ಕರ್ನಾಟಕ

karnataka

ETV Bharat / bharat

ಹಳಿ ತಪ್ಪಿಸಲು ಟ್ರ್ಯಾಕ್​ ಮೇಲೆ ಮರಳು ಸುರಿದ ದುಷ್ಕರ್ಮಿಗಳು; ಲೋಕೋ ಪೈಲಟ್​ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ - Train accident averted in UP

ರಾಯ್ ಬರೇಲಿ-ರಘುರಾಜ್ ಸಿಂಗ್ ಪ್ಯಾಸೆಂಜರ್ ರೈಲು ಸಂಚಾರದ ವೇಳೆ ಈ ಅವಘಡ ಕಂಡು ಬಂದಿದೆ. ರೈಲು ಹಳಿಗಳ ಮೇಲೆ ಮರಳು ಸುರಿದಿರುವುದನ್ನು ಕಂಡ ಲೋಕೋಪೈಲಟ್​ ತಕ್ಷಣಕ್ಕೆ ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

A major accident was averted in Uttar Pradesh by an alert loco pilot
ಸಾಂದರ್ಭಿಕ ಚಿತ್ರ (ಎಎನ್​ಐ)

By ETV Bharat Karnataka Team

Published : Oct 7, 2024, 10:38 AM IST

ನವದೆಹಲಿ: ಉತ್ತರ ಪ್ರದೇಶದ ರಾಯ್​ ಬರೇಲಿಯಲ್ಲಿ ಮತ್ತೊಂದು ರೈಲು ವಿಧ್ವಂಸಕ ಕೃತ್ಯದ ಸಂಚು ಬಯಲಾಗಿದೆ. ರೈಲು ಹಳಿಗಳ ಮೇಲೆ ಮರಳನ್ನು ಸುರಿದಿದ್ದು. ಲೋಕೋ ಪೈಲಟ್​​ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ.

ರಾಯ್ ಬರೇಲಿ-ರಘುರಾಜ್ ಸಿಂಗ್ ಪ್ಯಾಸೆಂಜರ್ ರೈಲು ಸಂಚಾರದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ರೈಲು ಹಳಿಗಳ ಮೇಲೆ ಮರಳು ಸುರಿದಿರುವುದನ್ನು ಕಂಡ ಲೋಕೋಪೈಲಟ್​ ತಕ್ಷಣಕ್ಕೆ ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ರೈಲು ಸಂಖ್ಯೆ 05251 ಹಳಿ ತಪ್ಪಿಸುವ ಉದ್ದೇಶದಿಂದ ದೃಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿದ್ದು, ತಕ್ಷಣಕ್ಕೆ ಲೋಕೋ ಪೈಲಟ್​ ತುರ್ತು ಬ್ರೇಕ್​ ಹಾಕಿದ್ದಾರೆ.

ವರದಿ ಪ್ರಕಾರ, ರಾಯ್​ಬರೇಲಿ ರಘುರಾಜಪುರ ರೈಲ್ವೆ ಕ್ರಾಸಿಂಗ್‌ನಲ್ಲಿ ರಾತ್ರಿ 7.55 ರ ಸುಮಾರಿಗೆ ಅಪರಿಚಿತ ಡಂಪರ್​ ಸಹಾಯದಿಂದ ರೈಲ್ವೆ ಹಳಿ ಮೇಲೆ ಮರಳು ಸುರಿಯಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಣ್ಣು ತುಂಬುವ ಕೆಲಸ ನಡೆಯುತ್ತಿದ್ದು, ಅದೇ ಕೆಲಸದಲ್ಲಿ ನಿರತರಾಗಿದ್ದ ಡಂಪರ್‌ಗಳು ಟ್ರ್ಯಾಕ್‌ನಲ್ಲಿ ಮರಳನ್ನು ಸುರಿದು ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ನಂತರ ರಘುರಾಜ್ ಸಿಂಗ್ ಶಟಲ್ ರೈಲು ಸಂಖ್ಯೆ 05251 ಅದೇ ಮಾರ್ಗದಲ್ಲಿ ಸಾಗಿದೆ. ಅದೃಷ್ಟವಶಾತ್​ ರೈಲಿನ ವೇಗ ಕಡಿಮೆ ಇದ್ದ ಕಾರಣ ಲೋಕೋಪೈಲಟ್​​ ರೈಲನ್ನು ತಕ್ಷಣಕ್ಕೆ ತುರ್ತು ಬ್ರೇಕ್​ ಹಾಕಿ ನಿಲ್ಲಿಸಿ, ಸಂಭವಿಸಬಹುದಾಗಿದ್ದ ಅಪಘಾತ ತಪ್ಪಿಸಿದ್ದಾರೆ.

