ETV Bharat / snippets

ಶಿಮೂಲ್ ಹಾಲು‌ ಒಕ್ಕೂಟದ ಅಧ್ಯಕ್ಷರಾಗಿ ವಿದ್ಯಾಧರ್, ಉಪಾಧ್ಯಕ್ಷರಾಗಿ ಚೇತನ ನಾಡಿಗೇರ್ ಅವಿರೋಧ ಆಯ್ಕೆ

SHIMUL MILK UNION ELECTION
ಶಿಮೂಲ್ ಹಾಲು‌ ಒಕ್ಕೂಟದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳು (ETV Bharat)
author img

By ETV Bharat Karnataka Team

Published : Aug 27, 2024, 7:27 AM IST

ಶಿವಮೊಗ್ಗ: ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ (ಶಿಮೂಲ್) ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆದಿದ್ದು, ಎರಡೂ ಸ್ಥಾನಗಳಿಗೆ ಅವಿರೋಧವಾಗಿ ಅಯ್ಕೆಯಾಗಿದೆ. ಅಧ್ಯಕ್ಷರಾಗಿ ಸಾಗರ ವಿಭಾಗದಿಂದ ವಿದ್ಯಾಧರ ಹಾಗೂ ಉಪಾಧ್ಯಕ್ಷರಾಗಿ ದಾವಣಗೆರೆ ಜಿಲ್ಲೆಯ ಚೇತನ್ ಎಸ್ ನಾಡಿಗೇರ್ ಆಯ್ಕೆಯಾಗಿದ್ದಾರೆ.

ಶಿಮೂಲ್ ಹಾಲು ಒಕ್ಕೂಟವು 14 ಜನ ನಿರ್ದೆಶಕರನ್ನು ಒಳಗೊಂಡಿದ್ದು, ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿದ್ಯಾಧರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಚೇತನ ನಾಡಿಗೇರ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಇಬ್ಬರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ವಾರದ 12 ಸ್ಥಾನ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಶೇ. 80 ರಷ್ಟು ನೂತನ ನಿರ್ದೆಶಕರು ಆಯ್ಕೆ ಆಗಿದ್ದು ವಿಶೇಷವಾಗಿತ್ತು. ಸೋಮವಾರ ಸಹ ನಡೆದ ಚುನಾವಣೆಯಲ್ಲಿ ಹೊಸ ಮುಖಗಳೇ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ನವಜಾತ ಶಿಶುಗಳಿಗೆ ಅಮೃತವಾದ 'ಅಮೃತಧಾರೆ ಯೋಜನೆ' - Amruthadhare Yojana

ETV Bharat Logo

Copyright © 2024 Ushodaya Enterprises Pvt. Ltd., All Rights Reserved.