ಕರ್ನಾಟಕ

karnataka

ETV Bharat / bharat

ಗಮನಿಸಿ: 10 ವರ್ಷಕ್ಕಿಂತ ಹಳೆಯ ಡೀಸೆಲ್​, 15 ವರ್ಷಕ್ಕಿಂತ ಮೇಲ್ಪಟ್ಟ ಪೆಟ್ರೋಲ್​ ವಾಹನಗಳು ಇಂದಿನಿಂದ ರಸ್ತೆಗಿಳಿಯುವಂತಿಲ್ಲ - 15YRS PETROL VEHICLES WILL NOT RUN

- ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದಂತೆ ತಡೆಯಲು ಸರ್ಕಾರದಿಂದ GRAP 2 ನಿಯಮ ಜಾರಿ - ಸಾರ್ವಜನಿಕ ಸಾರಿಗೆಯನ್ನೇ ಬಳಸುವಂತೆ ನಾಗರಿಕರಿಗೆ ದೆಹಲಿ ಸರ್ಕಾರದ ಮನವಿ

Etv Bharat
Etv Bharat (Etv Bharat)

By ETV Bharat Karnataka Team

Published : Oct 22, 2024, 6:31 AM IST

ನವದೆಹಲಿ:ದೆಹಲಿ NCR ನಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ -GRAP 2 ಜಾರಿಗೊಳಿಸಲಾಗಿದೆ. ಅಂದರೆ ಈಗ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ರಸ್ತೆಗಿಳಿಸಲು ಸಾಧ್ಯವಾಗುವುದಿಲ್ಲ. ಈ ಹೊಸ ನಿಯಮವು ಅಕ್ಟೋಬರ್ 22 ರಂದು ಅಂದರೆ ಇಂದು ಬೆಳಗ್ಗೆ 8 ರಿಂದ ಜಾರಿಗೆ ಬಂದಿದೆ. ಇದರ ಅಡಿ ಪಾರ್ಕಿಂಗ್ ಶುಲ್ಕ ಹೆಚ್ಚಿಸಲಾಗುವುದು. ಸಾರ್ವಜನಿಕ ಸಾರಿಗೆ ಉತ್ತೇಜಿಸಲು ನಿರ್ಧರಿಸಲಾಗಿದೆ.

ದೀಪಾವಳಿಗೂ ಮುನ್ನವೇ ನವದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗತೊಡಗಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ಸೋಮವಾರ 310 ಅಂಶಗಳಷ್ಟು ದಾಖಲಾಗಿದೆ. ಮಾಲಿನ್ಯ ತಡೆಗಟ್ಟಲು, ಕೇಂದ್ರ ವಾಯು ಗುಣಮಟ್ಟ ನಿರ್ವಹಣೆ (CAQM) GRAP 2 ಜಾರಿಗೆ ತರಲು ನಿರ್ಧರಿಸಿದೆ. ಈ ನಿಯಮದ ಅಡಿ ಮುಖ್ಯವಾಗಿ ಖಾಸಗಿ ಸಾರಿಗೆ ಹಾವಳಿಗೆ ಕಡಿವಾಣ ಹಾಕುವ ದೃಷ್ಟಿಯಲ್ಲಿ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಲಾಗುವುದು. ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.

ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಉತ್ತೇಜನ:

