ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ತನ್ನ ಪ್ರಣಾಳಿಕೆ ಪ್ರಕಟಿಸಿದೆ. ವಿದ್ಯಾರ್ಥಿಗಳು ಮತ್ತು ಮಹಿಳೆಯರ ಹಿತಾಸಕ್ತಿಗಳನ್ನು ಗುರಿಯಾಗಿಟ್ಟುಕೊಂಡು ಎಎಪಿ ಭರವಸೆಗಳ ಸುರಿಮಳೆಯನ್ನೇ ಹರಿಸಿದೆ . ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ 15 ಭರವಸೆಗಳನ್ನು ಘೋಷಿಸಲಾಗಿದ್ದು, ತಮ್ಮ ಸರ್ಕಾರ ರಚನೆಯಾದರೆ ಈ ಭರವಸೆಗಳನ್ನು ಈಡೇರಿಸುವುದಾಗಿ ಅವರು ಹೇಳಿದ್ದಾರೆ.
ಮೂಲ ಸೌಕರ್ಯ ಸಮಸ್ಯೆ ಬಗೆಹರಿಸುವ ವಾಗ್ದಾನ: ಮಹಿಳೆಯರು, ಯುವಕರು, ವೃದ್ಧರು, ಬಡವರು ಸೇರಿದಂತೆ ವಿವಿಧ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಎಎಪಿ ಈ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ ಎಂದು ವೇದಿಕೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಕೇಜ್ರಿವಾಲ್ ಅವರು ಖಾತರಿ ಪತ್ರಕ್ಕೆ ಸಹಿ ಹಾಕಿದರು.
#WATCH दिल्ली विधानसभा चुनाव से पहले AAP ने महिलाओं के लिए 2,100 रुपये और छात्रों के लिए मुफ्त बस यात्रा समेत 15 चुनावी गारंटी जारी की। pic.twitter.com/kp9FH0CCDU
— ANI_HindiNews (@AHindinews) January 27, 2025
ದೆಹಲಿಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮತ್ತು ಮೂಲಸೌಕರ್ಯ ಸಮಸ್ಯೆ ಪರಿಹರಿಸುವ ಗುರಿ ಹೊಂದಲಾಗಿದ್ದು, ಅಭಿವೃದ್ಧಿಗಾಗಿ ಗ್ಯಾರಂಟಿ ಎಂಬ ಪದ ಕೂಡ ಬಳಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನಾವು 15 ಗ್ಯಾರಂಟಿಗಳನ್ನು ನೀಡಲಿದ್ದೇವೆ ಎಂದು ಅವರು ಹೇಳಿದರು. ಎಎಪಿ ಅಧಿಕಾರದಲ್ಲಿದ್ದರೆ, ಉಚಿತ ಶಿಕ್ಷಣ, ಆರೋಗ್ಯ, ರಕ್ಷಣೆ, ಮಹಿಳೆಯರಿಗೆ ಬಸ್ ಪ್ರಯಾಣ, ಸಬ್ಸಿಡಿ ವಿದ್ಯುತ್, ನೀರು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳು ಸೇರಿದಂತೆ ಆರು ಕಲ್ಯಾಣ ಯೋಜನೆಗಳು ಮುಂದುವರಿಯಲಿವೆ ಎಂದೂ ಸಹ ಕೇಜ್ರಿವಾಲ್ ಈ ಸಂದರ್ಭದಲ್ಲಿ ತಿಳಿಸಿದರು.
