ಬೆಕ್ಕಿನ ಮರಿ ನುಂಗಿ ಪರದಾಡಿದ ನಾಗರಹಾವಿನ ರಕ್ಷಣೆ- ವಿಡಿಯೋ - Snake Swallowed Kitten - SNAKE SWALLOWED KITTEN
🎬 Watch Now: Feature Video
Published : Apr 12, 2024, 9:58 PM IST
ಚಿಕ್ಕಮಗಳೂರು: ನಾಗರಹಾವೊಂದು ಮನೆಯಲ್ಲಿದ್ದ ಬೆಕ್ಕಿನ ಮರಿ ನುಂಗಿರುವ ಘಟನೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ (ಮಂಗಳವಾರ) ನಡೆದಿದೆ.
ತರುವೆ ಗ್ರಾಮದ ದೀಕ್ಷಿತ್ ಎಂಬವರ ಮನೆಗೆ ನುಸುಳಿದ ಹಾವು ನೇರವಾಗಿ ಮಂಚದ ಕೆಳಗೆ ಸೇರಿದೆ. ಮನೆಯಲ್ಲಿದ್ದವರು ಯುಗಾದಿ ಹಬ್ಬದ ಸಿದ್ಧತೆಯಲ್ಲಿದ್ದ ಕಾರಣ ಯಾರೂ ಹಾವನ್ನು ಗಮನಿಸಿರಲಿಲ್ಲ. ನಂತರ ಬೆಕ್ಕಿನ ಮರಿಯನ್ನು ನುಂಗಿ ಹೊರ ಬಂದು ಮುಂದೆ ಸಂಚರಿಸಲಾಗದೆ ಪರದಾಡುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗತಜ್ಞ ಸ್ನೇಕ್ ಆರೀಫ್ ಬೆಕ್ಕಿನ ಮರಿ ನುಂಗಿದ್ದರಿಂದ ಸುಸ್ತಾಗಿ ಸಂಚರಿಸಲಾಗದೆ ಪರದಾಡುತ್ತಿದ್ದ ಹಾವನ್ನು ಸೆರೆಹಿಡಿದು ಬೆಕ್ಕಿನ ಮರಿಯನ್ನು ಕಕ್ಕಿಸಿದ್ದಾರೆ. ನಂತರ ಸುರಕ್ಷಿತವಾಗಿ ಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ವೃದ್ಧನ ಎದೆ ಏರಿ ಕುಳಿತ ನಾಗರಹಾವು(ಶಿವಮೊಗ್ಗ): ಇತ್ತೀಚಿಗೆ, ಮನೆಯಲ್ಲಿ ಟಿವಿ ನೋಡುತ್ತಾ ಹಾಯಾಗಿ ಮಲಗಿದ್ದ ವೃದ್ಧನ ಎದೆ ಮೇಲೆ ನಾಗರಹಾವು ಕುಳಿತುಕೊಂಡಿದ್ದ ಘಟನೆ ಶಿವಮೊಗ್ಗದ ಮಲವಗೊಪ್ಪ ಬಡಾವಣೆಯಲ್ಲಿ ನಡೆದಿತ್ತು. ಭೈರಪ್ಪ ಎಂಬವರು ತಮ್ಮ ಮನೆಯಲ್ಲಿ ಟಿವಿ ನೋಡುತ್ತಾ ಮಂಚದ ಮೇಲೆ ಮಲಗಿದ್ದರು. ಈ ವೇಳೆ ಮನೆಯೊಳಗೆ ಹರಿದು ಬಂದ ಹಾವು ಭೈರಪ್ಪರ ಎದೆ ಮೇಲೇರಿ ಕುಳಿತುಕೊಂಡಿದೆ. ಇದನ್ನು ಕಂಡು ಭಯಗೊಂಡ ಅವರು ತಕ್ಷಣ ಹಾವನ್ನು ಬದಿಗೆ ತಳ್ಳಿದ್ದರು. ಕೆಳಗೆ ಬಿದ್ದ ಹಾವು ಮಂಚದ ಕೆಳಕ್ಕೆ ಹೋಗಿ ಸೇರಿಕೊಂಡಿತ್ತು. ಕೂಡಲೇ ವೃದ್ಧನ ಮಗ ಉರಗ ರಕ್ಷಕ ಕಿರಣ್ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಕಿರಣ್ 3 ಅಡಿ ಉದ್ದದ ನಾಗರಹಾವನ್ನು ರಕ್ಷಣೆ ಮಾಡಿದ್ದರು.
ಇದನ್ನೂ ಓದಿ: ಮಾರಣಾಂತಿಕ ಹಾವಿನ ವಿಷ ತಟಸ್ಥಗೊಳಿಸುವ ಹೊಸ ಪ್ರತಿಕಾಯ ಕಂಡುಹಿಡಿದ ಬೆಂಗಳೂರಿನ ಐಐಎಸ್ಸಿ ವಿಜ್ಞಾನಿಗಳು