ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆ: ವಿಡಿಯೋ - Heavy Rain in Sringeri - HEAVY RAIN IN SRINGERI
🎬 Watch Now: Feature Video
Published : Oct 5, 2024, 8:46 PM IST
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಮತ್ತೊಂದೆಡೆ ಇಂದು ಶೃಂಗೇರಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಶಾರದಾಂಬೆ ದೇವಸ್ಥಾನದಲ್ಲಿ ಭಕ್ತರು ಪರದಾಟ ಅನುಭವಿಸಿದರು.
ಇನ್ನು ಅಡಿಕೆ ತೋಟಗಳು ಜಲಾವೃತಗೊಂಡಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ. ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕಾಫಿ, ಅಡಿಕೆ ಮತ್ತು ಕಾಳುಮೆಣಸು ಬೆಳೆ ಹಾನಿಗೊಳಾಗಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದು, ಮಳೆ ನಿಲ್ಲಲಿ ಎಂದು ದೇವರ ಮೊರೆಹೋಗಿದ್ದಾರೆ. ಹಣ್ಣಾಗುವ ಸಮಯದಲ್ಲಿ ಮಳೆಯಿಂದ ಕಾಫಿ ನಾಶವಾಗುವ ಆತಂಕ ಎದುರಾಗಿದೆ.
ಬಳ್ಳಾರಿಯಲ್ಲಿ ಸತತ ನಾಲ್ಕು ತಾಸು ಸುರಿದ ಮಳೆ: ಮತ್ತೊಂದೆಡೆ, ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಶುಕ್ರವಾರ ರಾತ್ರಿ ಮಳೆ ಸತತ ನಾಲ್ಕು ತಾಸುಗಳ ಕಾಲ ಬಿಟ್ಟು ಬಿಡದೇ ಸುರಿದಿದೆ. ಪರಿಣಾಮ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಇಡೀ ರಾತ್ರಿ ಪರದಾಡುವಂತಾಯಿತು.