ಜೈಪುರ(ರಾಜಸ್ಥಾನ): ಬಂಗಾಳ ಹುಲಿ ಸಂತತಿಗೆ ಇಲ್ಲಿನ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಪ್ರಸಿದ್ಧಿ ಪಡೆದಿದೆ. ಆದರೆ, ಈ ಉದ್ಯಾನವನದಲ್ಲಿ ಕಳೆದ ವರ್ಷ 75ರ ಪೈಕಿ 25 ಹುಲಿಗಳು ಕಣ್ಮರೆಯಾಗಿವೆ ಎಂದು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.
2019ರಿಂದ 2022ರವರೆಗೆ ರಣಥಂಬೋರ್ನಲ್ಲಿ 13 ಹುಲಿಗಳು ನಾಪತ್ತೆಯಾಗಿದ್ದವು.
ಈ ಕುರಿತು ತಿಳಿಯಲು ವನ್ಯಜೀವಿ ಇಲಾಖೆ ಮೂವರು ಸದಸ್ಯರ ಸಮಿತಿ ರಚಿಸಿದ್ದು, ಸಮಿತಿ ದಾಖಲೆಗಳ ಮೇಲ್ವಿಚಾರಣೆ ನಡೆಸಲಿದೆ. ಉದ್ಯಾನವನದ ಅಧಿಕಾರಿಗಳ ಲೋಪ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕಳೆದ ಮೇ 17ರಿಂದ ಸೆಪ್ಟೆಂಬರ್ 30ರವರೆಗೆ ಕಾಣಿಸದೇ ಇರುವ 14 ಹುಲಿಗಳ ಪತ್ತೆ ಕಾರ್ಯ ಸದ್ಯದ ಗುರಿಯಾಗಿದೆ. ನವೆಂಬರ್ 4ರಿಂದ ಹೊರಬಿದ್ದ ವರದಿಗಳಲ್ಲಿ ರಣಥಂಬೋರ್ ಮೇಲ್ವಿಚಾರಣಾ ಮೌಲ್ಯಮಾಪನದ ಕುರಿತು ನಾಪತ್ತೆಯಾದ ಹುಲಿಗಳ ಬಗ್ಗೆ ತಿಳಿಸಲಾಗಿತ್ತು.
ಈ ಸಂಬಂಧ ಪಾರ್ಕ್ನ ನಿರ್ದೇಶಕರಿಗೆ ಅನೇಕ ನೋಟಿಸ್ ನೀಡಲಾಗಿದೆಯಾದರೂ ಯಾವುದೇ ಮಹತ್ವದ ಸುಧಾರಣೆಗಳು ಕಂಡುಬಂದಿಲ್ಲ. 2024ರ ಅಕ್ಟೋಬರ್ 14ರ ವರದಿಯ ಪ್ರಕಾರ, ವರ್ಷದಿಂದ 11 ಹುಲಿಗಳು ಪತ್ತೆಯಾಗಿಲ್ಲ. 14 ಹುಲಿಗಳ ಕುರಿತು ಪುರಾವೆಗಳು ಸೀಮಿತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ರಣಥಂಬೋರ್ನಲ್ಲಿ ನಾಪತ್ತೆಯಾಗಿರುವ ಹುಲಿಗಳ ತನಿಖೆಗಾಗಿ ತನಿಖಾ ತಂಡ ರಚಿಸಲಾಗಿದೆ.
ರಣಥಂಬೋರ್ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವುದರಿಂದ ಕಾದಾಟಕ್ಕೂ ಕೂಡ ಇದು ಕಾರಣವಾಗಿದೆ. ಇದರಲ್ಲಿ ಹುಲಿ ಮರಿ ಮರಿಗಳೂ ಸೇರಿವೆ. 2006-2014ರ ಭಾರತೀಯ ವನ್ಯಜೀವಿ ಸಂಸ್ಥೆ ಅಧ್ಯಯನದಂತೆ, ಉದ್ಯಾನವನದಲ್ಲಿ ಕೇವಲ 40 ವಯಸ್ಕ ಹುಲಿಗಳಿಗೆ ಮಾತ್ರ ಸುರಕ್ಷಿತವಾಗಿವೆ.
ಇದನ್ನೂ ಓದಿ: ಹೆಚ್.ಡಿ.ಕೋಟೆ ಜನನಿಬಿಡ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷ: ಮುಂದುವರಿದ ಕಾರ್ಯಾಚರಣೆ