#WATCH AAP के राष्ट्रीय संयोजक अरविंद केजरीवाल ने कहा, " भाजपा, कांग्रेस या दूसरी पार्टियां चुनाव में जो भी घोषणाएं करती हैं वो चुनावी जुमले होते हैं...हमने गारंटी शब्द इस्तेमाल करना शुरू किया तो इन्होंने भी गारंटी शब्द इस्तेमाल करना शुरू कर दिया। गारंटी शब्द को भी इन्होंने बर्बाद… pic.twitter.com/TKqkHTYFo0
— ANI_HindiNews (@AHindinews) January 27, 2025
ಉದ್ಯೋಗ ಖಾತರಿ: ಪ್ರಣಾಳಿಕೆಯ ಮೊದಲ ಭರವಸೆ ದೆಹಲಿ ನಿವಾಸಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿದೆ. ನಗರದಾದ್ಯಂತ ನಿರುದ್ಯೋಗ ಪರಿಹರಿಸುವುದು ನಮ್ಮ ಮೊದಲ ಗುರಿ. ಕೇಂದ್ರ ಸರ್ಕಾರದ ಅಂಕಿ - ಅಂಶಗಳ ಪ್ರಕಾರ, ದೆಹಲಿಯಲ್ಲಿ ನಿರುದ್ಯೋಗ ಪ್ರಮಾಣ ಅತ್ಯಂತ ಕಡಿಮೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿಸುವುದು ನಮ್ಮ ಮೊದಲ ಕೆಲಸ. ದೆಹಲಿಯಲ್ಲಿ ಒಬ್ಬ ವ್ಯಕ್ತಿಯೂ ನಿರುದ್ಯೋಗಿಯಾಗಿರಬಾರದು. ನಮ್ಮ ಮಕ್ಕಳು ಓದು ಮುಗಿಸಿ ಕೆಲಸವಿಲ್ಲದೇ ಮನೆಯಲ್ಲಿಯೇ ಕುಳಿತುಕೊಂಡರೆ ಅದರಂತಹ ಕೆಟ್ಟ ಪರಿಸ್ಥಿತಿ ಮತ್ತೊಂದಿಲ್ಲ. ದೆಹಲಿಯ ಜನರೇ ನನ್ನ ಕುಟುಂಬ. ಓದು ಮುಗಿಸಿದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ವಿಷಯ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ದೆಹಲಿಯ ಪ್ರತಿಯೊಂದು ಮಗುವಿಗೂ ಉದ್ಯೋಗ ನೀಡುವ ಬಗ್ಗೆ ಸತ್ಯೇಂದ್ರ ಜೈನ್ ಸಂಪೂರ್ಣ ಯೋಜನೆ ರೂಪಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.
#WATCH दिल्ली: ग्रेटर कैलाश विधानसभा सीट से AAP उम्मीदवार सौरभ भारद्वाज ने कहा, " ...हमारी 15 गारंटियों में से 3 गारंटियां पुरानी हैं जो पूरी नहीं हो पाई इसलिए उनको पूरा किया जाना है।" pic.twitter.com/99l1SHLeiO
— ANI_HindiNews (@AHindinews) January 27, 2025
ಈ ಮೊದಲು ಪ್ರತಿ ಮನೆಗೆ 24 ಗಂಟೆ ಶುದ್ಧ ನೀರಿನ ವ್ಯವಸ್ಥೆ, ಯಮುನಾ ನದಿ ಸ್ವಚ್ಛತೆ, ದೆಹಲಿಯ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದ್ದೆವು. ಆದರೆ, ಕಳೆದ ಐದು ವರ್ಷಗಳಲ್ಲಿ ಅಂದುಕೊಂಡಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ ಅರವಿಂದ್ ಕೇಜ್ರಿವಾಲ್, ಈ ಬಾರಿ ನಾವು ದೇಶದಲ್ಲಿ ಮೊದಲು ‘ಗ್ಯಾರಂಟಿ’ ಎಂಬ ಪದವನ್ನು ರಚಿಸಿದ್ದೇವೆ. ನಮ್ಮ ನಂತರ ಬಿಜೆಪಿ ಅದನ್ನು ಕದ್ದಿದೆ. ವ್ಯತ್ಯಾಸ ಎಂದರೆ ನಾವು ನಮ್ಮ ಭರವಸೆಗಳನ್ನು ಪೂರೈಸುತ್ತೇವೆ. ಆದರೆ, ಅವರು ಮಾಡುತ್ತಿಲ್ಲ ಎಂದು ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ ಹೇಳಿದರು.
