ದೆಹಲಿಯತ್ತ ರಾಜ್ಯ ಬಿಜೆಪಿ ನಾಯಕರು: ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸುಧಾಕರ್ - BJP Leaders visit to delhi
🎬 Watch Now: Feature Video
Published : Mar 11, 2024, 1:13 PM IST
|Updated : Mar 11, 2024, 2:07 PM IST
ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇದೀಗ ಕೊನೆಯ ಹಂತದ ಟಿಕೆಟ್ ಫೈನಲ್ಗೆ ರಾಜ್ಯದ ಬಿಜೆಪಿ ನಾಯಕರು ದೆಹಲಿಯತ್ತ ಪಯಣ ಬೆಳೆಸಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್, 11.30ರ ವಿಸ್ತಾರ ವಿಮಾನದಲ್ಲಿ ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿದರು.
ಟಿಕೆಟ್ ಪಡೆಯಲು ಕೊನೆಯ ಹಂತದಲ್ಲಿ ಕಸರತ್ತು ನಡೆಸಿರುವ ಮಾಜಿ ಸಚಿವ ಕೆ.ಸುಧಾಕರ್ ಅವರು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಬಿಜೆಪಿ ನಾಯಕರನ್ನು ಬೀಳ್ಕೊಟ್ಟರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಸುಧಾಕರ್, ನಾಯಕರನ್ನು ದೆಹಲಿಗೆ ಕಳಿಸಲು ಏರ್ಪೋರ್ಟ್ಗೆ ಆಗಮಿಸಿದ್ದರು. ಏರ್ಪೋರ್ಟ್ನಲ್ಲಿ ಟರ್ಮಿನಲ್ವರೆಗೂ ಬೊಮ್ಮಾಯಿ ಅವರನ್ನು ಬೀಳ್ಕೊಟ್ಟಿದ್ದು, ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆನ್ನಲಾಗಿದೆ.
ವಿವಾದವಿಲ್ಲದ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಬಿಜೆಪಿ ನಿರ್ಧರಿಸಿದ್ದು, ಇಂದು ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲಿರುವ ಸಂಸದರ ಹೆಸರು, ವಿವಾದವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಕೇಂದ್ರ ಸಚಿವರಾಗಿರುವ ರಾಜ್ಯಸಭಾ ಸದಸ್ಯರ ಸ್ಪರ್ಧೆಗೆ ಅವಕಾಶ ನೀಡಿದರೆ ಅವರ ಹೆಸರುಗಳು ಇರಲಿವೆ ಎನ್ನಲಾಗಿದೆ.
ಇದನ್ನೂ ನೋಡಿ: ಬಿಜೆಪಿಯವರು ಕಪಟ ನಾಟಕ ಬಿಟ್ಟು ಬರ ಪರಿಹಾರ ಕೊಡಿಸಲಿ: ಡಿಸಿಎಂ ಡಿಕೆಶಿ