ಕೋಲ್ಕತ್ತಾ: ತಮ್ಮ ಬೇಡಿಕೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಭಾಗಶಃ ಒಪ್ಪಿದೆ ಎಂದು ತಿಳಿಸಿದ್ದ ಆರ್.ಜಿ.ಕರ್ ಪ್ರತಿಭಟನಾನಿರತ ಕಿರಿಯ ವೈದ್ಯರು ಇದೀಗ ಮುಖ್ಯಮಂತ್ರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಬಯಸಿದ್ದು, ಪ್ರತಿಭಟನೆ ಮುಂದುವರೆಸುವುದಾಗಿಯೂ ತಿಳಿಸಿದ್ದಾರೆ.
ಸ್ವಾಸ್ಥ್ಯ ಭವನದ ಮುಂದೆ ಪ್ರತಿಭಟನೆಗೆ ಮುಂದುವರೆಸಿರುವ ವೈದ್ಯರು, ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್.ಎಸ್.ನಿಗಮ್ ಅವರನ್ನು ವಜಾಗೊಳಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿರುವ ಬೆದರಿಕೆ ಸಂಸ್ಕೃತಿಯನ್ನು ಹೊಡೆದೋಡಿಸಬೇಕು. ಕುಸಿದಿರುವ ಆರೋಗ್ಯ ವ್ಯವಸ್ಥೆಯ ಮರು ನಿರ್ಮಾಣಕ್ಕೆ ಇದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಯೊಂದಿಗೆ ಮತ್ತೊಂದು ಸುತ್ತಿನ ಸಭೆ ಬಯಸಿದ್ದೇವೆ ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ.
ವೈದ್ಯರು ಮುಂದಿಟ್ಟಿರುವ ಪ್ರಮುಖ 5 ಬೇಡಿಕೆಗಳಲ್ಲಿ ಆರೋಗ್ಯ ಕಾರ್ಯದರ್ಶಿಯನ್ನು ತೆಗೆದು ಹಾಕುವುದೂ ಕೂಡ ಸೇರಿದೆ.