#WATCH | Aam Aadmi Party releases 15 poll guarantees including Rs 2,100 for women and free bus rides to students, ahead of Delhi Assembly elections pic.twitter.com/vPvUNKYJ0h
— ANI (@ANI) January 27, 2025
ಎಎಪಿ ಪ್ರಣಾಳಿಕೆಯಲ್ಲಿನ ಭರವಸೆಗಳು:
- ಉದ್ಯೋಗದ ಖಾತರಿ (ದೆಹಲಿಯ ಪ್ರತಿಯೊಬ್ಬ ಯುವಕರಿಗೆ ಉದ್ಯೋಗ ನೀಡುವುದು)
- ಮಹಿಳಾ ಸಮ್ಮಾನ್ ಯೋಜನೆ (ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂಪಾಯಿ ಗೌರವ ಧನ ನೀಡುವುದು)
- ಹಿರಿಯ ನಾಗರಿಕರಿಗೆ ಸಂಜೀವಿನಿ ಯೋಜನೆ (ಯೋವೃದ್ಧರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ)
- ತಪ್ಪು ನೀರಿನ ಬಿಲ್ ಮನ್ನಾ ನಾಲ್ಕನೇ ಗ್ಯಾರಂಟಿ (ನೀರಿನ ತಪ್ಪು ಬಿಲ್ ಮನ್ನಾ ಮಾಡುವುದು)
- ಪ್ರತಿ ಮನೆಗೆ ಶುದ್ಧ ನೀರಿನ ಖಾತರಿ (ದೆಹಲಿಯ ಎಲ್ಲ ಮನೆಗಳಿಗೆ 24x7 ಶುದ್ಧ ಕುಡಿಯುವ ನೀರನ್ನು ಒದಗಿಸುವುದು)
- ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಭರವಸೆ
- ದೆಹಲಿ ರಸ್ತೆಗಳನ್ನು ಸುಂದರಗೊಳಿಸುವ ಭರವಸೆ (ದೆಹಲಿಯ ರಸ್ತೆಗಳನ್ನು ಯುರೋಪಿಯನ್ ಗುಣಮಟ್ಟದಿಂದ ಮಾಡಲಾಗುವುದು)
- ದಲಿತ ವಿದ್ಯಾರ್ಥಿಗಳಿಗಾಗಿ ಡಾ. ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆ (ದಲಿತ ವರ್ಗದ ಮಕ್ಕಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುವುದು)
- ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋದಲ್ಲಿ ಶೇ50 ರಷ್ಟು ರಿಯಾಯಿತಿ
- ಪೂಜಾರಿ ಗ್ರಂಥಿ ಯೋಜನೆ (ಈ ಯೋಜನೆಯಡಿ ದೇವಸ್ಥಾನಗಳ ಅರ್ಚಕರು ಮತ್ತು ಗುರುದ್ವಾರದ ಅರ್ಚಕರಿಗೆ 18,000 ರೂ.ಗಳ ಗೌರವಧನ ನೀಡುವುದು)
- ಬಾಡಿಗೆದಾರರಿಗೂ ಉಚಿತ ವಿದ್ಯುತ್ ಮತ್ತು ನೀರು ಖಾತ್ರಿ
- ಒಳಚರಂಡಿ ಉಕ್ಕಿ ಹರಿಯುವ ಸಮಸ್ಯೆಯನ್ನು ಪರಿಹರಿಸಲಾಗುವುದು ಮತ್ತು ಹಳೆಯ ಮಾರ್ಗಗಳನ್ನು ಬದಲಾಯಿಸಲಾಗುವುದು.
- ಹೊಸ ಪಡಿತರ ಚೀಟಿಗಳನ್ನು ನೀಡಲಾಗುವುದು.
- ಆಟೋ-ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರ ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು. 10 ಲಕ್ಷ ರೂಪಾಯಿಗಳ ಆರೋಗ್ಯ ಮತ್ತು ಜೀವ ವಿಮೆ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣದ ಖಾತರಿ.
- ದೆಹಲಿಯ ಎಲ್ಲ ಆರ್‌ಡಬ್ಲ್ಯೂಎಗಳಿಗೆ ಖಾಸಗಿ ಕಾವಲುಗಾರರನ್ನು ನೇಮಿಸಿಕೊಳ್ಳಲು ಹಣ ನೀಡಲಾಗುವುದು.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ; ಯುಸಿಸಿ ಪೋರ್ಟ್ಲ್ ಉದ್ಘಾಟಿಸಿದ ಸಿಎಂ ಧಾಮಿ - UNIFORM CIVIL CODE