ಉಚ್ಚಿಲ ದಸರಾ: ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ- ವಿಡಿಯೋ - UCHILA DASARA 2024
🎬 Watch Now: Feature Video
Published : Oct 8, 2024, 7:21 PM IST
ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 'ಉಚ್ಚಿಲ ದಸರಾ-2024' ಕಾರ್ಯಕ್ರಮಗಳು ನಡೆಯುತ್ತಿವೆ. ಸೋಮವಾರ ಲಲಿತಾ ಪಂಚಮಿಯಂದು ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು.
ದೇವರ ಸ್ತುತಿಗಳನ್ನು ಶೃತಿಬದ್ಧವಾಗಿ ಕೇಳುವ ಅಪೂರ್ವ ಅವಕಾಶ ಭಕ್ತರಿಗೆ ದೊರೆಯಿತು. ವಿದ್ವಾನ್ ಪವನಾ ಆಚಾರ್ಯ ಅವರ ನೇತೃತ್ವದ ತಂಡ ಎರಡು ಗಂಟೆಗಳಿಗೂ ಅಧಿಕ ಕಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಒಂದೇ ಸೂರಿನಡಿ ನವದುರ್ಗೆಯರ ಬೃಹತ್ ವಿಗ್ರಹ: ಮಂಗಳೂರು ದಸರಾ ಎಂದರೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ನವರಾತ್ರಿ ಉತ್ಸವ. ಇಲ್ಲಿನ ವಿಶೇಷತೆಯೆಂದರೆ, ನವದುರ್ಗೆಯರ ಆರಾಧನೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಒಂದೇ ಸೂರಿನಡಿ ನವದುರ್ಗೆಯರನ್ನು ಇರಿಸಿ ಆರಾಧಿಸಲಾಗುತ್ತಿದೆ.
ಶಾರದೆಯನ್ನು ಮಧ್ಯದಲ್ಲಿ ಮತ್ತು ಗಣಪತಿಯನ್ನು ಮುಂಭಾಗದಲ್ಲಿಟ್ಟು ನವದುರ್ಗೆಯರನ್ನು ಆರಾಧಿಸಲಾಗುತ್ತಿದೆ. ಶಾರದೆ, ಗಣಪತಿ ಮತ್ತು ನವದುರ್ಗೆಯರ ಬೃಹತ್ ಮೂರ್ತಿಗಳನ್ನು ಮಾಡಿ ಪೂಜಿಸಲಾಗುತ್ತದೆ. ಈ ರೀತಿ ಒಂದೇ ಸೂರಿನಡಿ ನವದುರ್ಗೆಯರನ್ನು ಆರಾಧಿಸುವ ಕಲ್ಪನೆ ಆರಂಭವಾದದ್ದು ಮಂಗಳೂರು ದಸರಾದಲ್ಲಿ ಎನ್ನುವುದು ವಿಶೇಷ.
ಇದನ್ನೂ ಓದಿ: ಯುವ ದಸರಾ: ರವಿ ಬಸ್ರೂರು ಮ್ಯೂಸಿಕ್ಗೆ ಕುಣಿದು ಕುಪ್ಪಳಿಸಿದ ಜನತೆ; ಪ್ರೇಕ್ಷಕರ ಮನಗೆದ್ದ ವಿವಿಧ ತಂಡಗಳು