ಶ್ವಾನ ಪ್ರದರ್ಶನದಲ್ಲಿ ಸುಧಾಮೂರ್ತಿಯ 'ಗೋಪಿ': ಪ್ರಾಣಿ ಪ್ರೀತಿ ಬಗ್ಗೆ ರಾಜ್ಯಸಭೆ ಸದಸ್ಯೆ ಹೇಳಿದ್ದೇನು? - PET SHOW

🎬 Watch Now: Feature Video

thumbnail

By ETV Bharat Karnataka Team

Published : Oct 7, 2024, 8:03 PM IST

ಮೈಸೂರು: ನಾಡಹಬ್ಬ ಮೈಸೂರು ‌ದಸರಾ ಅಂಗವಾಗಿ ಜೆ.ಕೆ.ಮೈದಾನದಲ್ಲಿ 'ಮುದ್ದು ಪ್ರಾಣಿಗಳ ಪ್ರದರ್ಶನ' ಸ್ಪರ್ಧೆಯಲ್ಲಿ 45 ತಳಿಗಳ ಶ್ವಾನಗಳು ಭಾಗವಹಿಸಿದ್ದವು. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರ ಪ್ರೀತಿಯ ಶ್ವಾನ 'ಗೋಪಿ' ಕೂಡ ಪ್ರದರ್ಶನದಲ್ಲಿ ಭಾಗವಹಿಸಿ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಸುಧಾ ಮೂರ್ತಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ವರ್ಷ 550ಕ್ಕೂ ಹೆಚ್ಚು ಶ್ವಾನಗಳು ಮತ್ತು ಬೆಕ್ಕುಗಳು ಸ್ಪರ್ಧೆಯಲ್ಲಿ ಭಾಗವಹಿಸಿವೆ. ಆಯ್ಕೆ ಮಾಡುವುದು ತೀರ್ಪುಗಾರರಿಗೆ ಬಹಳ ಕಷ್ಟ. ಏಕೆಂದರೆ ಇಲ್ಲಿ ಬಂದಿರುವ ಪ್ರಾಣಿಗಳು ಅಷ್ಟು ಮುದ್ದಾಗಿವೆ. ಭಾಗವಹಿಸಿದ ಶ್ವಾನಗಳಿಗೆ ಬಹುಮಾನ ಬರಲಿಲ್ಲ ಎಂದು ಬೇಸರ ಬೇಡ ಅಥವಾ ‌ನಮ್ಮ ನಾಯಿ ಚೆನ್ನಾಗಿ ಇಲ್ಲ ಎಂದು ತಿಳಿದುಕೊಳ್ಳಬೇಡಿ. ಅವರವರ ಶ್ವಾನಗಳು ಮಾಲೀಕರ ಹೃದಯಕ್ಕೆ ಹತ್ತಿರವಾಗಿಯೇ ಇರುತ್ತದೆ ಎಂದರು.

ನಮ್ಮ ಗೋಪಿ ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅವನು ಬಹಳ ಸುಂದರ ಮತ್ತು  ಸ್ನೇಹಮಯಿ ಆಗಿದ್ದಾನೆ. ಅವನ ಪುಸ್ತಕವು ಭಾರತದ ಎಂಟು ಭಾಷೆಗಳಲ್ಲಿ ಭಾಷಾಂತರಗೊಂಡಿದೆ. ಅದು ವರ್ಷಕ್ಕೆ 5 ಲಕ್ಷ ಕಾಪಿ ಮಾರಾಟವಾಗುತ್ತದೆ. ಈ ದುಡ್ದಿನಲ್ಲಿ ಬೀದಿ ನಾಯಿಗಳಿಗೆ ಪ್ರತಿ ತಿಂಗಳು 2 ಸಾವಿರ ಕೆ.ಜಿ ಅಕ್ಕಿಯನ್ನು ಕೊಡುತ್ತೇವೆ. ಮಕ್ಕಳು ಕೇವಲ ಗೊಂಬೆಗಳೊಂದಿಗೆ ಬೆಳೆದರೆ ಸ್ವಾರ್ಥ ಬಂದು ಬಿಡುತ್ತದೆ. ಆದ್ದರಿಂದ ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಕರುಣೆ, ಅಂತಃಕರಣ, ನಿಷ್ಕಲ್ಮಶವಾದ ಪ್ರೀತಿ ಮಕ್ಕಳಲ್ಲಿ ಬೆಳೆಯುತ್ತದೆ ಎಂದು ಸುಧಾಮೂರ್ತಿ ತಿಳಿಸಿದರು.

ಗೌರಿ ಹಬ್ಬಕ್ಕೆ 5,000 ರೂ ಸೀರೆ ಬದಲು 4,000 ರೂ ಸೀರೆ ತೆಗೆದುಕೊಂಡು 1000 ರೂ ಪ್ರಾಣಿಗಳಿಗೆ ಖರ್ಚು ಮಾಡಿ. ಪ್ರಾಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿ ಎಂದು ಮಹಿಳೆಯರಿಗೆ ರಾಜ್ಯಸಭಾ ಸದಸ್ಯೆ ಮನವಿ ಮಾಡಿದರು.

ಇದನ್ನೂ ಓದಿ: ಶ್ರೀರಂಗಪಟ್ಟಣ ದಸರಾದಲ್ಲಿ ಕುಸ್ತಿ: ಅಖಾಡಕ್ಕಿಳಿದು ಮಹಿಳಾ ಪೈಲ್ವಾನರ ಸೆಣಸಾಟ - Srirangapatna dasara

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.