ETV Bharat / snippets

ಹಾವೇರಿ: ಮೂರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ: 23 ಲಕ್ಷ ಮೌಲ್ಯದ 29 ಬೈಕ್ ವಶ

author img

By ETV Bharat Karnataka Team

Published : Jul 2, 2024, 6:58 PM IST

three-inter-district-bike-thieves-arrested-by-police-in-haveri
ಮೂರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ (ETV Bharat)

ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದ ಮೂರು ಅಂತರ ಜಿಲ್ಲಾ ಬೈಕ್ ಕಳ್ಳರ ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನ ಮಹಮ್ಮದ್ ಮುಗಳಗೇರಿ (28), ತನ್ವೀರ್ ಲಕ್ಷ್ಮೇಶ್ವರ (28) ಖಲಂದರ ಪಠಾಣ್ (22) ಎಂದು ಗುರುತಿಸಲಾಗಿದೆ.

ಬಂಧಿತರು ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಹಾಸನ, ಬೆಂಗಳೂರು ನಗರ ಸೇರಿದಂತೆ ಹಲವು ಕಡೆ ಬೈಕ್ ಕಳ್ಳತನ ಮಾಡಿದ್ದಾರೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 23 ಲಕ್ಷ ಮೌಲ್ಯದ 29 ಬೈಕ್​ಗಳನ್ನ ವಶಪಡಿಸಿಕೊಳ್ಳಲಾಗಿದೆ.

ರಾಣೇಬೆನ್ನೂರು ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣನವರ್, ಸಿಪಿಐ ಡಾ. ಶಂಕರ್ ಹಾಗೂ ಪಿಎಸ್ಐ ಗಡ್ಡೇಪ್ಪ ಗುಂಜಟಗಿ ನೇತೃತ್ವದಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ.

ಇದನ್ನೂ ಓದಿ : ಹಾವೇರಿ: ಇಬ್ಬರು ಬೈಕ್‌ ಕಳ್ಳರು ಅರೆಸ್ಟ್, 13 ಬೈಕ್ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.