ETV Bharat / bharat

Fact Check - ಪೇಪರ್ ಕರೆನ್ಸಿ ಬದಲಿಗೆ ಡಿಜಿಟಲ್ ಕರೆನ್ಸಿ ಜಾರಿಯಾಗಲಿದೆಯಾ?: ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯ್ತು ಸತ್ಯ - DIGITAL CURRENCY FACT CHECK

ಫ್ಯಾಕ್ಟ್ ಚೆಕ್: ಭಾರತ ಸರ್ಕಾರವು ಫೆಬ್ರವರಿ 1 ರಿಂದ ಪೇಪರ್ ಕರೆನ್ಸಿಯ ಬಳಕೆಯನ್ನು ನಿಷೇಧಿಸಿದ್ದು, ಡಿಜಿಟಲ್ ಕರೆನ್ಸಿ ಮಾತ್ರ ಚಲಾವಣೆಯಲ್ಲಿರಲಿದೆ ಎಂಬುದು ಸತ್ಯವೇ?

ಫ್ಯಾಕ್ಟ್ ಚೆಕ್: ಪೇಪರ್ ಕರೆನ್ಸಿ ಬದಲಿಗೆ ಡಿಜಿಟಲ್ ಕರೆನ್ಸಿ ಜಾರಿಯಾಗಲಿದೆಯಾ?
ಫ್ಯಾಕ್ಟ್ ಚೆಕ್: ಪೇಪರ್ ಕರೆನ್ಸಿ ಬದಲಿಗೆ ಡಿಜಿಟಲ್ ಕರೆನ್ಸಿ ಜಾರಿಯಾಗಲಿದೆಯಾ? (ನ್ಯೂಸ್ ಮೀಟರ್)
author img

By ETV Bharat Karnataka Team

Published : Jan 27, 2025, 5:23 PM IST

2025 ರ ಫೆಬ್ರವರಿಯಿಂದ ಭಾರತದಲ್ಲಿ ಪೇಪರ್ ಕರೆನ್ಸಿ ನೋಟುಗಳನ್ನು ನಿಷೇಧಿಸಿ, ಕೇವಲ ಡಿಜಿಟಲ್ ಕರೆನ್ಸಿಯನ್ನು ಮಾತ್ರ ಚಲಾವಣೆಗೆ ತರಲಾಗುವುದು ಎಂಬ ಹೇಳಿಕೆಗಳನ್ನು ನ್ಯೂಸ್ ಮೀಟರ್ ತಳ್ಳಿ ಹಾಕಿದೆ. ಈ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕ್ಲಿಪಿಂಗ್​ಗಳು ವಿದ್ಯಾರ್ಥಿ ಸಮ್ಮೇಳನವೊಂದರ ಜಾಹೀರಾತುಗಳು ಮಾತ್ರ ಎಂದು ಅದು ಹೇಳಿದೆ.

ಫೆಬ್ರವರಿ 1 ರಿಂದ ಪೇಪರ್ ಕರೆನ್ಸಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಮತ್ತು ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರಲಾಗುವುದು ಎಂದು ಕೇರಳ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿರುವುದಾಗಿ ಹೇಳಿ, ಈ ಕ್ಲಿಪಿಂಗ್​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಫ್ಯಾಕ್ಟ್ ಚೆಕ್: ಪೇಪರ್ ಕರೆನ್ಸಿ ಬದಲಿಗೆ ಡಿಜಿಟಲ್ ಕರೆನ್ಸಿ ಜಾರಿಯಾಗಲಿದೆಯಾ?
ಫ್ಯಾಕ್ಟ್ ಚೆಕ್: ಪೇಪರ್ ಕರೆನ್ಸಿ ಬದಲಿಗೆ ಡಿಜಿಟಲ್ ಕರೆನ್ಸಿ ಜಾರಿಯಾಗಲಿದೆಯಾ? (ನ್ಯೂಸ್ ಮೀಟರ್)

ಪ್ರತಿಪಾದಿಸಲಾಗುತ್ತಿರುವುದು: ಫೆಬ್ರವರಿ 2025 ರಿಂದ ಭಾರತದಲ್ಲಿ ಪೇಪರ್ ಕರೆನ್ಸಿಯನ್ನು ಸಂಪೂರ್ಣವಾಗಿ ಅಮಾನ್ಯಗೊಳಿಸಲಾಗುವುದು ಮತ್ತು ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲಾಗುವುದು.

