ETV Bharat / snippets

ಬೆಂಗಳೂರು: ನೈಸ್ ರಸ್ತೆಯಲ್ಲಿ ಭೀಕರ ಅಪಘಾತ, ಗ್ರಾಪಂ ಸದಸ್ಯ ಸೇರಿ ಮೂವರ ದುರ್ಮರಣ

HORRIBLE ACCIDENT ON NICE ROAD
ಅಪಘಾತದ ಸ್ಥಳ (ETV Bharat)
author img

By ETV Bharat Karnataka Team

Published : Jul 15, 2024, 6:03 PM IST

Updated : Jul 15, 2024, 7:04 PM IST

ಬೆಂಗಳೂರು: ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನೈಸ್ ರಸ್ತೆಯ ಬನ್ನೇರುಘಟ್ಟ ಟೋಲ್ ಬಳಿ ನಡೆದಿದೆ. ವಿರುದ್ಧ ದಿಕ್ಕಿನಿಂದ ಬಂದ ಮಹೀಂದ್ರಾ ಸ್ಕಾರ್ಪಿಯೋ ಕಾರು ರಸ್ತೆ ವಿಭಜಕ ದಾಟಿ ಎಕ್ಸ್‌ಯುವಿ 700 ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಕಾರ್ಪಿಯೋ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಮನಗರ ಮೂಲದ ನಂಜೇಶ್(35), ವಿನೋದ್(34) ಹಾಗೂ ಕುಮಾರ್(35) ಮೃತರು. ಎಕ್ಸ್‌ಯುವಿ 700 ಕಾರಿನಲ್ಲಿದ್ದ ಶಿವರಾಮಕೃಷ್ಣ ಹಾಗೂ ಪ್ರಸನ್ನ ಎಂಬುವವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ಪೈಕಿ ವಿನೋದ್, ಕನಕಪುರದ ಶಿವನಳ್ಳಿ ನಿವಾಸಿಯಾಗಿದ್ದು, ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದ. ಕುಮಾರ್ ರಾಮನಗರದ ಚೀಲೂರು ಗ್ರಾಮದವನಾದರೆ, ನಂಜೇಶ್ ಕಾಳೇಗೌಡನ ದೊಡ್ಡಿಯ ನಿವಾಸಿಯಾಗಿದ್ದ. ಮೂವರೂ ಗೋವಾಗೆ ತೆರಳಲು ಬೆಂಗಳೂರಿನತ್ತ ಬರುತ್ತಿದ್ದರು.

ಈ ವೇಳೆ ಮಳೆಯಿಂದಾಗಿ ರಸ್ತೆ ಸರಿಯಾಗಿ ಗೋಚರಿಸದೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ನಿಯಂತ್ರಣಕ್ಕೆ ಸಿಗದಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಎಕ್ಸ್‌ಯುವಿ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Jul 15, 2024, 7:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.