ಬೆಂಗಳೂರಲ್ಲಿ ಯುವಕರಿಂದ ವ್ಹೀಲಿಂಗ್ ಹುಚ್ಚಾಟ: ಫ್ಲೈಓವರ್ನಿಂದ ಸ್ಕೂಟರ್ ಕೆಳಗೆಸೆದು ವಾಹನ ಸವಾರರ ಆಕ್ರೋಶ - scooters Wheeling - SCOOTERS WHEELING
🎬 Watch Now: Feature Video
Published : Aug 17, 2024, 5:32 PM IST
ಬೆಂಗಳೂರು: ವ್ಹೀಲಿಂಗ್ ನಡೆಸಿ ಪುಂಡಾಟ ಮೆರೆಯುತ್ತಿದ್ದ ಯುವಕರ ವರ್ತನೆಯಿಂದ ರೊಚ್ಚಿಗೆದ್ದ ವಾಹನ ಸವಾರರು ಎರಡು ಸ್ಕೂಟರ್ಗಳನ್ನು ಫ್ಲೈಓವರ್ನಿಂದ ಕೆಳಗೆ ಎಸೆದು ಪಾಠ ಕಲಿಸಿದ್ದಾರೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಅಡಕಮಾರನಹಳ್ಳಿಯ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ.
ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರಲ್ಲೂಬ್ಬ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಾಹನ ಸವಾರರು ಆತನ ಮತ್ತು ಮತ್ತೊಬ್ಬ ಯುವಕನ ಸ್ಕೂಟರ್ಅನ್ನು ಫ್ಲೈಓವರ್ ನಿಂದ ಕೆಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಹೀಲಿಂಗ್ ಹುಚ್ಚಾಟ, 44 ಯುವಕರು ವಶಕ್ಕೆ: ಮತ್ತೊಂದೆಡೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೈಕ್ ವ್ಹೀಲಿಂಗ್ ನಡೆಸಿ ಪುಂಡಾಟ ಮೆರೆದಿದ್ದ 44 ಯುವಕರನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದರು. ಬೈಕ್ ವ್ಹೀಲಿಂಗ್ ಸಂಬಂಧ 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಯಲಹಂಕದ ಚಿಕ್ಕಜಾಲ ಬಳಿಯ ಏರ್ಪೋರ್ಟ್ ರಸ್ತೆಯಲ್ಲಿ ಗುರುವಾರ ಸಂಜೆ 5 ಗಂಟೆ ಸಮಯದಲ್ಲಿ ಪುಂಡರ ಗ್ಯಾಂಗ್ವೊಂದು ಬೈಕ್ ವ್ಹೀಲಿಂಗ್ ಮಾಡುತ್ತಿತ್ತು. ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ಬರುತ್ತಿದ್ದ ಸಾರ್ವಜನಿಕರು ಬೈಕ್ ವ್ಹೀಲಿಂಗ್ ಹುಚ್ಚಾಟವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ಈ ವೇಳೆ ಪುಂಡನೊಬ್ಬ ತನ್ನ ಮಧ್ಯದ ಬೆರಳನ್ನು ತೋರಿಸುವ ಮೂಲಕ ಕಾರಿನಲ್ಲಿದ್ದವರಿಗೆ ಬೆದರಿಕೆ ಹಾಕಿದ್ದ. ಈ ದೃಶ್ಯವನ್ನು ಕಾರಿನಲ್ಲಿದ್ದ ಪ್ರಯಾಣಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಸ್ನೇಹಿತ ಹಾಗು ಆತನ ಪ್ರೇಯಸಿಗೆ ಕದ್ದ ಚಿನ್ನಾಭರಣ ಕೊಟ್ಟ ಆರೋಪಿ ಸೇರಿ ಇಬ್ಬರ ಬಂಧನ - Bengaluru House Theft Case