ಉಜ್ಜಯಿನಿ (ಮಧ್ಯಪ್ರದೇಶ):ವ್ಯಕ್ತಿಯೋರ್ವ ತನ್ನ ಚರ್ಮದಿಂದ ಪಾದರಕ್ಷೆಗಳನ್ನು ತಯಾರಿಸಿ ತಾಯಿಗೆ ಅರ್ಪಿಸಿರುವ ಅಪರೂಪದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಒಂದು ಕಾಲದ ಕ್ರಿಮಿನಲ್ ಆಗಿದ್ದ ಈ ವ್ಯಕ್ತಿ ರಾಮಾಯಣ ಓದಿ, ತನ್ನ ಮನ ಪರಿವರ್ತನೆ ಮಾಡಿಕೊಂಡಿದ್ದಾರೆ. ಈಗ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿ ಮಾದರಿಯಾಗಿದ್ದಾರೆ ಎಂಬುದು ಮತ್ತೊಂದು ವಿಶೇಷ.
ತನ್ನ ತೊಡೆಯ ಚರ್ಮದಿಂದ ಪಾದರಕ್ಷೆ ಮಾಡಿಸಿ ತಾಯಿಗೆ ಅರ್ಪಿಸಿದ ಮಗ ಕತೆ - ಪುರಾಣಗಳಲ್ಲಿ ತಂದೆ-ತಾಯಿಗಾಗಿ ಶ್ರವಣ್ ಕುಮಾರನಂತಹ ಮಕ್ಕಳು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದನ್ನು ನಾವು ಕೇಳಿದ್ದೇವೆ. ಈ ಕಲಿಯುಗದಲ್ಲೂ ಓರ್ವ ಅಪರಾಧಿ ತನ್ನನ್ನು ತಾನು ಪರಿವರ್ತಿಸಿಕೊಂಡು ತಾಯಿಗೆ ಚರ್ಮದ ಪಾದರಕ್ಷೆಗಳನ್ನು ಸಮರ್ಪಿಸುವ ಮೂಲಕ ಹೆತ್ತವರ ಮೇಲಿನ ಭಕ್ತಿಗೆ ಉದಾಹರಣೆಯಾಗಿದ್ದಾರೆ. ರೌನಕ್ ಗುರ್ಜರ್ ಎಂಬಾತನೇ ತನ್ನ ತೊಡೆಯ ಚರ್ಮದಿಂದ ತನ್ನ ತಾಯಿ ನೀರುಲಾ ಗುರ್ಜರ್ ಅವರಿಗಾಗಿ ಚಪ್ಪಲಿಗಳನ್ನು ಮಾಡಿಸಿದ್ದಾನೆ.
ಉಜ್ಜಯಿನಿಯ ಧಾಚಾ ಭವನದಲ್ಲಿ ರೌನಕ್ ಗುರ್ಜರ್ ಕುಟುಂಬ ವಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಭಗವತ್ ಕಥಾವನ್ನು ಆಯೋಜಿಸಲಾಗುತ್ತಿದೆ. ಬುಧವಾರ ಸಂಜೆ ಕೂಡ ಎಂದಿನಂತೆ ಭಗವತ್ ಕಥಾ ನಡೆಯುತ್ತಿತ್ತು. ಈ ವೇಳೆ ರೌನಕ್ ಗುರ್ಜರ್ ಆಂಬ್ಯುಲೆನ್ಸ್ ಮೂಲಕ ಸ್ಥಳಕ್ಕೆ ತಲುಪಿದ್ದರು. ಆಗ ಕಾಲಿಗೆ ಬ್ಯಾಂಡೇಜ್ ಕಟ್ಟಿದ್ದನ್ನು ನೋಡಿದ ಜನರು ಆಘಾತ ವ್ಯಕ್ತಪಡಿಸಿದ್ದರು. ಆದರೆ, ವಾಸ್ತವ ತಿಳಿದು ಎಲ್ಲರೂ ದಿಗ್ಭ್ರಮೆಗೊಂಡಿದ್ದರು. ಜನರಿಗೆ ತಮ್ಮ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ.