ಸತ್ಯವೇನು?: ಈ ಹೇಳಿಕೆ ಸುಳ್ಳು. ಕೇರಳದ ವಿವಿಧ ಪತ್ರಿಕೆಗಳು ಪ್ರಕಟಿಸಿದ ವೈರಲ್ ಪೇಪರ್ ಕ್ಲಿಪ್ಪಿಂಗ್ ಗಳು ಕೊಚ್ಚಿಯಲ್ಲಿ ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಆಯೋಜಿಸಿರುವ ವಿದ್ಯಾರ್ಥಿ ಶೃಂಗಸಭೆಯ ಜಾಹೀರಾತುಗಳಾಗಿವೆ.

ಹೈದರಾಬಾದ್: ಭಾರತದಲ್ಲಿ ಪೇಪರ್ ಕರೆನ್ಸಿಯನ್ನು ಅಮಾನ್ಯಗೊಳಿಸಿ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲಾಗುವುದು ಎಂದು ಮಲಯಾಳಂ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದಾಗಿ ಆ ವರದಿಗಳ ಕ್ಲಿಪಿಂಗ್​​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬಳಕೆದಾರರೊಬ್ಬರು ಇಂಥದೊಂದು ಕ್ಲಿಪಿಂಗ್ ಅನ್ನು ಪೋಸ್ಟ್ ಮಾಡಿದ್ದು, "ಫೆಬ್ರವರಿ 1 ರಿಂದ ಸರ್ಕಾರ ಪೇಪರ್ ಕರೆನ್ಸಿಯನ್ನು ನಿಷೇಧಿಸುತ್ತಿದೆ ಮತ್ತು ಡಿಜಿಟಲ್ ಕರೆನ್ಸಿ ಮಾತ್ರ ಚಲಾವಣೆಯಲ್ಲಿರಲಿದೆ ಎಂಬ ಸುದ್ದಿಗಳು ಮಲಯಾಳಂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ" ಎಂದು ಬರೆದಿದ್ದಾರೆ. (ಆರ್ಕೈವ್)

ಫೇಸ್ಬುಕ್​​ನಲ್ಲಿ ಮಲಯಾಳಂ ಭಾಷೆಯಲ್ಲಿ ಪ್ರಕಟವಾದ ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. (ಆರ್ಕೈವ್)

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಘೋಷಿಸಿದಂತೆ ಫೆಬ್ರವರಿ 1 ರಿಂದ ಭಾರತದಲ್ಲಿನ ಎಲ್ಲ ವಿತ್ತೀಯ ವಹಿವಾಟುಗಳನ್ನು ಡಿಜಿಟಲ್ ಕರೆನ್ಸಿಯ ಮೂಲಕವೇ ನಡೆಸಲಾಗುವುದು ಎಂದು ವೈರಲ್ ಆಗಿರುವ ಪತ್ರಿಕೆಯ ಕ್ಲಿಪಿಂಗ್​​ಗಳಲ್ಲಿ ಬರೆಯಲಾಗಿದೆ. ಭೌತಿಕ ಕರೆನ್ಸಿಯನ್ನು (ಕಾಗದದ ನೋಟುಗಳು) ಹಂತ ಹಂತವಾಗಿ ಹಿಂತೆಗೆದುಕೊಳ್ಳಲಾಗುವುದು ಮತ್ತು ನಗದು ಹೊಂದಿರುವವರು ತಮ್ಮ ಹಣವನ್ನು ಬ್ಯಾಂಕುಗಳ ಮೂಲಕ ಡಿಜಿಟಲ್ ಕರೆನ್ಸಿಯಾಗಿ ಪರಿವರ್ತಿಸಲು ಫೆಬ್ರವರಿ 15 ರವರೆಗೆ ಅವಕಾಶವಿದೆ. ಈ ಕ್ರಮವು ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಮತ್ತು ಭಾರತೀಯ ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಕ್ರಮವು ದೇಶೀಯ ಮತ್ತು ಅಂತರರಾಷ್ಟ್ರೀಯ ಹಣಕಾಸು ವಹಿವಾಟಿನ ಮೇಲೆ ಸರ್ಕಾರಕ್ಕೆ ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತದೆ ಎಂದು ವರದಿಯಲ್ಲಿ ಬರೆಯಲಾಗಿದೆ.

ಈ ನೀತಿಯು ಭಾರತವನ್ನು ಪ್ರಮುಖ ಜಾಗತಿಕ ಆರ್ಥಿಕ ಶಕ್ತಿಯನ್ನಾಗಿ ಬೆಳೆಸುತ್ತದೆ ಮತ್ತು ಇದು 'ಡಿಜಿಟಲ್ ಇಂಡಿಯಾ' ಉಪಕ್ರಮಕ್ಕೆ ಅನುಗುಣವಾಗಿದೆ ಎಂದು ಕ್ಲಿಪಿಂಗ್​​ಗಳಲ್ಲಿ ಬರೆಯಲಾಗಿದೆ. ಈ ಪರಿವರ್ತನೆಯು ದೇಶದ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಭವಿಷ್ಯದ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

ಫ್ಯಾಕ್ಟ್ ಚೆಕ್: ಈ ಹೇಳಿಕೆ ಸುಳ್ಳು ಎಂದು ನ್ಯೂಸ್ ಮೀಟರ್ ಕಂಡುಕೊಂಡಿದೆ. ವೈರಲ್ ಪೇಪರ್ ಕ್ಲಿಪ್ಪಿಂಗ್​​ಗಳು ಕೇರಳದ ಪತ್ರಿಕೆಗಳಲ್ಲಿ ಪ್ರಕಟವಾದ ಮಾರ್ಕೆಟಿಂಗ್ ಪ್ರಕಟಣೆಗಳಾಗಿವೆ.

ಪತ್ರಿಕೆಗಳ ಕ್ಲಿಪಿಂಗ್​​ಗಳಲ್ಲಿ ಉಲ್ಲೇಖಿಸಲಾದ ಕೆಲವು ಹೆಸರುಗಳು ಈ ಹೇಳಿಕೆಗಳು ನಿಜವೇ ಎಂಬ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ. ಡಾ. ಅರವಿಂದ್ ಕುಮಾರ್ ಆರ್ ಬಿಐ ಗವರ್ನರ್ ಎಂದು, ರಾಜೀವ್ ಸಿಂಗ್ ಕೇಂದ್ರ ಹಣಕಾಸು ಸಚಿವರೆಂದು ಮತ್ತು ಡಾ. ಅಂಜಲಿ ಮೆಹ್ರಾ ಎಂಬುವರು ವಿರೋಧ ಪಕ್ಷದ ನಾಯಕಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಡಾ. ರಿನ್ ಪಟೇಲ್ ಕ್ರಿಪ್ಟೋಕರೆನ್ಸಿಯನ್ನು ಬೆಂಬಲಿಸಿದ್ದಾರೆ ಎಂದು ಕ್ಲಿಪಿಂಗ್​​ನಲ್ಲಿ ಹೇಳಲಾಗಿದೆ. ಆದರೆ, ಈ ಹೆಸರು ಕಾಲ್ಪನಿಕ ಎಂಬುದು ನಮಗೆ ಕಂಡು ಬಂದಿದೆ. ಇದಲ್ಲದೆ, ಪ್ರಧಾನಿಯವರು ಹೇಳಿದ್ದಾರೆ ಎಂದು ಪ್ರತಿಪಾದಿಸಿದ ಹೇಳಿಕೆಗಳ ಸತ್ಯಾಸತ್ಯತೆಯನ್ನು ನಾವು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಕೀವರ್ಡ್ ಸರ್ಚ್ ನಡೆಸಿದಾಗ, ಜನವರಿ 24 ರಂದು ಕೇರಳ ಸಬ್ ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಲಾದ ಮಾತೃಭೂಮಿ ಪತ್ರಿಕೆಯ ಮೊದಲ ಪುಟ ನಮಗೆ ಕಂಡು ಬಂದಿದೆ.