ಇದರೊಂದಿಗೆ ಹೆಚ್ಚುವರಿ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಇದು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುತ್ತದೆಯಲ್ಲದೇ ವಾಯು ಮಾಲಿನ್ಯ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಮೆಟ್ರೋ ಸೇವೆಗಳನ್ನು ಹೆಚ್ಚಿಸುವ ಮೂಲಕ, ಹೆಚ್ಚಿನ ಜನರು ಸಾರ್ವಜನಿಕ ಸಾರಿಗೆಯತ್ತ ಆಕರ್ಷಿತರಾಗುತ್ತಾರೆ. ಇದರಿಂದ ಜನರು ಖಾಸಗಿ ವಾಹನಗಳಲ್ಲಿ ಹೋಗುವುದು ಕಡಿಮೆ ಆಗುತ್ತದೆ ಅಲ್ಲದೇ ರಸ್ತೆಗಳು ಪದೇ ಪದೇ ಜಾಮ್ ಆಗುವುದನ್ನು ತಪ್ಪಿಸುತ್ತದೆ. ಈ ಕ್ರಮಗಳು ದೆಹಲಿಯ ವಾತಾವರಣದ ಗುಣಮಟ್ಟವನ್ನು ಸುಧಾರಿಸುತ್ತದೆ. ಇದೇ ವೇಳೆ ನಾಗರಿಕರು ಉತ್ತಮ ಸಾರಿಗೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದು ದೆಹಲಿ ಸರ್ಕಾರ ಬಲವಾದ ನಂಬಿಕೆ ಆಗಿದೆ. ಇದರೊಂದಿಗೆ ಹೋಟೆಲ್‌ಗಳಲ್ಲಿ ಮರದ ತುಂಡುಗಳನ್ನು ಸುಡುವುದನ್ನು ಸಹ ನಿಷೇಧಿಸಲಾಗಿದೆ.

ಇಂದಿನಿಂದ ಈ ಎಲ್ಲ ನಿರ್ಬಂಧ

  • 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ರಸ್ತೆಗಿಳಿಯುವಂತಿಲ್ಲ. ಇಂದಿನ ಕಟ್ಟುನಿಟ್ಟಿನ ತಪಾಸಣಾ ಅಭಿಯಾನ
  • ಕಸ ಸುಡುವುದನ್ನು (ಬಯೋಮಾಸ್ ಬರ್ನಿಂಗ್) ನಿಷೇಧಿಸಲಾಗಿದ್ದು, ಅಭಿಯಾನ ನಡೆಸಿ ಕಸ ಸುಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
  • ಹೋಟೆಲ್, ಢಾಬಾಗಳಲ್ಲಿ ಕಲ್ಲಿದ್ದಲು ಮತ್ತು ಮರದ ಬಳಕೆಗೆ ನಿಷೇಧ, ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ.

ಜನರಿಗೆ ಸರ್ಕಾರದ ಮನವಿ ಇದು

  • ವಾಹನದ ಎಂಜಿನ್ ಟ್ಯೂನ್ ಮಾಡಿ, ಸರಿಯಾದ ಟೈರ್ ಒತ್ತಡವನ್ನು ಕಾಪಾಡಿಕೊಳ್ಳಿ ಮತ್ತು ಅಗತ್ಯ ಪ್ರಮಾಣಪತ್ರ ಪಡೆದುಕೊಳ್ಳಿ
  • ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಹೆಚ್ಚು ಬಳಸಿ, ಕೆಂಪು ದೀಪ ಇರುವಾಗ ವಾಹನವನ್ನು ಆಫ್ ಮಾಡಿ.
  • ಕಸವನ್ನು ಸುಡಬೇಡಿ ಅಥವಾ ಬಯಲಿನಲ್ಲಿ ಕಸ ಎಸೆಯಬೇಡಿ, ಹಸಿರು ದೆಹಲಿ ಆ್ಯಪ್ ಮತ್ತು ಸಮೀರ್ ಆ್ಯಪ್‌ನಲ್ಲಿ ಮಾಲಿನ್ಯದ ಬಗ್ಗೆ ದೂರು ನೀಡಿ.
  • ಮಾಲಿನ್ಯ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಸಾರ್ವಜನಿಕ ವಾಹನಗಳನ್ನು ಸಾಧ್ಯವಾದಷ್ಟು ಬಳಸಿ.

ಇದನ್ನು ಓದಿ:ಲಡಾಖ್​ ಬೇಡಿಕೆಗಳ ಬಗ್ಗೆ ಮಾತುಕತೆಗೆ ಕೇಂದ್ರ ಒಪ್ಪಿಗೆ: ಸೋನಮ್​ ವಾಂಗ್​​ಚುಕ್​ ನೇತೃತ್ವದ ಉಪವಾಸ ಸತ್ಯಾಗ್ರಹ ಅಂತ್ಯ

ABOUT THE AUTHOR

...view details