ಚಾಮರಾಜನಗರ: ಕೇರಳ ವಯನಾಡಿನ ಗುಡ್ಡ ಕುಸಿತ ಸ್ಥಳಕ್ಕೆ ಗುಂಡ್ಲುಪೇಟೆ ಶಾಸಕ ಹೆಚ್.ಎಂ. ಗಣೇಶಪ್ರಸಾದ್ ಭೇಟಿ ನೀಡಿ, ಪರಿಶೀಲನೆ ನಡೆಸುವ ಜೊತೆಗೆ, ಸಂತ್ರಸ್ತ ಕನ್ನಡಿಗರಿಂದ ಮಾಹಿತಿ ಪಡೆದರು.
ವಯನಾಡಿನ ಮುಂಡಕ್ಕೈ, ಚುರಾಲ್ ಮಲೆ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ನೈಜತೆ ಅರಿಯುವ ಜೊತೆಗೆ ಅಲ್ಲಿನ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ಗುಡ್ಡ ಕುಸಿತದಲ್ಲಿ ನಿರಾಶ್ರಿತರಾಗಿರುವ ಚಾಮರಾಜನಗರ ಜಿಲ್ಲೆಯ ಕೆಲ ಜನರನ್ನು ಭೇಟಿ ಮಾಡಿ ವೈಯಕ್ತಿಕ ನೆರವಿನ ಚೆಕ್, ವಿವಿಧ ಪರಿಕರಗಳನ್ನು ನೀಡಿ, ಸಾಂತ್ವನ ಹೇಳಿದರು.
ಸಮಸ್ಯೆ ಇದ್ದರೇ ದೂರವಾಣಿ ಮೂಲಕ ತಿಳಿಸಿ, ಕರ್ನಾಟಕ ಸರ್ಕಾರ ಕನ್ನಡಿಗರ ರಕ್ಷಣೆಗೆ ಇರಲಿದೆ. ನಿಮಗೆ 100 ಮನೆಗಳನ್ನು ನಿರ್ಮಿಸಿ ಕೊಡಲಿದೆ, ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ವಯನಾಡ್ ದುರಂತ: ಜನರನ್ನು ಕಾಪಾಡಲು ತೆರಳಿದ್ದ 'ಸೂಪರ್ ಹೀರೋ' ವಾಪಸ್ ಬರಲೇ ಇಲ್ಲ - Wayanad Landslides