ಕರ್ನಾಟಕ

karnataka

ETV Bharat / bharat

ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಕಾರುಗಳ ಮಧ್ಯೆ ಡಿಕ್ಕಿ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವು - 7 Died in horrific road accident - 7 DIED IN HORRIFIC ROAD ACCIDENT

Collision between two cars on Samriddhi Expressway: ಮಹಾರಾಷ್ಟ್ರ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಎರ್ಟಿಗಾಗೆ ಸ್ವಿಫ್ಟ್ ಕಾರುಗಳ ನಡುವೆ ಡಿಕ್ಕಿ ಆದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

horrific road accident  7 Died in horrific road accident  Collision between two cars  Maharashtra
ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಕಾರುಗಳ ಮಧ್ಯೆ ಡಿಕ್ಕಿ (ETV Bharat)

By ETV Bharat Karnataka Team

Published : Jun 29, 2024, 9:55 AM IST

ಜಲ್ನಾ (ಮಹಾರಾಷ್ಟ್ರ): ಕಡವಂಚಿ ಗ್ರಾಮದ ಸಮೀಪ ಸಮೃದ್ಧಿ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಾಗ್ಪುರದಿಂದ ಮುಂಬೈಗೆ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಡೀಸೆಲ್ ತುಂಬಿಸಿ ರಾಂಗ್ ಸೈಡ್​ನಿಂದ ಬರುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿಗೆ ಡಿಕ್ಕಿಯಾದ ನಂತರ, ಸಮೃದ್ಧಿ ಹೆದ್ದಾರಿಯ ಬ್ಯಾರಿಕೇಡ್‌ಗಳನ್ನು ಮುರಿದು ಕೆಳಗೆ ಬಿದ್ದಿವೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸ್ವಿಫ್ಟ್ ಡಿಸೈರ್ ಕಾರಿನ ಚಾಲಕ ಡೀಸೆಲ್ ತುಂಬಿದ ನಂತರ ರಾಂಗ್ ಸೈಡ್​​ನಿಂದ ಬರುತ್ತಿತ್ತು. ಈ ಕಾರು ನಾಗಪುರದಿಂದ ಮುಂಬೈಗೆ ಹೋಗುತ್ತಿದ್ದ ಎರ್ಟಿಗಾ ಕಾರಿಗೆ ಜಲ್ನಾ ಜಿಲ್ಲೆಯ ಸಮೃದ್ಧಿ ಹೆದ್ದಾರಿಯಲ್ಲಿ ಕಡವಂಚಿ ಗ್ರಾಮದ ಬಳಿ ಡಿಕ್ಕಿ ಹೊಡೆದಿದೆ.

ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಸಮೃದ್ಧಿ ಹೆದ್ದಾರಿ ಪೊಲೀಸರು ಮತ್ತು ಜಲ್ನಾ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್‌ನೊಂದಿಗೆ ಸಮೃದ್ಧಿ ಹೆದ್ದಾರಿಯಲ್ಲಿದ್ದ ಎರಡೂ ಕಾರುಗಳನ್ನು ಮೇಲೆತ್ತಿಡುವ ರಕ್ಷಣಾ ಕಾರ್ಯ ಕೈಗೊಂಡರು.

ತಡರಾತ್ರಿಯ ಸಮಯದಲ್ಲಿ ಈ ಭೀಕರ ಅಪಘಾತ ನಡೆದಿದ್ದರಿಂದ, ರಕ್ಷಣಾ ಕಾರ್ಯವು ತಡವಾಗಿ ಆರಂಭವಾಯಿತು. ಇದರಿಂದ ಮೃತರ ಸಂಖ್ಯೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಅಪಘಾತ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಜಲ್ನಾ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಗಾಜಿನ ಕಾರ್ಖಾನೆಯಲ್ಲಿ ಗ್ಯಾಸ್ ಕಂಪ್ರೆಸರ್ ಸ್ಫೋಟ: 6 ಸಾವು, 15 ಜನರಿಗೆ ಗಾಯ - Explosion In Glass Factory

ABOUT THE AUTHOR

...view details