ಕೇರಳದ ರೋಬೋಟ್ ಸಚಿವರ ಮೊದಲ ವಾರ್ಷಿಕೋತ್ಸವ ಮತ್ತು ಭಾರತದಲ್ಲಿ ಪೇಪರ್ ಕರೆನ್ಸಿಗಳ ಬದಲಾಗಿ ಕ್ರಿಪ್ಟೋಕರೆನ್ಸಿಯನ್ನು ಜಾರಿಗೆ ತರಲಾಗುವ ಮೊದಲ ವಾರ್ಷಿಕೋತ್ಸವದಂದು ಮಂಗಳ ಗ್ರಹದಲ್ಲಿ ಅಂತರ್ ಗ್ರಹ ಫುಟ್ಬಾಲ್ ಪಂದ್ಯ ನಡೆಯುವುದರ ಬಗ್ಗೆ ಕಪೋಲಕಲ್ಪಿತ ವರದಿ ಎಂದು ಪೋಸ್ಟ್​ನಲ್ಲಿ ಬಣ್ಣಿಸಲಾಗಿದೆ. ಪೋಸ್ಟ್​ಗೆ ಕಾಮೆಂಟ್ ಮಾಡಿದ ಬಳಕೆದಾರರು, 'ಇದು ಕಾಲ್ಪನಿಕ ಪುಟ' ಎಂದು ಹೇಳಿದ್ದಾರೆ ಮತ್ತು ಹಕ್ಕು ನಿರಾಕರಣೆಯನ್ನು ಸೇರಿಸಲಾಗಿದೆ ಎಂದು ಬರೆದಿದ್ದಾರೆ.

ಈ ಸುಳಿವು ಬಳಸಿಕೊಂಡು, ಜನವರಿ 24 ರಂದು ಪ್ರಕಟವಾದ ಮಾತೃಭೂಮಿ ಮುಖಪುಟದ ಪಿಡಿಎಫ್ ಪ್ರತಿಯನ್ನು ನಾವು ಹುಡುಕಿ ತೆಗೆದೆವು. ನಾವು ಪುಟವನ್ನು ಭಾಷಾಂತರಿಸಿದೆವು. ಆಗ ಮೇಲಿನ ಬಲ ಮೂಲೆಯಲ್ಲಿ ಈ ಲೇಖನಗಳು 'ಮಾರ್ಕೆಟಿಂಗ್ ಪ್ರಕಟಣೆಗಳು' ಎಂದು ಹೇಳುವ ಟಿಪ್ಪಣಿಯು ನಮಗೆ ಕಾಣಿಸಿದೆ.

"ಗಮನಿಸಿ: ಪತ್ರಿಕೆಯಲ್ಲಿ ಪ್ರಸ್ತುತಪಡಿಸಿದ ಮುಖಪುಟ ಸುದ್ದಿ ಕಾಲ್ಪನಿಕವಾಗಿದ್ದು, ಕೊಚ್ಚಿಯ ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಆಯೋಜಿಸಿದ್ದ 'ದಿ ಸಮ್ಮಿಟ್ ಆಫ್ ಫ್ಯೂಚರ್ 2025' ಪ್ರಚಾರ ಅಭಿಯಾನದ ಭಾಗವಾಗಿ ಇದನ್ನು ಪ್ರಕಟಿಸಲಾಗಿದೆ" ಎಂದು ಪುಟದಲ್ಲಿ ಹೇಳಲಾಗಿದೆ.

’ಪತ್ರಿಕೆಗಳ ಮುಖಪುಟ ಹೇಗಿರಬಹುದು ಎಂಬುದರ ಕಾಲ್ಪನಿಕ ಚಿತ್ರಣ’ - "ಇದು 2050 ರಲ್ಲಿ ಪತ್ರಿಕೆಗಳ ಮುಖಪುಟ ಹೇಗಿರಬಹುದು ಎಂಬುದರ ಕಾಲ್ಪನಿಕ ಚಿತ್ರಣವಾಗಿದೆ. ನೈಜ ಘಟನೆಗಳು ಅಥವಾ ವರದಿಗಳಿಗೆ ಯಾವುದೇ ಹೋಲಿಕೆ ಸಂಪೂರ್ಣವಾಗಿ ಕಾಕತಾಳೀಯವಾಗಿದೆ. ಇಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಅಥವಾ ಅದರ ಸಂಯೋಜಿತ ಸಂಸ್ಥೆಗಳ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ." ಎಂದು ಬರೆಯಲಾಗಿದೆ.

