಯದಲ್ಲಿದೆ 700 ವರ್ಷಗಳಷ್ಟು ಹಳೆಯ ಆಯುರ್ವೇದ ಪಠ್ಯ: ತುಳು, ಪ್ರಾಚೀನ ಕನ್ನಡದಲ್ಲೂ ಲಭ್ಯ (ETV Bharat)

By ETV Bharat Karnataka Team

Published : Feb 7, 2025, 2:29 PM IST

ಜೈಪುರ(ರಾಜಸ್ಥಾನ):ಜೈಪುರದ ಜೋರಾವರ್​ ಸಿಂಗ್​ ಗೇಟ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ವಿಶ್ವವಿದ್ಯಾಲಯವು ಸುಮಾರು 100 ರಿಂದ 700 ವರ್ಷಗಳಷ್ಟು ಹಳೆಯದಾದ ಆಯುರ್ವೇದ ಗ್ರಂಥಗಳನ್ನು ಸಂರಕ್ಷಿಸುತ್ತಿದೆ. ಇದರ ಮೂಲಕ ಜನರಿಗೆ ಚಿಕಿತ್ಸೆ ನೀಡುತ್ತಿದೆ. ವಿಶೇಷವೆಂದರೆ ಔಷದೀಯ ಬಗೆಗಿನ ಬರಹ, ಪಠ್ಯಗಳನ್ನು ಭದ್ರಪಡಿಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಜೈಪುರದ ಈ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯು ದೇಶದ ಏಕೈಕ ಹಸ್ತಪ್ರತಿ ಘಟಕವನ್ನು ಹೊಂದಿದೆ. ಈ ಹಸ್ತಪ್ರತಿ ಶಾರದ ಲಿಪಿ, ದೇವನಾಗರಿ, ತುಳು, ಪ್ರಾಚೀನ ಕನ್ನಡ, ಬಂಗಾಳಿ, ಒರಿಯಾ, ಅಸ್ಸಾಮಿ, ಮಲಯಾಳಂ, ಇತ್ಯಾದಿ ಆಯುರ್ವೇದ ಪಠ್ಯಗಳನ್ನು ಒಳಗೊಂಡಿದೆ.

ಈ ವಿಶ್ವವಿದ್ಯಾಲಯದಲ್ಲಿದೆ 700 ವರ್ಷಗಳಷ್ಟು ಹಳೆಯ ಆಯುರ್ವೇದ ಪಠ್ಯ: ತುಳು, ಪ್ರಾಚೀನ ಕನ್ನಡದಲ್ಲೂ ಲಭ್ಯ (ETV Bharat)

ಪುರಾತನ ಗ್ರಂಥಗಳ ಸಂರಕ್ಷಣೆ:ಈ ಪುರಾತನ ಗ್ರಂಥಗಳನ್ನು ಸಂರಕ್ಷಿಸುತ್ತಿರುವ ರಾಷ್ಟ್ರೀಯ ಆಯುರ್ವೇದ ಸಂಸ್ಥೆಯ ಪ್ರಾಧ್ಯಾಪಕ ಅಸಿತ್ ಕುಮಾರ್ ಪಂಜ ಮಾತನಾಡಿ, "ಆಯುರ್ವೇದಕ್ಕೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗುತ್ತಿದೆ. ನಶಿಸಲ್ಪಟ್ಟ ಮತ್ತು ಗಲೀಜಾಗಿರುವ ಬರಹಗಳ ಕಾಗದವನ್ನು ಸ್ವಚ್ಛಗೊಳಿಸಿ ಸರಿಪಡಿಸುವುದಲ್ಲದೇ, ಅವುಗಳನ್ನು ಸಂಪೂರ್ಣವಾಗಿ ಸಂರಕ್ಷಿಸಲಾಗುತ್ತಿದೆ. ಪತ್ರಿಕೆಯನ್ನು ಪರಿಶೀಲಿಸಲು ಲ್ಯಾಬ್ ಮತ್ತು ಚಿಕಿತ್ಸಾ ಸೌಲಭ್ಯಗಳು ಸಹ ಸಂಸ್ಥೆಯ ವಿಭಾಗದಲ್ಲಿ ಲಭ್ಯವಿದೆ. ನಮ್ಮ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಎಲ್ಲಾ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಇದೆ ಎಂದು ಹೇಳುತ್ತಾರೆ.

