ETV Bharat / entertainment

'ಕೆಜಿಎಫ್ 2'ನಿಂದಾಗಿ ಚಿತ್ರರಂಗ ಮಿಂಚಿದೆ: ಯಶ್ ಗುಣಗಾನ ಮಾಡಿದ ಸೌತ್ ಸೂಪರ್​ಸ್ಟಾರ್ - YASH

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಯಶ್ ಅವರನ್ನು ಸೌತ್​ ಸೂಪರ್​ ಸ್ಟಾರ್ ಶಿವಕಾರ್ತಿಕೇಯನ್ ಗುಣಗಾನ ಮಾಡಿದ್ದಾರೆ.

Rocking star Yash
ರಾಕಿಂಗ್​ ಸ್ಟಾರ್​ ಯಶ್​​ (Photo: ETV Bharat)
author img

By ETV Bharat Entertainment Team

Published : Nov 25, 2024, 5:03 PM IST

Updated : Nov 25, 2024, 5:12 PM IST

ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ ಕಳೆದ ಶನಿವಾರ ಗೋವಾದಲ್ಲಿ ನಡೆದ ಇಂಟರ್​ನ್ಯಾಷನಲ್​ ಫಿಲ್ಮ್ ಫೆಸ್ಟಿವಲ್​ ಆಫ್​ ಇಂಡಿಯಾ (ಐಎಫ್‌ಎಫ್‌ಐ)ಗೆ ಸಾಕ್ಷಿಯಾಗಿದ್ದರು. "ಫ್ರಂ ಸ್ಮಾಲ್​ ಸ್ಕ್ರೀನ್​​​ ಟು ಬಿಗ್ ಡ್ರೀಮ್ಸ್" ಎಂಬ ಮಾಸ್ಟರ್‌ಕ್ಲಾಸ್‌ನಲ್ಲಿ ಅತಿಥಿಯಾಗಿ ಭಾಗವಹಿಸಿದರು. ಈ ಸೆಷನ್​ನಲ್ಲಿ ಶಿವಕಾರ್ತಿಕೇಯನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಯಶ್ ಅವರನ್ನು ಶ್ಲಾಘಿಸಿದರು. ಕನ್ನಡ ಚಿತ್ರರಂಗಕ್ಕೆ ಯಶ್ ಅವರ ಅಪಾರ ಕೊಡುಗೆಗಳ ಬಗ್ಗೆ ಮಾತನಾಡಿ ಗೌರವ ಸೂಚಿಸಿದರು.

ಸಣ್ಣ ಪರದೆಯಿಂದಲೇ ನಟನೆ ಪ್ರಾರಂಭ: ಕಿರುತೆರೆಯಿಂದ ವೃತ್ತಿಜೀವನ ಪ್ರಾರಂಭಿಸಿದ ಶಿವಕಾರ್ತಿಕೇಯನ್ ಪ್ರಯಾಣವು ಯಶ್ ಪ್ರಯಾಣದೊಂದಿಗೆ ಆಳ ಸಂಪರ್ಕ ಹೊಂದಿದೆ. ಏಕೆಂದರೆ ಇಬ್ಬರೂ ಸಣ್ಣ ಪರದೆಯಿಂದಲೇ ನಟನೆ ಪ್ರಾರಂಭಿಸಿ ಇದೀಗ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಾಧನೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಕಾರ್ತಿಕೇಯನ್ ಹೇಳಿದ್ದಿಷ್ಟು: ಸೆಷನ್​​ನಲ್ಲಿ ಮಾತನಾಡಿದ ಶಿವಕಾರ್ತಿಕೇಯನ್, "ನಾನು ಎಲ್ಲರ ಕೆಲಸವನ್ನು ಇಷ್ಟ ಪಡುತ್ತೇನೆ. ಒಂದೊಳ್ಳೆ ಸಿನಿಮಾ ಬಂದಾಗಲೆಲ್ಲಾ ವೀಕ್ಷಿಸುತ್ತೇನೆ. ಜೊತೆಗೆ ಅವರ ಕೆಲಸವನ್ನು ಗೌರವಿಸುತ್ತೇನೆ. ಆದ್ರೆ, ಕನ್ನಡ ಚಿತ್ರರಂಗಕ್ಕೆ ಯಶ್ ಅವರ ಕೊಡುಗೆ ಅದ್ಭುತ. 'ಕೆಜಿಎಫ್ 1' ಕನ್ನಡ ಚಿತ್ರರಂಗದ ಯಶಸ್ಸು. ಆದರೆ 'ಕೆಜಿಎಫ್ 2' ಭಾರತೀಯ ಚಿತ್ರರಂಗದ ಯಶಸ್ಸು'' ಎಂದು ಗುಣಗಾನ ಮಾಡಿದರು.

