ಕರ್ನಾಟಕ

karnataka

ETV Bharat / bharat

ಬ್ಯಾರೆಲ್ ಗ್ರೆನೇಡ್ ಲಾಂಚರ್ ತಯಾರಿಕೆಯಲ್ಲಿ ಮಾವೋವಾದಿಗಳು! - Barrel Grenade Launchers

Maoists In Making Launchers: ಬಿಜಿಎಲ್ ಸ್ಥಳೀಯವಾಗಿ ಸಿದ್ಧಪಡಿಸಲಾದ ಸುಧಾರಿತ ಮದ್ದು ಗುಂಡುಗಳಾಗಿದ್ದು, ಅವುಗಳ ತಯಾರಿಕೆ ಬಗ್ಗೆ ಸಿಆರ್‌ಪಿಎಫ್ ಮಾಹಿತಿ ಕಲೆ ಹಾಕಿದೆ. ಮಾವೋವಾದಿಗಳು ಇವುಗಳು ಮೂಲಕ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು.

ಬ್ಯಾರೆಲ್ ಗ್ರೆನೇಡ್ ಲಾಂಚರ್
ಬ್ಯಾರೆಲ್ ಗ್ರೆನೇಡ್ ಲಾಂಚರ್

By ETV Bharat Karnataka Team

Published : Feb 3, 2024, 12:04 PM IST

ಹೈದರಾಬಾದ್:ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಅನ್ನೋದು ದೇಶೀಯ ನಿರ್ಮಿತ ಸುಧಾರಿತ ಮದ್ದುಗುಂಡುಗಳಾಗಿದ್ದು, ನಕ್ಸಲರು ಇದನ್ನು ತಾವೇ ತಮ್ಮ ಕ್ಯಾಂಪ್​ಗಳಲ್ಲಿ ಅಭಿವೃದ್ಧಿಪಡಿಸಿರುವುದಾಗಿ ಸಿಆರ್‌ಪಿಎಫ್​ಗೆ ಮಾಹಿತಿ ಲಭ್ಯವಾಗಿದೆ. ಭದ್ರತಾ ದೃಷ್ಟಿಯ ಹಿನ್ನೆಲೆ ಇದು ಆತಂಕ ಹುಟ್ಟುಹಾಕಿದೆ.

ಛತ್ತೀಸ್‌ಗಢದ ಸುಕ್ಮಾ- ಬಿಜಾಪುರ ಜಿಲ್ಲೆಗಳ ಗಡಿಯಲ್ಲಿ ಸಿಆರ್‌ಪಿಎಫ್ ಕೋಬ್ರಾ ಪಡೆಗಳ ಮೇಲೆ ಇತ್ತೀಚೆಗೆ ಮಾವೋವಾದಿಗಳು ದಾಳಿ ನಡೆಸಿದ್ದು, ಈ ದಾಳಿ ಬಳಿಕ ಕೆಲವು ಆಘಾತಕಾರಿ ವಿಷಯಗಳು ಹೊರ ಬೀಳುತ್ತಿವೆ. ದಾಳಿ ಕುರಿತು ಮಾಹಿತಿ ಸಂಗ್ರಹಣೆಯಲ್ಲಿದ್ದ ಸಿಆರ್‌ಪಿಎಫ್​ಗೆ ಅಚ್ಚರಿ ತರಿಸಿದೆ. ಮೂರು ದಿನಗಳ ಹಿಂದೆ ಟೇಕುಲಗುಡೆಂ ಅರಣ್ಯ ಪ್ರದೇಶದ ಸಿಆರ್‌ಪಿಎಫ್ ಬೇಸ್ ಕ್ಯಾಂಪ್ ಬಳಿಯ ಭದ್ರತಾ ಪಡೆಗಳ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಬ್ಯಾರೆಲ್ ಗ್ರೆನೇಡ್ ಲಾಂಚರ್‌ (ಬಿಜಿಎಲ್) ಎಂಬ ಕಚ್ಚಾ ನಿರ್ಮಿತ ರಾಕೆಟ್ ಆಕಾರದ ಹತ್ತಾರು ಬ್ಯಾರೆಲ್‌ಗಳನ್ನು ಹಾರಿಸಿದ್ದರು. ಬಿಜಿಎಲ್ ಸ್ಥಳೀಯವಾಗಿ ಸಿದ್ಧಪಡಿಸಿಲಾದ ಸುಧಾರಿತ ಮದ್ದುಗುಂಡುಗಳಾಗಿದ್ದು, ಅವುಗಳ ತಯಾರಿಕೆ ಬಗ್ಗೆ ಸಿಆರ್‌ಪಿಎಫ್ ಮಾಹಿತಿ ಕಲೆ ಹಾಕಿದೆ. ಟೇಕಲ್‌ಗುಡೆಂನಲ್ಲಿ ನಡೆದ ದಾಳಿಯ ವೇಳೆ ಮಾವೋವಾದಿಗಳು ಇವುಗಳಲ್ಲಿ ಕೆಲವನ್ನು ಬಳಸಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರಾಕೆಟ್‌ಗಳ ಸ್ಫೋಟದಿಂದ ಹಲವು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

