ನಟಿಯರಾದ ರಾಧಿಕಾ ಪಂಡಿತ್, ರಚಿತಾ ರಾಮ್ ವೋಟಿಂಗ್: ವಿಡಿಯೋ - Radhika Rachita Voting
🎬 Watch Now: Feature Video
Published : Apr 26, 2024, 4:00 PM IST
ಬೆಂಗಳೂರು: ರಾಜ್ಯದಲ್ಲಿ ಇಂದು ನಡೆಯುತ್ತಿರುವ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಹಲವು ತಾರೆಯರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದೇ ವೇಳೆ ಎಲ್ಲರೂ ತಪ್ಪದೆ ಮತ ಹಾಕುವಂತೆ ಅವರು ಕರೆ ಕೊಟ್ಟಿದ್ದಾರೆ.
ಬೆಂಗಳೂರಿನ ಮಲೇಶ್ವರಂನ ಮತಗಟ್ಟೆ ಸಂಖ್ಯೆ-170ರಲ್ಲಿ ನಟಿ ರಾಧಿಕಾ ಪಂಡಿತ್ ಮತದಾನ ಮಾಡಿದರು. ಇದಕ್ಕೂ ಮುನ್ನ ಇದೇ ಮತಗಟ್ಟೆಯಲ್ಲಿ ಪತಿ, ರಾಕಿಂಗ್ ಸ್ಟಾರ್ ಯಶ್ ಮತ ಚಲಾಯಿಸಿದರು. ಮತ್ತೊಂದೆಡೆ, ಆರ್.ಆರ್.ನಗರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತದಾನ ಮಾಡಿದರು. ಮತ ಚಲಾಯಿಸಲು ಬಂದ ಚಂದನವನದ ಚೆಲುವೆಯರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ಇದನ್ನೂ ಓದಿ: Kannada SUPERSTARS voting : ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ ಯಶ್, ಸುದೀಪ್, ದರ್ಶನ್ - CELEBRITIES VOTING
ದರ್ಶನ್, ಸುದೀಪ್, ರಾಜ್ಕುಮಾರ್ ಕುಟುಂಬಸ್ಥರು, ರವಿಚಂದ್ರನ್, ವಿಜಯ್ ರಾಘವೇಂದ್ರ, ಶ್ರೀಮುರುಳಿ, ಉಪೇಂದ್ರ, ಡಾಲಿ ಧನಂಜಯ್, ಸಪ್ತಮಿ ಗೌಡ, ರಕ್ಷಿತಾ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಯಾರೆಲ್ಲಾ ವೋಟ್ ಮಾಡಿದ್ರು?: ವಿಡಿಯೋ ನೋಡಿ - Sandalwood Stars Voting