ಜಾಜ್ಪುರ್(ಒಡಿಶಾ):50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲ್ಸೇತುವೆಯಿಂದ ಬಿದ್ದು 5 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಉಳಿದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಬಸ್ ಪುರಿಯಿಂದ ಕೊಲ್ಕತ್ತಾಗೆ ಹೊರಟಿತ್ತು. ಒಡಿಶಾದ ಜಾಜ್ಪುರ್ನ ರಾಷ್ಟ್ರೀಯ ಹೆದ್ದಾರಿ 16ರ ಬಾರಾಬತಿಯಲ್ಲಿ ಮೇಲ್ಸೇತುವೆ ದಾಟುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೇಲ್ಸೇತುವೆಯಿಂದ ಕೆಳಗಡೆ ರಸ್ತೆಗೆ ಬಿದ್ದಿದೆ.
ಮೇಲ್ಸೇತುವೆಯಿಂದ ಕೆಳ ರಸ್ತೆಗೆ ಬಸ್ ಉರುಳಿ 5 ಪ್ರಯಾಣಿಕರು ಸಾವು - Odisha bus accident - ODISHA BUS ACCIDENT
ಪುರಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಬಸ್ವೊಂದು ಮೇಲ್ಸೇತುವೆಯಿಂದ ಕೆಳ ರಸ್ತೆಗೆ ಬಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
Published : Apr 16, 2024, 7:26 AM IST
|Updated : Apr 16, 2024, 9:00 AM IST
ತಕ್ಷಣ ಸ್ಥಳೀಯ ಜನರ ಮಾಹಿತಿಯಿಂದ ಘಟನಾ ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ದಳ ಬಸ್ನೊಳಗಿಂದ ಪ್ರಯಾಣಿಕರನ್ನು ಹೊರತೆಗೆಯುವ ಕೆಲಸ ಮಾಡಿತು. ಇವರಿಗೆ ಸಾರ್ವಜನಿಕರು ಕೈಜೋಡಿಸಿದರು. ಗಾಯಗೊಂಡ ಕೆಲವು ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆ ದಾಖಲಿಸಲಾಗಿದ್ದು, ಗಂಭೀರ ಗಾಯಾಳುಗಳನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಧರ್ಮಶಾಲಾ ಪೊಲೀಸ್ ಸಿಬ್ಬಂದಿಗಳು ಕೂಡ ಸ್ಥಳಕ್ಕೆ ತೆರಳಿ ವಾಹನ ಸಂಚಾರವನ್ನು ನಿಯಂತ್ರಿಸಿದರು. ಅಪಘಾತದಲ್ಲಿ ಬಸ್‌ಗೆ ಸಾಕಷ್ಟು ಹಾನಿಯಾಗಿದೆ.
ಇದನ್ನೂ ಓದಿ:ಗಾಳಿಪಟ ಹಿಡಿಯಲು ಹೋಗಿ ರೈಲು ಡಿಕ್ಕಿ; ಇಬ್ಬರು ಮಕ್ಕಳು ಸಾವು - Children Died