ಮುಂಬೈ(ಮಹಾರಾಷ್ಟ್ರ): 288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 21 ಮಹಿಳಾ ಅಭ್ಯರ್ಥಿಗಳು ಜಯಗಳಿಸಿದ್ದು, ಈ ಪೈಕಿ ಒಬ್ಬರು ಮಾತ್ರ ಪ್ರತಿಪಕ್ಷದವರಾಗಿದ್ದಾರೆ.
ಬಿಜೆಪಿಯಿಂದ ಅತೀ ಹೆಚ್ಚು 14 ಮಹಿಳಾ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದು, ಇದರಲ್ಲಿ 10 ಮಂದಿ ಮರುಆಯ್ಕೆಯಾದರು ಎಂಬುದು ಗಮನಾರ್ಹ. ಚುನಾವಣೆಯಲ್ಲಿ ವಿಜೇತ ಮಹಿಳಾ ಅಭ್ಯರ್ಥಿಗಳ ವಿವರ:
- ಶ್ವೇತಾ ಮಹಾಲೆ (ಚಿಕ್ಲಿ ಕ್ಷೇತ್ರ)
- ಮೇಘನಾ ಬೋರ್ಡಿಕರ್ (ಜಿಂಟೂರ್)
- ದೇವಯಾನಿ ಫರಾಂಡೆ (ನಾಸಿಕ್ ಸೆಂಟ್ರಲ್)
- ಸೀಮಾ ಹಿರೇ (ನಾಸಿಕ್ ಪಶ್ಚಿಮ)
- ಮಂದಾ ಮಾತ್ರೆ (ಬೇಲಾಪುರ)
- ಮನೀಶಾ ಚೌಧರಿ (ದಹಿಸರ್)
- ವಿದ್ಯಾ ಠಾಕೂರ್ (ಗೋರೆಗಾಂವ್)
- ಮಾಧುರಿ ಮಿಸಾಲ್ (ಪಾರ್ವತಿ)
- ಮೋನಿಕಾ ರಾಜಾಲೆ (ಶೇವಗಾಂವ್)
- ನಮಿತಾ ಮುಂಡಾಡ (ಕೈಜ್)
ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಫಲಿತಾಂಶಗಳ ಪ್ರಕಾರ, ಬಿಜೆಪಿಯಿಂದ ಹೊಸ ಶ್ರೀಜಯ ಚವ್ಹಾಣ್ (ಭೋಕರ್), ಸುಲಭಾ ಗಾಯಕ್ವಾಡ್ (ಕಲ್ಯಾಣ ಪೂರ್ವ), ಸ್ನೇಹಾ ಪಂಡಿತ್ (ವಸಾಯಿ) ಮತ್ತು ಅನುರಾಧಾ ಚವಾಣ್ (ಫುಲಾಂಬರಿ) ಅವರು ಇದೇ ಮೊದಲ ಬಾರಿಗೆ ಚುನಾವಣೆ ಗೆದ್ದು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.