ಬನ್ನಿ ಪೂಜೆ ಮೂಲಕ ಅರಮನೆಯ ರಾಜಪಾರಂಪರೆಯ ಶರನ್ನವರಾತ್ರಿ ಆಚರಣೆ ಸಂಪನ್ನ: ವಿಡಿಯೋ
🎬 Watch Now: Feature Video
ಮೈಸೂರು: ವಿಶ್ವ ವಿಖ್ಯಾತ ಮೈಸೂರು ರಾಜ ಪಾರಂಪರೆಯ ಶರನ್ನವರಾತ್ರಿಯ 10ನೇ ದಿನ ರಾಜವಂಶಸ್ಥರು ವಿಜಯಯಾತ್ರೆಯ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಸಮಿ ಅಥವಾ ಬನ್ನಿ ಪೂಜೆ ಮಾಡುವುದು ವಿಶೇಷ ಪದ್ಧತಿ. ಆ ಸಂಪ್ರದಾಯದಂತೆ ಇಂದು ಅರಮನೆಯ ರಾಜಪಾರಂಪರೆಯ ಶರನ್ನವರಾತ್ರಿ ಆಚರಣೆಗಳು ಮುಕ್ತಾಯವಾದವು.
ಶರನ್ನವರಾತ್ರಿಯ ವಿಜಯದಶಮಿ ದಿನ ರಾಜವಂಶಸ್ಥರಾದ ಯದುವೀರ್ ಒಡೆಯರ್ ಅರಮನೆಯಲ್ಲಿ ಗರಿಕೆ, ಧಾರ್ಮಿಕ ಕೈಂಕರ್ಯಗಳನ್ನ ಕೈಗೊಂಡರು. ಬೆಳಗ್ಗೆ ಕೋಡಿ ಸೋಮೇಶ್ವರ ದೇವಸ್ಥಾನದಿಂದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳ ಮೂಲಕ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿ ದೇವರನ್ನು ತರುವ ಕಾರ್ಯಕ್ರಮ ನಡೆಯಿತು. ನಂತರ ಉತ್ತರ ಪೂಜೆ ನಡೆಸಲಾಯಿತು. ಆ ನಂತರ ಆನೆ ಬಾಗಿಲಿನ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗದ ನಂತರ ಸಾಂಪ್ರದಾಯಿಕ ಧಿರಿಸಿನೊಂದಿಗೆ ವಿಜಯ ಯಾತ್ರೆ ಹೊರಟ ಯದುವೀರ್ ಒಡೆಯರ್, ಆ ಬಳಿಕ ಸಮಿ ಪೂಜೆಯನ್ನು ಸಾಂಪ್ರದಾಯಿಕವಾಗಿ ಕೈಗೊಂಡರು. ಪೂಜೆ ಬಳಿಕ ಅರಮನೆಗೆ ತೆರಳಿ ಯದುವೀರ್ ಕಂಕಣ ವಿಸರ್ಜನೆ ಮಾಡಿದರು.
ಈ ಮೂಲಕ ನಾಡಹಬ್ಬ ದಸರಾದ ಅಂತಿಮ ದಿನವಾದ ವಿಜಯದಶಮಿಯಂದು (ಇಂದು) ಅರಮನೆಯಲ್ಲಿ ಸಾಂಪ್ರದಾಯಿಕ ದಸರಾ ಸಂಪನ್ನಗೊಂಡಿತು. ಬೆಳಗ್ಗೆಯಿಂದಲೇ ವಿಜಯದಶಮಿ ಧಾರ್ಮಿಕ ಕಾರ್ಯಕ್ರಮಗಳು ಅರಮನೆಯಲ್ಲಿ ವಿಜೃಂಭಣೆಯಿಂದ ಜರುಗಿದವು.
ಇದನ್ನೂ ಓದಿ: ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; 5ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು