ETV Bharat / snippets

ಡಿಜಿಟಲ್ ಎಫ್‌ಟಿವಿಆರ್ ಮೂಲಕ 1.02 ಲಕ್ಷ ಸಂಚಾರ ಉಲ್ಲಂಘನೆ ಕೇಸು ದಾಖಲು

ಬೆಂಗಳೂರು ಸಂಚಾರ ಪೊಲೀಸ್​
ಬೆಂಗಳೂರು ನಗರ ಸಂಚಾರ ಪೊಲೀಸ್​ (ETV Bharat)
author img

By ETV Bharat Karnataka Team

Published : May 28, 2024, 7:08 AM IST

ಬೆಂಗಳೂರು: ಡಿಜಿಟಲ್ ಎಫ್‌ಟಿವಿಆರ್ ಕ್ಯಾಮೆರಾಗಳ ನೆರವಿನಿಂದ ಫೋಟೊಗಳನ್ನು ಆಧರಿಸಿ 2024ನೇ ಸಾಲಿನಲ್ಲಿ (ಮೇ 27ರವರೆಗೆ) ಸದಾಶಿವನಗರದ ಸಂಚಾರ ಠಾಣೆ ವ್ಯಾಪ್ತಿಯೊಂದರಲ್ಲೇ 1.02 ಲಕ್ಷ ಸಂಚಾರ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಯಿಂದ ಸಂಭವಿಸುವ ಅಪಘಾತಗಳನ್ನು ನಿಯಂತ್ರಿಸಲು ನಗರ ಸಂಚಾರ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ. ಪ್ರತಿಯೊಂದು ಸಿಗ್ನಲ್‌ಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರ ವಾಹನದ ನಂಬರ್​ ಸಮೇತ ಫೋಟೋಗಳು ಆ ಕ್ಯಾಮೆರಾಗಳಲ್ಲಿ ಸೆರೆಯಾಗುತ್ತವೆ. ಇದರ ಆಧಾರದ ಮೇಲೆ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ದಂಡ ಬಾಕಿ ಇರುವ ವಾಹನ ಸವಾರರ ಮೊಬೈಲ್​ ಹಾಗೂ ಮನೆಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂಓದಿ: ಆಟೋ ಪ್ರಯಾಣಕ್ಕೆ ಶೇ.5ರಷ್ಟು ಮಾತ್ರ ಜಿಎಸ್​ಟಿ: ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್ - GST on auto rides

ETV Bharat Logo

Copyright © 2024 Ushodaya Enterprises Pvt. Ltd., All Rights Reserved.