2050 ರಲ್ಲಿ ಪತ್ರಿಕೆಗಳ ಮುಖಪುಟ ಹೇಗಿರಬಹುದು ಎಂಬುದರ ಕಾಲ್ಪನಿಕ ಚಿತ್ರಣವನ್ನು ತಿಳಿಸುವ ಹಕ್ಕು ನಿರಾಕರಣೆಗಳೊಂದಿಗೆ ನಾವು ಇತರ ಏಳು ಕೇರಳ ಪತ್ರಿಕೆಗಳ ಮುಖಪುಟವನ್ನು ಪರಿಶೀಲಿಸಿದ್ದೇವೆ. ಮಲಯಾಳಂ ಮನೋರಮಾ, ಜನ್ಮಭೂಮಿ, ಕೇರಳ ಕೌಮುದಿ, ವೀಕ್ಷಣಂ, ಮಾಧ್ಯಮಂ, ಜನಯುಗಂ ಮತ್ತು ಮಂಗಳಂ ಪತ್ರಿಕೆಗಳನ್ನು ಇದು ಒಳಗೊಂಡಿದೆ.

ಕಾಗದದ ಕರೆನ್ಸಿಯನ್ನು ಸ್ಥಗಿತಗೊಳಿಸುವ ವರದಿಯು ಸುದ್ದಿಯಲ್ಲ, ಬದಲಾಗಿ ಇದು ಜಾಹೀರಾತು ಎಂದು ಸ್ಪಷ್ಟಪಡಿಸುವ ಏಷ್ಯಾನೆಟ್ ನ್ಯೂಸ್ ನ ವೀಡಿಯೊ ವರದಿಯನ್ನು ನಾವು ಜನವರಿ 24 ರಂದು ನೋಡಿದ್ದೇವೆ.

ಜಾಹೀರಾತಿಗಾಗಿ ಕ್ಷಮೆಯಾಚಿಸಿದ 'ದಿ ಸಮಿಟ್ ಆಫ್ ಫ್ಯೂಚರ್ 2025' ನಿರ್ದೇಶಕರು: ಜಾಹೀರಾತಿನಲ್ಲಿ ಉಲ್ಲೇಖಿಸಲಾದ ಕಾರ್ಯಕ್ರಮದ ಬಗ್ಗೆಯೂ ನಾವು ಮಾಹಿತಿಯನ್ನು ಕಂಡುಕೊಂಡಿದ್ದೇವೆ. ಈ ಕಾರ್ಯಕ್ರಮವು ಜನವರಿ 25 ರಿಂದ ಫೆಬ್ರವರಿ 1 ರವರೆಗೆ ಕೊಚ್ಚಿಯ ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.

ಜಾಹೀರಾತು ವೈರಲ್ ಆದ ನಂತರ ಮತ್ತು ಟೀಕೆಗಳು ಕೇಳಿ ಬಂದ ನಂತರ, ಜೈನ್ ವಿಶ್ವವಿದ್ಯಾಲಯ ಆಯೋಜಿಸಿದ್ದ 'ದಿ ಸಮ್ಮಿಟ್ ಆಫ್ ಫ್ಯೂಚರ್ 2025' ನಿರ್ದೇಶಕ ಡಾ. ಟಾಮ್ ಎಂ ಜೋಸೆಫ್ ಅವರು ಜಾಹೀರಾತಿನಿಂದ ಉಂಟಾದ ಯಾವುದೇ ತಪ್ಪು ತಿಳುವಳಿಕೆ ಅಥವಾ ಕಳವಳಗಳಿಗೆ ಕ್ಷಮೆಯಾಚಿಸಿದರು. ಕಾಲ್ಪನಿಕ ಭವಿಷ್ಯದ ಸುದ್ದಿ ಕಥೆಯಾಗಿ ವಿನ್ಯಾಸಗೊಳಿಸಲಾದ ಜಾಹೀರಾತು ಸ್ಪಷ್ಟ ಹಕ್ಕು ನಿರಾಕರಣೆಯನ್ನು ಒಳಗೊಂಡಿದೆ ಆದರೆ ಕೆಲವು ಓದುಗರು ತಪ್ಪಾಗಿ ಅರ್ಥೈಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಸಮಿಟ್ ಆಫ್ ಫ್ಯೂಚರ್ 2025 ರ ಎಕ್ಸ್ ಹ್ಯಾಂಡಲ್ ಡಾ.ಟಾಮ್ ಅವರ ಅಧಿಕೃತ ಹೇಳಿಕೆಯ ವೀಡಿಯೊವನ್ನು ಸಹ ಪೋಸ್ಟ್ ಮಾಡಿದೆ.