ಒಂದು ವೇಳೆ ಈ ರೈಲಿನ ವೇಗ ಹೆಚ್ಚಿದ್ದರೆ, ರೈಲು ಹಳಿ ತಪ್ಪುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಟ್ರ್ಯಾಕ್​ ಮೇಲೆ ಮರಳು ಸುರಿದು ಹೋದ ದುಷ್ಕರ್ಮಿಯ ಹುಡುಕಾಟ ಆರಂಭಿಸಿದ್ದಾರೆ.

ರೈಲು ತುರ್ತು ಬ್ರೇಕ್​ ಹಾಕಿ ನಿಲ್ಲಿಸಿದ ಬಳಿಕ ರೈಲ್ವೆ ಟ್ರಾಫಿಕ್​ ಮಾರ್ಗವನ್ನು ಕೆಲ ಕಾಲ ಬಂದ್​ ಮಾಡಲಾಯಿತು. ಹಳಿಯಲ್ಲಿ ಹಾಕಿದ್ದ ಮರಳನ್ನು ತೆರವು ಮಾಡಿದ ಬಳಿಕ ಪುನಃ ಸಂಚಾರ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್​​ 5ರಂದು ಕೂಡ ಗೋರಖ್‌ಪುರ-ಲಕ್ನೋ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಸಂಚಾರದ ಸಮಯದಲ್ಲಿ ಕಾರೊಂದು ಹಳಿ ಮೇಲೆ ಚಲಿಸುತ್ತಿತ್ತು. ಇದನ್ನು ಗಮನಿಸಿದ ಲೋಕೋ ಪೈಲಟ್​​ ತಕ್ಷಣಕ್ಕೆ ಬ್ರೇಕ್​ ಹಾಕಿ ಆಗಬಹುದಾದ ಅನಾಹುತ ತಪ್ಪಿಸಿದ್ದರು.

ಪದೇ ಪದೇ ರೈಲು ಹಳಿ ತಪ್ಪಿಸುವ ದೃಷ್ಕೃತ್ಯಗಳು ದೇಶದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಲೇ ಇದೆ. ಆಗಸ್ಟ್​​ನಲ್ಲಿ ಈ ರೀತಿ 18 ಕೃತ್ಯಗಳು ನಡೆದಿವೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಜೂನ್​ 2023ರಿಂದ ಇಲ್ಲಿಯವರೆಗೆ ಈ ರೀತಿಯ 24 ಘಟನೆಗಳು ವರದಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಳಿಗಳ ಮೇಲೆ ಎಲ್‌ಪಿಜಿ ಸಿಲಿಂಡರ್‌ಗಳು, ಬೈಸಿಕಲ್‌ಗಳು, ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಇರಿಸಿದ್ದು, ಕೆಲವರು ದುರುದ್ದೇಶದಿಂದ ಈ ಪಿತೂರಿಯನ್ನು ನಡೆಸಿರಬಹುದು ಎಂಬ ಕೂಡ ಊಹೆ ಇದೆ ಎಂದು ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಭೀಮಾ ನದಿ ಸೇತುವೆ ಸಮೀಪ ಹಳಿ ತಪ್ಪಿದ ರೈಲು: ಕೆಲ ರೈಲುಗಳ ಸಂಚಾರ ರದ್ದು

ABOUT THE AUTHOR

...view details