ಮೈಸೂರು: "ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಯುವಕರ ಮೆದುಳು ನಿಷ್ಕ್ರಿಯವಾಗಿದ್ದು, ಕುಟುಂಬದ ಇಚ್ಛೆಯಂತೆ ಯುವಕರ ಅಂಗಾಂಗ ದಾನ ಮಾಡಿ 10 ಜನರಿಗೆ ಜೀವ ಜೀವದಾನ ಮಾಡಲಾಗಿದೆ" ಎಂದು ಅಪೊಲೋ ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ. ಭರತ್ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಅಶೋಕ್ (34) ಹಾಗೂ ವಿಮೂಲ ತರುಣ್ (22) ಅವರನ್ನು ಮೇ 25 ಮತ್ತು 26ರಂದು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೇ 28ರಂದು ಇಬ್ಬರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯ ಬಳಿಕ ಇವರ ಅಂಗಾಂಗಗಳು ದಾನಕ್ಕೆ ಯೋಗ್ಯವೆಂದು ಕಂಡು ಬಂದ ಹಿನ್ನೆಲೆ ಕುಟುಂಬದವರ ಅನುಮತಿ ಪಡೆದು ಅಂಗಾಂಗ ದಾನ ಪ್ರಕ್ರಿಯೆ ನಡೆಸಲಾಯಿತು." ಎಂದು ತಿಳಿಸಿದ್ದಾರೆ.
10 ಜನರಿಗೆ ಜೀವದಾನ: ಅಶೋಕ್ ಎಂಬ ಯುವಕನ ಯಕೃತ್, ಹೃದಯ, ಮೂತ್ರಪಿಂಡ, ಕಾರ್ನೀಯಾಗಳನ್ನು ಹಾಗೂ ತರುಣ್ ಎಂಬ ಯುವಕನ ಯಕೃತ್, ಹೃದಯದ ಕವಾಟಗಳು, ಮೂತ್ರಪಿಂಡ, ಹಾಗೂ ಕಾರ್ನೀಯಾಗಳನ್ನು 10 ಜನರಿಗೆ ನೀಡಿ ಜೀವದಾನ ಮಾಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.