ಜಾಮ್‌ನಗರ (ಗುಜರಾತ್): ಗುಜರಾತ್ ರಾಜ್ಯದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ತೆರೆದ ಕೊಳೆವೆ ಬಾವಿಗೆ ಮಕ್ಕಳು ಬಿದ್ದ ಮೂರನೇ ಘಟನೆ ನಿನ್ನೆ (ಮಂಗಳವಾರ) ಬೆಳಕಿಗೆ ಬಂದಿದೆ. ಈ ಹಿಂದೆ ತಮಾಚನ್ ಹಳ್ಳಿ ಮತ್ತು ರಾನ್ ಗ್ರಾಮದಲ್ಲಿ ನಡೆದ ಎರಡು ಘಟನೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ನಂತರವೂ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಆದರೆ, ನಿನ್ನೆ (ಫೆಬ್ರವರಿ 6) ಜಾಮ್‌ನಗರ ಜಿಲ್ಲೆಯ ಲಾಲ್‌ಪುರ ತಾಲೂಕಿನ ಗೋವಾನಾ ಗ್ರಾಮದಲ್ಲಿ 2 ವರ್ಷದ ಬಾಲಕ 200 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ನಡೆದಿತ್ತು. ಆದರೆ, ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮಗು ಬದುಕಿ ಬಂದಿದೆ.
ರಕ್ಷಣಾ ಕಾರ್ಯಾಚರಣೆ ಶ್ಲಾಘಿಸಿದ ಗ್ರಾಮಸ್ಥರು:ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ ಜಾಮ್‌ನಗರ ಆಡಳಿತವು ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಅಧಿಕಾರಿಗಳು, ಎಲ್ಲ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಕರೆಯಿಸಿಕೊಂಡಿತ್ತು. ಇಂದು ಬೆಳಗಿನ ಜಾವ 3:30ಕ್ಕೆ 9 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಯೊಳಗೆ ಬಿದ್ದಿದ್ದ 2 ವರ್ಷದ ಬಾಲಕ ರಾಜ್‌ನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಗ್ರಾಮಸ್ಥರು ಶ್ಲಾಘಿಸಿ, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
200 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಬಾಲಕ:ಗೋವಾನಾ ಗ್ರಾಮದಲ್ಲಿ ಕೃಷಿ ಕೂಲಿ ಕೆಲಸ ಮಾಡುವ ಮಹಾರಾಷ್ಟ್ರದ ಕುಟುಂಬಕ್ಕೆ ಸೇರಿದ ಎರಡು ವರ್ಷದ ರಾಜ್ ಹೊಲದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ 200 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ. ಮಗುವಿನ ಪೋಷಕರಿಗೆ ವಿಷಯ ತಿಳಿದ ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿ, ಗ್ರಾಮದ ಸರಪಂಚ ಹಾಗೂ ಸ್ಥಳೀಯ ಮುಖಂಡರ ನೆರವಿನಿಂದ ಆಡಳಿತ ಮಂಡಳಿಯ ನೆರವು ಕೋರಿದ್ದಾರೆ. ತಕ್ಷಣವೇ ವೈದ್ಯಕೀಯ ತಂಡದೊಂದಿಗೆ ಜಾಮ್‌ನಗರ ಜಿಲ್ಲಾಡಳಿತವು ಎಲ್ಲಾ ರಕ್ಷಣಾ ತಂಡಗಳ ಸಮೇತ ಸ್ಥಳಕ್ಕೆ ತಲುಪಿತ್ತು.