19 ವರ್ಷ ದೇಶ ಸೇವೆ ಮಾಡಿ ತಾಯ್ನಾಡಿಗೆ ಮರಳಿದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ - Grand Welcome for Soldier - GRAND WELCOME FOR SOLDIER
🎬 Watch Now: Feature Video


Published : Aug 5, 2024, 5:49 PM IST
ಹಾವೇರಿ: 19 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ನಿವೃತ್ತ ಯೋಧನಿಗೆ ಹಾವೇರಿಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಸವಣೂರು ತಾಲೂಕಿನ ಕಡಕೋಳ ಗ್ರಾಮದ ನಿವಾಸಿಯಾಗಿರುವ ಮಂಜಪ್ಪ ಬಡಗೌಡ್ರ, 2005ರಲ್ಲಿ ಸೇನೆ ಸೇರಿದ್ದರು. ಜಮ್ಮು ಕಾಶ್ಮೀರ, ಚೀನಾ ಗಡಿ, ಬಾಂಗ್ಲಾ ದೇಶ ಗಡಿಪ್ರದೇಶಗಳೂ ಸೇರಿದಂತೆ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿ, ಇದೀಗ ನಿವೃತ್ತರಾಗಿ ತಾಯ್ನಾಡಿಗೆ ಮರಳಿದ್ದಾರೆ.
ಮಂಜಪ್ಪ ಬಡಗೌಡ್ರ ನಗರದ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಪುಷ್ಪಮಾಲೆ ಹಾಕಿ ಕುಟುಂಬಸ್ಥರು ಸ್ವಾಗತಿಸಿದರು. ಅಭಿಮಾನಿಗಳು ಹಾಗೂ ದೇಶಪ್ರೇಮಿಗಳು ತೆರೆದ ವಾಹನದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ನಿವೃತ್ತ ಯೋಧ ಮಂಜಪ್ಪ ಮಾತನಾಡಿ, 19 ವರ್ಷಗಳ ಕಾಲ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಮಾಡಿದ ಭಾರತಾಂಬೆಯ ಸೇವೆಯನ್ನು ಸ್ಮರಿಸಿದರು. ದೇಶದ ಗಡಿ ರಕ್ಷಣೆಯ ಸೌಭಾಗ್ಯ ಸಿಕ್ಕಿದ್ದಕ್ಕೆ ಧನ್ಯತೆ ವ್ಯಕ್ತಪಡಿಸಿದರು.