Live: ಕರ್ನಾಟಕ ವಿಧಾನಸಭೆ ಕಲಾಪದ ನೇರ ಪ್ರಸಾರ - ಕರ್ನಾಟಕ ಬಜೆಟ್ 2024

🎬 Watch Now: Feature Video

thumbnail

By ETV Bharat Karnataka Team

Published : Feb 22, 2024, 10:50 AM IST

Updated : Feb 22, 2024, 1:33 PM IST

ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನವು ಫೆಬ್ರವರಿ 12 ರಿಂದ ಆರಂಭವಾಗಿದ್ದು, ಫೆ.23ರವರೆಗೆ ನಡೆಯಲಿದೆ. ಫೆಬ್ರವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್​​ ಮಂಡಿಸಿದ್ದಾರೆ. ಇಂದು 9 ನೇ ದಿನದ ವಿಧಾನಸಭೆ ಕಲಾಪ ನಡೆಯುತ್ತಿದ್ದು, ಇದರ ನೇರಪ್ರಸಾರ ವೀಕ್ಷಿಸಿ.

ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಒಂದು ವರ್ಷಕ್ಕೆ ಪೊಲೀಸರ ವರ್ಗಾವಣೆ ತಡೆಯುವ 2024ನೇ ಸಾಲಿನ ಕರ್ನಾಟಕ ಪೊಲೀಸ್​ (ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತು. ವಿಧೇಯಕವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸದನದಲ್ಲಿ ಪರ್ಯಾಲೋಚಿಸಿ, ಪೊಲೀಸರ ವರ್ಗಾವಣೆ ಕುರಿತ ವಿಧೇಯಕ ಇದಾಗಿದೆ. ಪೊಲೀಸರ ವರ್ಗಾವಣೆ ಅವಧಿ ಒಂದು ವರ್ಷದಿಂದ ಎರಡು ವರ್ಷಕ್ಕೆ ಏರಿಕೆ ಮಾಡಲಾಗಿದೆ. ಒಂದು ವರ್ಷವಾದ ನಂತರ ವರ್ಗಾವಣೆ ಮಾಡಬೇಕು ಅಂತ ಹಾಲಿ ನಿಯಮ ಇದೆ. ಒಂದೇ ವರ್ಷಕ್ಕೆ ವರ್ಗಾವಣೆ, ಆದರೆ ಪ್ರಕರಣಗಳ ತನಿಖೆ, ವಿಚಾರಣೆಗೆ ತೊಡಕಾಗಲಿದೆ. ಹೀಗಾಗಿ ಒಂದು ವರ್ಷಕ್ಕೆ ಪೊಲೀಸರ ವರ್ಗಾವಣೆಗೆ ಬ್ರೇಕ್ ಹಾಕಲು ವಿಧೇಯಕ ತರಲಾಗಿದೆ ಎಂದರು. ಈ ತಿದ್ದುಪಡಿ ವಿಧೇಯಕವನ್ನು ವಿಪಕ್ಷ ಸದಸ್ಯರೂ ಸ್ವಾಗತಿಸಿದರು.

30 ಕಾನೂನುಗಳ ನಿರಸನ: 2024ನೇ ಸಾಲಿನ ಕರ್ನಾಟಕ ಕೆಲವು ಅಧಿನಿಯಮಗಳು ಮತ್ತು ಪ್ರಾದೇಶಿಕ ಕಾನೂನುಗಳನ್ನು ನಿರಸನಗೊಳಿಸುವ ವಿಧೇಯಕ ಅಂಗೀಕಾರವಾಯಿತು. ಹಳೆಯದಾದ ಅಪ್ರಸ್ತುತ ಒಟ್ಟು 30 ಕಾನೂನುಗಳನ್ನು ನಿರಶನ‌ಗೊಳಿಸುವ ವಿಧೇಯಕವಾಗಿದೆ. ಕೆಲ ಕಾನೂನುಗಳ ಸದ್ಯದ ಪರಿಸ್ಥಿತಿಗೆ ಅಪ್ರಸ್ತುತ ಹಾಗೂ ಅಪ್ರಯೋಜಕವಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ಚರ್ಚೆ ನಡೆಸಿ ಒಟ್ಟು 30 ಹಳೆಯ ಕಾನೂನುಗಳನ್ನು ನಿರಸನಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು.

2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ ಅಂಗೀಕಾರ. ಬುಧವಾರ ವಿಧಾನಸಭೆಯಲ್ಲಿ ಒಟ್ಟು 13 ವಿಧೇಯಕಗಳನ್ನು ಅಂಗೀಕರಿಸಲಾಯಿತು. 

Last Updated : Feb 22, 2024, 1:33 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.