ಕರ್ನಾಟಕ

karnataka

ETV Bharat / bharat

ದೆಹಲಿ ಚುನಾವಣೆ: ಮೂರನೇ ಸಂಕಲ್ಪ ಪತ್ರ ಬಿಡುಗಡೆ ಮಾಡಿದ ಬಿಜೆಪಿ, ಭರ್ಜರಿ ಭರವಸೆಗಳ ಘೋಷಣೆ - DELHI BJP MANIFESTO

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಸಂಕಲ್ಪ ಪತ್ರ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿತು.

ಕೇಂದ್ರ ಗೃಹ ಸಚಿವ ಅಮಿತ್​ ಶಾ
ಕೇಂದ್ರ ಗೃಹ ಸಚಿವ ಅಮಿತ್​ ಶಾ (PTI)

By ETV Bharat Karnataka Team

Published : Jan 25, 2025, 7:36 PM IST

ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಶನಿವಾರ ತನ್ನ ಸಂಪೂರ್ಣ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಸಂಕಲ್ಪ ಪತ್ರದ ಮೂರನೇ ಮತ್ತು ಅಂತಿಮ ಭಾಗವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಕಟ ಮಾಡಿದರು.

ಬಳಿಕ ಮಾತನಾಡಿದ ಅವರು, 2014ರಿಂದ ಪ್ರಧಾನಿ ಮೋದಿ ದೇಶದ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ. ಪ್ರತಿಯೊಬ್ಬರ ಅಭಿಪ್ರಾಯದ ಮೇರೆಗೆ ಬಿಜೆಪಿ ಪ್ರಣಾಳಿಕೆ ರೂಪಿಸಿದೆ. ಇದಕ್ಕಾಗಿ ಒಂದು ಲಕ್ಷ ಎಂಟು ಸಾವಿರ ಜನರಿಂದ ಸಲಹೆ ಪಡೆಯಲಾಗಿದೆ. ಮೊದಲು ಎರಡು ಹಂತದಲ್ಲಿ ಭರವಸೆಗಳನ್ನು ನೀಡಲಾಗಿತ್ತು. ಇದೀಗ ಕೊನೆಯ ಮತ್ತು ಮೂರನೇ ಆಶ್ವಾಸನೆಗಳ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದರು.

ಕೇಜ್ರಿವಾಲ್​ ವಿರುದ್ಧ ಟೀಕೆ:ಪ್ರಣಾಳಿಕೆ ಬಿಡುಗಡೆಗೂ ಮುನ್ನ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ ಅವರು, ನನ್ನ ರಾಜಕೀಯ ಜೀವನದಲ್ಲಿ ಕೇಜ್ರಿವಾಲ್ ಅವರಂತಹ ಸುಳ್ಳು ಭರವಸೆಗಳನ್ನು ನೀಡುವ ವ್ಯಕ್ತಿಯನ್ನು ನಾನು ನೋಡಿಲ್ಲ. ಆಪ್​ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸುವುದಿಲ್ಲ. ನಾನು ಮತ್ತು ನನ್ನ ಸಚಿವರು ಸರ್ಕಾರಿ ಬಂಗಲೆ ಬಳಸುವುದಿಲ್ಲ ಎಂದಿದ್ದರು. 10 ವರ್ಷಗಳಿಂದ ಸರ್ಕಾರಿ ಬಂಗಲೆಯನ್ನು 51 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಿ ಐಷಾರಾಮಿ ಜೀವನ ನಡೆಸಿದರು ಎಂದು ಆರೋಪಿಸಿದರು.

ಪ್ರಣಾಳಿಕೆಯಲ್ಲಿನ ಭರವಸೆಗಳಿವು

  • 1700 ಕಾಲೊನಿಗಳನ್ನು ಸಕ್ರಮಗೊಳಿಸಿ, ಅಲ್ಲಿ ಮನೆಗಳ ನಿರ್ಮಾಣ ಮತ್ತು ಮಾರಾಟಕ್ಕೆ ಕಾನೂನು ಪ್ರಕಾರ ಅವಕಾಶ.
  • ರಾಜೇಂದ್ರ ನಗರ ಸೇರಿ ಹಲವೆಡೆ ನಿರಾಶ್ರಿತರಿಗೆ ನೆಲೆಸಲು ಅವಕಾಶ. ಮನೆ ನಿರ್ಮಾಣ ಮತ್ತು ಮಾರಾಟಕ್ಕೆ ಹಕ್ಕುಪತ್ರ ವಿತರಣೆ.
  • ಕಾರ್ಮಿಕರಿಗೆ 5 ಲಕ್ಷ ರೂಪಾಯಿ ವಿಮೆ
  • ದೆಹಲಿಯ 50 ಸಾವಿರ ಯುವಕರಿಗೆ ಸರ್ಕಾರಿ ಉದ್ಯೋಗ
  • ಸಬರಮತಿ ನದಿ ದಂಡೆಯ ಮಾದರಿಯಲ್ಲಿ ಯಮುನಾ ನದಿ ದಂಡೆ ಅಭಿವೃದ್ಧಿ

