ವಿರುದುನಗರ (ತಮಿಳುನಾಡು):ಜಿಲ್ಲೆಯ ವೆಂಬಕೊಟ್ಟೈ-ವಿಜಯಕರಿಸಲ್ಕುಲಂನಲ್ಲಿ ನಡೆಯುತ್ತಿರುವ ಮೂರನೇ ಹಂತದ ಉತ್ಖನನದಲ್ಲಿ 6 ಸಾವಿರ ವರ್ಷಗಳಷ್ಟು ಹಳೆಯದಾದ ಜಾಸ್ಪರ್ ಮತ್ತು ಸಾರ್ಡ್ ಕಲ್ಲುಗಳು ಪತ್ತೆಯಾಗಿವೆ. ಈ ಕಲ್ಲುಗಳನ್ನು ಆಭರಣಗಳಲ್ಲಿ ಬಳಸಲಾಗುತ್ತದೆ.
ಉತ್ಖನನ ನಿರ್ದೇಶಕರಾದ ಭಾಸ್ಕರ್ ಪೊನ್ನುಸಾಮಿ ಪ್ರತಿಕ್ರಿಯಿಸಿ, "ಮಯೋಲಿಥಿಕ್ ಯುಗದಲ್ಲಿ ವಾಸಿಸುತ್ತಿದ್ದ ಜನರು ಪ್ರಾಣಿಗಳನ್ನು ಬೇಟೆಯಾಡಲು ಬಳಸುತ್ತಿದ್ದ ಉಪಕರಣಗಳ ತಯಾರಿಕೆಯಲ್ಲಿ ಈ ಕಲ್ಲುಗಳನ್ನು ಬಳಸಿದ್ದಾರೆ. ಈ ಕಲ್ಲುಗಳು ಈಗ ಬಳಕೆಯಲಿಲ್ಲ. ಮೂರನೇ ಹಂತದ ಉತ್ಖನನ ಜೂನ್ 18 ರಿಂದ ನಡೆಯುತ್ತಿದೆ. ಚಿನ್ನದ ನಾಣ್ಯ, ತಾಮ್ರದ ನಾಣ್ಯಗಳು, ಒಡೆದ ಮಣ್ಣಿನ ಮೂರ್ತಿ, ಗಾಜಿನ ಮಣಿಗಳು ಸೇರಿದಂತೆ 2 ಸಾವಿರದ 800ಕ್ಕೂ ಹೆಚ್ಚು ಪುರಾತನ ವಸ್ತುಗಳು ಪತ್ತೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಸಚಿವ ತಂಗಂ ತೆನ್ನರಸು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, "ವಿರುದುನಗರ ಜಿಲ್ಲೆಯ ವೆಂಬಕ್ಕೊಟ್ಟೈ-ವಿಜಯಕರಿಸಲ್ಕುಲಂನಲ್ಲಿ ನಡೆಯುತ್ತಿರುವ ಮೂರನೇ ಹಂತದ ಉತ್ಖನನದಲ್ಲಿ ಪ್ರಾಚೀನ ಆಭರಣಗಳಲ್ಲಿ ಬಳಸಲಾಗುತ್ತಿದ್ದ ಜಾಸ್ಪರ್ ಮತ್ತು ಸಾರ್ಡ್ ಕಲ್ಲುಗಳು ಪತ್ತೆಯಾಗಿವೆ. ಈ ಪುರಾವೆಗಳು ಆ ಕಾಲದಲ್ಲಿ ವಾಸಿಸುತ್ತಿದ್ದ ತಮಿಳು ಪೆರುಂಗುಡಿ ಜನರ ಚಿನ್ನಾಭರಣ ವಿನ್ಯಾಸ ಕಲೆಯನ್ನು ಸಾಬೀತುಪಡಿಸುತ್ತವೆ. ಜೊತೆಗೆ ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ಉಪಕರಣಗಳು ಸಿಕ್ಕಿವೆ. ಪಳಂದಾಮಿಗಳು ಆಭರಣಗಳನ್ನು ವಿನ್ಯಾಸಗೊಳಿಸಿ ಧರಿಸುತ್ತಿದ್ದರು ಎಂಬುದು ‘ಸುರ ಎಬ್ರು ಎಕ್ರುತಿಯ ಮೋತಿರಂ ತೊಟ್ಟಲ್’ ಎಂಬ ಹಾಡಿನ ಮೂಲಕ ಸ್ಪಷ್ಟವಾಗುತ್ತದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:200 ವರ್ಷಗಳ ಹಳೆಯ ಶಸ್ತ್ರಾಸ್ತ್ರಗಳು ಪತ್ತೆ: 1857ರ ಕ್ರಾಂತಿಯಲ್ಲಿ ಬಳಕೆ ಮಾಡಿರುವ ಸಾಧ್ಯತೆ