ETV Bharat / snippets

ಹುಬ್ಬಳ್ಳಿಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಯುವಕ ಅರೆಸ್ಟ್​​

pocso case
ಕಿಮ್ಸ್ ಆಸ್ಪತ್ರೆ (ETV Bharat)
author img

By ETV Bharat Karnataka Team

Published : Jul 15, 2024, 12:32 PM IST

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಅಪ್ರಾಪ್ತೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದು, ಗರ್ಭಧರಿಸಲು ಕಾರಣನಾದ ಆರೋಪಿಯನ್ನು ಎಪಿಎಂಸಿ ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

21 ವರ್ಷದ ಯುವಕನನ್ನು ಬಂಧಿಸಿರುವ ಪೊಲೀಸರು, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 16 ವರ್ಷದ ಹುಡುಗಿಯೊಂದಿಗೆ ಸಲುಗೆಯಿಂದಿದ್ದ ಆರೋಪಿ, ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯಾಗಲು ಕಾರಣನಾಗಿದ್ದಾನೆ. ಅಪ್ರಾಪ್ತೆಗೆ ಗಂಡು ಮಗು ಜನಿಸುತ್ತಿದ್ದಂತೆ, ಕುಟುಂಬಸ್ಥರು ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣ - ಆನ್​ಲೈನ್​ ವಂಚನೆ: ಬಾಸ್ ಕ್ರಿಕೆಟ್ ಫಿಕ್ಸರ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಒಂದು ಗಂಟೆಯಲ್ಲೇ 10 ಪಟ್ಟು ಲಾಭ ಗಳಿಸಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ವಿದ್ಯಾನಗರದ ಆಶೀಷ ಅರೋರ ಎಂಬವರಿಂದ 7.49 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು, ಖಾತೆ ಐಡಿ ಮತ್ತು ಪಾಸ್‌ವರ್ಡ್ ಪಡೆದು ಕಂಪನಿ ಖಾತೆಯಲ್ಲಿ ವಹಿವಾಟು ಮಾಡುತ್ತಿದ್ದಾರೆ. ಸೈಬರ್ ಕೈಂ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.