ಹೈದರಾಬಾದ್:ಅಕ್ರಮವಾಗಿ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಕೇವಲ 15 ದಿನದಲ್ಲಿ ಏಕಕಾಲದಲ್ಲಿ 4500 ಫೋನ್ಗಳನ್ನು ಕದ್ದಾಲಿಕೆ ಮಾಡಲಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಪ್ರಮುಖ ವ್ಯಕ್ತಿಗಳ ಫೋನ್ ಸಂಭಾಷಣೆಯುಳ್ಳ 340 ಜಿಬಿ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸ್ ತನಿಖೆಯ ವರದಿ ತಿಳಿಸಿದೆ.
ಹಿಂದಿನ ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ಚುನಾವಣೆಗೂ ಮೊದಲು ಮತ್ತು ಚುನಾವಣೆಯ ವೇಳೆ ಗಣ್ಯರ ಫೋನ್ ಕದ್ದಾಲಿಸಿದ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾ ತಂಡ ಇಂಥದ್ದೊಂದು ಅಚ್ಚರಿಯ ಅಂಶವನ್ನು ಪತ್ತೆ ಮಾಡಿದೆ. ವಿಶೇಷ ಗುಪ್ತಚರ ವಿಭಾಗವು (ಎಸ್ಐಬಿ) ಪೊಲೀಸ್ ಅಧಿಕಾರಿಗಳು, ಸಿಎಂ ರೇವಂತ್ ರೆಡ್ಡಿ ಅವರು ಸೇರಿದಂತೆ ಪ್ರಮುಖರ ಫೋನ್ ಕರೆಗಳನ್ನು ಅಕ್ರಮವಾಗಿ ಟ್ಯಾಪಿಂಗ್ ಮಾಡಲಾಗಿದೆ ಎಂದು ವರದಿಯಲ್ಲಿದೆ.
ಕರೆಗಳ ಮಾಹಿತಿ ನಾಶ:ನವೆಂಬರ್ 15 ರಿಂದ 30 ನೇ ತಾರೀಖಿನ 15 ದಿನಗಳ ಅವಧಿಯಲ್ಲಿ 4500 ಕ್ಕೂ ಅಧಿಕ ಫೋನ್ಗಳನ್ನು ಕದ್ದಾಲಿಸಲಾಗಿದೆ. ಅದರಲ್ಲಿ ನೂರಕ್ಕೂ ಅಧಿಕ ಕರೆಗಳ ಮಾಹಿತಿಯನ್ನು ನಾಶ ಮಾಡಲಾಗಿದೆ. ಇದು ಚುನಾವಣಾ ಅವಧಿಯಲ್ಲಿ ನಡೆದ ಅಕ್ರಮವಾಗಿದೆ. ಬಿಎಸ್ಎನ್ಎಲ್, ವೊಡಾಫೋನ್, ಜಿಯೋ ನೆಟ್ವರ್ಕ್ಗಳ ಫೋನ್ಗಳನ್ನು ಟ್ಯಾಪ್ ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್ಗೆ ತಿಳಿಸಿದರು.