ಎರಡನೇ ಪ್ರಣಾಳಿಕೆ

  • ಸರ್ಕಾರಿ ಬಸ್​ಗಳು, ಮೊಹಲ್ಲಾ ಕ್ಲಿನಿಕ್, ಶಾಲೆ, ಜಲಮಂಡಳಿ ಇತ್ಯಾದಿಗಳಲ್ಲಿನ ಹಗರಣಗಳ ತನಿಖೆಗೆ ಎಸ್‌ಐಟಿ ರಚನೆ
  • ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ
  • ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ 15,000 ರೂಪಾಯಿ ಸಹಾಯಧನ
  • ಐಟಿಐ, ಪಾಲಿಟೆಕ್ನಿಕ್​​ ಅಧ್ಯಯನ ಮಾಡಲು ಎಸ್‌ಸಿ ವಿದ್ಯಾರ್ಥಿಗಳಿಗೆ ₹1,000 ಮಾಸಿಕ ಸ್ಟೈಫಂಡ್.
  • ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕಲ್ಯಾಣ ಮಂಡಳಿ, ₹10 ಲಕ್ಷದವರೆಗೆ ಜೀವ ವಿಮೆ ಮತ್ತು ₹5 ಲಕ್ಷದವರೆಗೆ ಅಪಘಾತ ವಿಮೆ.
  • ಅವರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನಗಳು, ಸಬ್ಸಿಡಿ ವಾಹನ ವಿಮೆ.
  • ಮನೆಕೆಲಸಗಾರರಿಗೆ ಅಭಿವೃದ್ಧಿ ಮಂಡಳಿ, ₹10 ಲಕ್ಷ ಜೀವ ವಿಮೆ ಮತ್ತು ₹5 ಲಕ್ಷ ಅಪಘಾತ ವಿಮೆ. ಮಕ್ಕಳಿಗೆ ವಿದ್ಯಾರ್ಥಿವೇತನ, 6 ತಿಂಗಳು ವೇತನ ಸಹಿತ ಹೆರಿಗೆ ರಜೆ.

ಮೊದಲ ಪ್ರಣಾಳಿಕೆ

  • ಮಹಿಳಾ ಸಮೃದ್ಧಿ ಯೋಜನೆಯಡಿ ಬಡ ಮಹಿಳೆಯರಿಗೆ ಮಾಸಿಕ ₹2,500 ಸಹಾಯಧನ.
  • ಮುಖ್ಯಮಂತ್ರಿ ಮಾತೃತ್ವ ರಕ್ಷಣಾ ಯೋಜನೆಯಡಿ ಗರ್ಭಿಣಿಯರಿಗೆ ₹21,000 ಆರ್ಥಿಕ ನೆರವು ಮತ್ತು 6 ಪೌಷ್ಟಿಕಾಂಶ ಕಿಟ್‌ ವಿತರಣೆ
  • 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಮತ್ತು ಹೋಳಿ-ದೀಪಾವಳಿಯಂದು ಉಚಿತ ಸಿಲಿಂಡರ್.
  • ಆಯುಷ್ಮಾನ್ ಭಾರತ್ ಯೋಜನೆಯಡಿ ₹10 ಲಕ್ಷದವರೆಗೆ ಉಚಿತ ಚಿಕಿತ್ಸೆ.
  • 60-70 ವರ್ಷ ವಯಸ್ಸಿನ ನಾಗರಿಕರಿಗೆ ₹2,500 ಮಾಸಿಕ ಪಿಂಚಣಿ.
  • 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕ ₹3,000 ಪಿಂಚಣಿ.
  • ಕೊಳೆಗೇರಿಗಳಲ್ಲಿನ ಅಟಲ್ ಕ್ಯಾಂಟೀನ್‌ನಿಂದ ₹5 ಗೆ ಪೌಷ್ಟಿಕ ಆಹಾರ.

ಇದನ್ನೂ ಓದಿ:ದೆಹಲಿ ಬಿಜೆಪಿಯಿಂದಲೂ ಭರ್ಜರಿ ಘೋಷಣೆ: ಮಹಿಳೆಯರಿಗೆ ಮಾಸಿಕ 2500 ರೂ, ಸಿಲಿಂಡರ್​​ಗೆ 500 ರೂ ಸಬ್ಸಿಡಿ​​​ ನೀಡೋ ಭರವಸೆ

ABOUT THE AUTHOR

...view details