ಯಶ್​ ಶ್ಲಾಘನೆಗೆ ಅರ್ಹ: ಮನರಂಜನಾ ಕ್ಷೇತ್ರಕ್ಕೆ ಯಶ್ ಅವರ ಕೊಡುಗೆ ಕುರಿತು ಮಾತನಾಡಿದ ಅವರು, ''ಯಶ್ ಅವರ ಸಿನಿಮಾಗಳು ಶ್ಲಾಘನೆಗೆ ಅರ್ಹ. ಅವರು ತಮ್ಮ ಬೆಳವಣಿಗೆ ಜೊತೆಗೆ ಚಿತ್ರರಂಗಕ್ಕೆ ಹೊಸ ದಿಕ್ಕನ್ನೂ ನೀಡಿದ್ದಾರೆ. ನಾನು ಯಾವಾಗಲೂ ಯಶ್ ಅವರ ಕೆಲಸವನ್ನು ಮೆಚ್ಚುತ್ತೇನೆ. ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ'' ಎಂದು ತಿಳಿಸಿದ್ದಾರೆ.

ಈ ಮಾಸ್ಟರ್‌ಕ್ಲಾಸ್ ಪರಿಶ್ರಮದ ಶಕ್ತಿಯ ಬಗ್ಗೆ ಬೆಳಕು ಚೆಲ್ಲಿತು. ಶಿವಕಾರ್ತಿಕೇಯನ್ ಮತ್ತು ಯಶ್ ಅವರಂತಹ ನಟರು ಹೇಗೆ ಗಡಿಗಳನ್ನು ದಾಟಿ ತಮ್ಮ ಮತ್ತು ಚಿತ್ರರಂಗದ ಜನಪ್ರಿಯತೆ ಹೆಚ್ಚಿಸಿದ್ದಾರೆ, ಜೊತೆಗೆ ಸ್ಮಾಲ್​​ ಸ್ಕ್ರೀನ್​ನಿಂದ ಬಿಗ್​ ಸ್ಕ್ರೀನ್​​​ವರೆಗೆ ಹೇಗೆ ವಿಕಸನಗೊಂಡಿದ್ದಾರೆ ಎಂಬುದು ಯುವ ಪೀಳಿಗೆಗೆ ಸ್ಫೂರ್ತಿ ಅಂತಲೇ ಹೇಳಬಹುದು.

ಇದನ್ನೂ ಓದಿ: 'ನನ್ನ ಹುಡುಗ, ಮದುವೆ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿರುವುದೇ': ಹಾಗಾದ್ರೆ, ರಶ್ಮಿಕಾ ಮಂದಣ್ಣ ಬಾಯ್​ಫ್ರೆಂಡ್​ ಯಾರು?

ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿರುವ ಯಶ್ ಮುಖ್ಯಭೂಮಿಕೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್​​'. ಕೆಜಿಎಫ್​ ಅಮೋಘ ಅಭಿನಯದ ಮೂಲಕ ಸಿನಿಪ್ರಿಯ ಜೊತೆಗೆ ಸಿನಿತಾರೆಯರ ಮೆಚ್ಚುಗೆಗೆ ಪಾತ್ರರಾಗಿರುವ ಯಶ್​ ನಟನೆಯ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸದ್ಯ ಟಾಕ್ಸಿಕ್​ ಶೂಟಿಂಗ್​​ ಮುಂಬೈನಲ್ಲಿ ನಡೆಯುತ್ತಿದ್ದು, ಯಶ್​ ಮತ್ತು ಬಾಲಿವುಡ್​ ಬೆಡಗಿ ಕಿಯಾರಾ ಅಡ್ವಾಣಿ ಅವರ ಫೋಟೋ ವಿಡಿಯೋಗಳು ವೈರಲ್​ ಆಗಿವೆ. ಸಿನಿಮಾ 2025ರ ಏಪ್ರಿಲ್​ನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಮುರುಡೇಶ್ವರದಲ್ಲಿ ಡಾಲಿ ಜಾಲಿ: ನೇತ್ರಾಣಿಯಲ್ಲಿ ನಟ ಧನಂಜಯ್ ಸ್ಕೂಬಾ ಡೈವಿಂಗ್ - ವಿಡಿಯೋ ನೋಡಿ

ಟಾಕ್ಸಿಕ್ ಅಲ್ಲದೇ ಬಾಲಿವುಡ್​ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ'ದಲ್ಲೂ ಪ್ರಮುಖ ಪಾತ್ರ ವಹಿಸಲಿದ್ದಾರೆ. ರಣ್​​​​​ಬೀರ್ ಕಪೂರ್ ಭಗವಾನ್ ಶ್ರೀರಾಮನ ಪಾತ್ರ, ನ್ಯಾಚುರಲ್​ ಬ್ಯೂಟಿ ಸಾಯಿ ಪಲ್ಲವಿ ಸೀತಾ ಮಾತೆ ಪಾತ್ರ ವಹಿಸಿದರೆ ಕೆಜಿಎಫ್​​ ಸ್ಟಾರ್​ ಯಶ್​ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗ 2026ರ ದೀಪಾವಳಿಯಲ್ಲಿ ಮತ್ತು ಎರಡನೇ ಭಾಗ 2027ರ ದೀಪಾವಳಿ ಸಂದರ್ಭ ತೆರೆಕಾಣಲಿದೆ.

Last Updated : Nov 25, 2024, 5:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.