ನಶಿಸುತ್ತಿರುವ ಪಠ್ಯಗಳನ್ನ ಹುಡುಕಿ ರಕ್ಷಣೆ ಮಾಡಲಾಗುತ್ತಿದೆ;ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಆಯುರ್ವೇದದ ಈ ಔಷಧಿಗಳ ಜ್ಞಾನದ ಕೊರತೆಯಿಂದಾಗಿ ಅಳಿವಿನಂಚಿಗೆ ಬಂದಿದೆ. ಸದ್ಯ ನಮ್ಮಲ್ಲಿ ಪುರಾತನ ಗ್ರಂಥಗಳನ್ನು ರಕ್ಷಿಸಲಾಗುತ್ತಿದ್ದು ಅದರಲ್ಲಿನ ಪುರಾತನ ಆಯುರ್ವೇದದ ವಿಧಿವಿಧಾನಗಳ ಬಗ್ಗೆ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿದೆ" ಎಂದು ಪ್ರಾಧ್ಯಾಪಕ ಅಸಿತ್ ಕುಮಾರ್ ಪಂಜ ತಿಳಿಸಿದ್ದಾರೆ.

ಈ ಪಠ್ಯ ಸಂರಕ್ಷಣೆ ಮಾಡುತ್ತಿರುವುದು ಹೇಗೆ ಗೊತ್ತಾ?:ಪ್ರಾಧ್ಯಾಪಕ ಅಸಿತ್ ಕುಮಾರ್​ ಅವರು ಹೇಳುವ ಪ್ರಕಾರ ಹಳೆಯ ಪಠ್ಯಗಳನ್ನು ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ಹಾರ್ಡ್ ಡಿಸ್ಕ್ ಮತ್ತು ಕ್ಲೌಡ್​ನಲ್ಲಿ ಉಳಿಸಲಾಗುತ್ತಿದೆ. ಈ ಹಿಂದೆ ಹಾಳಾಗಿರುವ ಕಾಗದದಲ್ಲಿನ ಪಠ್ಯಗಳ ಪುಟಗಳನ್ನು ವಿಶೇಷ ರಾಸಾಯನಿಕಗಳನ್ನು ಬಳಸಿ ಸರಿ ಮಾಡಲಾಗುತ್ತಿದ್ದು. ಇದರಿಂದ ಕಾಗದದಲ್ಲಿದ ತೇವಾಂಶವನ್ನು ತೆಗೆಯಬಹುದಾಗಿದೆ. ಅಲ್ಲದೆ ಪಠ್ಯವನ್ನು ತೇವಾಂಶ ಮತ್ತು ಕೀಟಗಳಿಂದ ರಕ್ಷಿಸಲು ವಿಶೇಷ ರೀತಿಯ ಕಾರ್ಡ್ಬೋರ್ಡ್ ಅನ್ನು ಬಳಸಲಾಗುತ್ತದೆ. ಇದರ ನಂತರ, ಪಠ್ಯವನ್ನು ಹತ್ತಿ ಬಟ್ಟೆಯಲ್ಲಿ ಸುತ್ತುವ ಮೂಲಕ ಪೆಟ್ಟಿಗೆಯಲ್ಲಿ ಸಂರಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಮಗನ ಮದುವೆಗೆ ಪರಿಸರ ಸ್ನೇಹಿ ಆಮಂತ್ರಣ: ವೈದ್ಯ ದಂಪತಿಯ ಹೊಸ ಆಲೋಚನೆಗೆ ಭಾರಿ ಮೆಚ್ಚುಗೆ

ABOUT THE AUTHOR

...view details