ಆದ್ದರಿಂದ, ಕೇರಳದ ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತನ್ನು ನಿಜವಾದ ಸುದ್ದಿ ಎಂದು ತಪ್ಪಾಗಿ ಶೇರ್ ಮಾಡಲಾಗುತ್ತಿದೆ ಎಂದು ನಾವು ತೀರ್ಮಾನಿಸುತ್ತೇವೆ.

ಕ್ಲೈಮ್ ರಿವ್ಯೂ: ಫೆಬ್ರವರಿ 2025 ರಲ್ಲಿ ಭಾರತದಲ್ಲಿ ಕಾಗದದ ಕರೆನ್ಸಿಯನ್ನು ಸಂಪೂರ್ಣವಾಗಿ ಅಮಾನ್ಯಗೊಳಿಸಲಾಗುವುದು ಮತ್ತು ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲಾಗುವುದು.

  • ಪ್ರತಿಪಾದಿಸಿದ್ದು ಯಾರು?: X ಮತ್ತು ಫೇಸ್ ಬುಕ್ ಬಳಕೆದಾರರು
  • ಕ್ಲೈಮ್ ವಿಮರ್ಶೆ: ನ್ಯೂಸ್ ಮೀಟರ್
  • ಕ್ಲೈಮ್ ಮೂಲ: X ಮತ್ತು ಫೇಸ್ ಬುಕ್
  • ಕ್ಲೈಮ್ ಫ್ಯಾಕ್ಟ್ ಚೆಕ್: ಸುಳ್ಳು

ಸತ್ಯ: ಈ ಹೇಳಿಕೆ ಸುಳ್ಳು. ಕೇರಳದ ವಿವಿಧ ಪತ್ರಿಕೆಗಳು ಪ್ರಕಟಿಸಿದ ವೈರಲ್ ಪೇಪರ್ ಕ್ಲಿಪ್ಪಿಂಗ್ ಗಳು ಕೊಚ್ಚಿಯಲ್ಲಿ ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಆಯೋಜಿಸಿರುವ ವಿದ್ಯಾರ್ಥಿ ಶೃಂಗಸಭೆಯ ಜಾಹೀರಾತುಗಳಾಗಿವೆ.

ಸೂಚನೆ: ಈ ಸುದ್ದಿಯನ್ನು ಮೊದಲು ನ್ಯೂಸ್ ಮೀಟರ್ ಪ್ರಕಟಿಸಿತು ಮತ್ತು ಶಕ್ತಿ ಕಲೆಕ್ಟಿವ್​​ನ ಭಾಗವಾಗಿ ಈಟಿವಿ ಭಾರತ್ ಮರುಪ್ರಕಟಿಸುತ್ತಿದೆ.

ಇದನ್ನೂ ಓದಿ : ದೆಹಲಿ ಚುನಾವಣೆಗೆ ಎಎಪಿ ಪ್ರಣಾಳಿಕೆ ಬಿಡುಗಡೆ: ವಿದ್ಯಾರ್ಥಿಗಳಿಗೆ ಉಚಿತ ಬಸ್, ಮೆಟ್ರೋದಲ್ಲಿ ಶೇ 50 ರಿಯಾಯಿತಿ ಸೇರಿ 15 ಗ್ಯಾರಂಟಿ - DELHI ASSEMBLY ELECTIONS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.