ಮಾವೋವಾದಿಗಳು ಸ್ಥಳೀಯವಾಗಿ ಬಿಜಿಎಲ್ ಜೊತೆಗೆ, ತಮ್ಮ ಕಾರ್ಖಾನೆಗಳಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಸಹ ತಯಾರಿಸುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿ ಬಹಿರಂಗಪಡಿಸಿದ್ದಾರೆ. ಟೇಕುಲಗುಡೆಂ ಅರಣ್ಯದಲ್ಲಿ ನಡೆದ ದಾಳಿಯ ನಂತರ ಪೊಲೀಸರು, ಮಾವೋವಾದಿಗಳು ಬಳಸುತ್ತಿದ್ದ ಸುರಂಗ ಮಾರ್ಗಗಳನ್ನು ಗುರುತಿಸಿದ್ದಾರೆ. ಬೃಹತ್ ಶಸ್ತ್ರಾಸ್ತ್ರ ಡಂಪ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲಿ ರಾಶಿ ರಾಶಿ ಬ್ಯಾರೆಲ್ ಗ್ರೆನೇಡ್ ಲಾಂಚರ್​ಗಳು ಪತ್ತೆಯಾಗಿವೆ. ಭದ್ರತಾ ಪಡೆಗಳಿಂದ ಅವುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಬಿಜಿಎಲ್ ಅನ್ನು ಮಾವೋವಾದಿಗಳೇ ಸಿದ್ಧಪಡಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಬಿಜಿಎಲ್​​ಗಳು ತಮ್ಮ ಕಬ್ಬಿಣದ ಕವಚದೊಳಗೆ ಸ್ಫೋಟಕಗಳಿಂದ ತುಂಬಿರುತ್ತವೆ. ಅವುಗಳ ಬಾಲದ ಮೇಲೆ ರೆಕ್ಕೆಗಳನ್ನು ಹೊಂದಿದ್ದು ಅವು ಹಾರಲು ಸಹಾಯ ಮಾಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ದಾಳಿ ಹೆಚ್ಚಾಗಿದ್ದು, ಅದನ್ನು ಹತ್ತಿಕ್ಕುವ ಕಾರ್ಯತಂತ್ರದ ಭಾಗವಾಗಿ ಕೇಂದ್ರ ಸರ್ಕಾರವು ಪ್ರತಿ 4 ಕಿ.ಮೀ.ಗೆ ಒಂದರಂತೆ ಸಿಆರ್‌ಪಿಎಫ್ ಬೇಸ್‌ ಕ್ಯಾಂಪ್‌ಗಳನ್ನು ವಿಸ್ತರಿಸುತ್ತಿದೆ. ಇದನ್ನು ತಡೆಯಲು ಮಾವೋವಾದಿಗಳು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಬೇಸ್ ಕ್ಯಾಂಪ್​ಗಳ ಮೇಲಿನ ದಾಳಿದೆ ಇದೇ ಕಾರಣ ಇರಬಹುದು ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗಷ್ಟೇ ಮಾವೋವಾದಿಗಳು ಸುರಂಗ ನಿರ್ಮಾಣ ಮಾಡಿರುವ ಉದ್ದೇಶವೂ ಇದೇ ಆಗಿದೆ ಎಂದು ಶಂಕಿಸಲಾಗಿದೆ. ಮತ್ತೊಂದೆಡೆ ಮಾವೋವಾದಿಗಳು ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹದಲ್ಲಿ ತೊಡಗಿರುವುದು ಇತ್ತೀಚಿನ ದಾಳಿಯಿಂದ ಸ್ಪಷ್ಟವಾಗಿದೆ.

ಬಿಜಾಪುರ ಮತ್ತು ಸುಕ್ಮಾ ಗಡಿಯಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಮೂವರು ಯೋಧರು ಗುಂಡೇಟಿಗೆ ಬಲಿಯಾಗಿದ್ದು, 14 ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರಕ್ಕೆ ರವಾನಿಸಲಾಗಿದೆ. ಏಕಾಏಕಿ ಗುಂಡಿನ ದಾಳಿಯ ಪ್ರತಿಯಾಗಿ ಯೋಧರೂ ಪ್ರತಿದಾಳಿ ನಡೆಸಿದ್ದರು.

ಇದನ್ನೂ ಓದಿ:ನಕ್ಸಲೀಯರ ದಾಳಿಯಲ್ಲಿ ಮೂವರು ಯೋಧರು ಹುತಾತ್ಮ: 14ಕ್ಕೂ ಹೆಚ್ಚು ಸೈನಿಕರಿಗೆ ಗಾಯ

ABOUT THE AUTHOR

...view details