ತನ್ನ ತೊಡೆಯ ಚರ್ಮದಿಂದ ಪಾದರಕ್ಷೆ ಮಾಡಿಸಿ ತಾಯಿಗೆ ಅರ್ಪಿಸಿದ ಮಗ ರಾಮ್ ಭಜನೆಯ ನಡೆಸಿಕೊಡುತ್ತಿದ್ದ ಕಥೆಗಾರ ಜಿತೇಂದ್ರ ಮಹಾರಾಜ್ ಅವರಿಗೆ ಬಳಿಗೆ ಹೋದ ರೌನಕ್ ಗುರ್ಜರ್, ತಾನು ರಾಮಾಯಣದಿಂದ ಪ್ರೇರಿತರಾಗಿ ಚರ್ಮವನ್ನು ಕತ್ತರಿಸಿ ತಾಯಿಗೆ ಪಾದರಕ್ಷೆ ಮಾಡಿಸಿರುವುದಾಗಿ ತಿಳಿಸಿದರು. ಇದನ್ನು ಕೇಳಿ ಸ್ವತಃ ತಾಯಿ ನೀರುಲಾ ಗುರ್ಜರ್ ಅವರೇ ಅಚ್ಚರಿಗೊಂಡರು. ನಂತರದಲ್ಲಿ ಮಗ ರೌನಕ್‌ನನ್ನು ಅಪ್ಪಿಕೊಂಡು ಕಣ್ಣೀರು ಸುರಿಸುತ್ತಾ, ಚರ್ಮದಿಂದ ಮಾಡಿದ ಪಾದರಕ್ಷೆಗಳನ್ನು ಧರಿಸಿದರು.
ಈ ವೇಳೆ ಕಥೆಗಾರ ಜಿತೇಂದ್ರ ಮಹಾರಾಜ್, ಇಂದಿನ ಯುವಕರಿಗೆ ತಮ್ಮ ತಂದೆ - ತಾಯಿಯ ಬಗ್ಗೆ ಗೌರವ, ಪ್ರೀತಿ ಇರಬೇಕು ಎಂದು ಸಂದೇಶ ನೀಡಿದರು. ತಾಯಿ ನಿರುಲಾ ಗುರ್ಜರ್, ಮಾತನಾಡಿ, ರೌನಕ್ ಅವರಂತಹ ಮಗನನ್ನು ಪಡೆದ ನಾನೇ ಅದೃಷ್ಟಶಾಲಿ. ಪ್ರತಿಯೊಬ್ಬ ತಾಯಿಯೂ ರೌನಕ್‌ನಂತಹ ಮಗನನ್ನು ಹೊಂದಬೇಕು. ನನ್ನನ್ನು ಎಲ್ಲ ತೊಂದರೆಗಳಿಂದ ರಕ್ಷಿಸುವ ಮೂಲಕ ಮಗನಾಗಿ ತನ್ನ ಕರ್ತವ್ಯವನ್ನೂ ಪೂರೈಸಿದ್ದಾನೆ ಎಂದು ಹೇಳಿದರು.
ಈ ರೌನಕ್ ಗುರ್ಜಾರ್ ಹಿಸ್ಟರಿ ಶೀಟರ್ ಆಗಿದ್ದರು. ಕೆಲವು ವರ್ಷಗಳ ಹಿಂದೆ ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಅವನು ತನ್ನನ್ನು ತಾನು ಪರಿವರ್ತನೆ ಮಾಡಿಕೊಂಡಿದ್ದಾರೆ. ಅಲ್ಲದೇ, ರಾಮಾಯಣವನ್ನು ಓದಿದ ನಂತರ ತಾಯಿಗೆ ಚರ್ಮದಿಂದ ಚಪ್ಪಲಿಗಳನ್ನು ಮಾಡಿಸುವ ತನಗೆ ಸ್ಫೂರ್ತಿ ಬಂದಿದೆ ಎಂದು ರೌನಕ್ ಗುರ್ಜಾರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಮಗಳಿಂದ ಕಿಡ್ನಿ ಪಡೆದು ಟಿಕೆಟ್ ಕೊಟ್ಟಿರುವ ಲಾಲು: ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ!