ಹೆಚ್​ಡಿಕೆಗೆ ಕೇಂದ್ರ ಮಂತ್ರಿ ಸ್ಥಾನ: ಮೇಲುಕೋಟೆಯಲ್ಲಿ ಮಂಡಿಯೂರಿ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಅಭಿಮಾನಿ! - HDK Fan Fulfilled God Puja - HDK FAN FULFILLED GOD PUJA

🎬 Watch Now: Feature Video

thumbnail

By ETV Bharat Karnataka Team

Published : Jun 14, 2024, 9:01 PM IST

ಮಂಡ್ಯ: ಹೆಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಮಂತ್ರಿಯಾದ ಕಾರಣ ಅಭಿಮಾನಿಯೊಬ್ಬ ಮೇಲುಕೋಟೆ ಯೋಗನರಸಿಂಹಸ್ವಾಮಿ ಬೆಟ್ಟವನ್ನು ಮಂಡಿಯಲ್ಲಿ ಹತ್ತಿ ಹರಕೆ ತೀರಿಸಿದ್ದಾರೆ.

ಹರಕೆ ತೀರಿಸಿದ ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಲೋಕೇಶ್ ಮಾಧ್ಯಮದವರೊಂದಿಗೆ ಮಾತನಾಡಿ, ಹೆಚ್​ಡಿಕೆ ಅವರ ಅಪ್ಪಟ ಅಭಿಮಾನಿ ನಾನು. ಅವರು ಕೇಂದ್ರದಲ್ಲಿ ಮಂತ್ರಿಯಾಗಬೇಕು ಮತ್ತು ಅವರ ಆರೋಗ್ಯ ವೃದ್ಧಿಯಾಗಬೇಕು ಎಂದು ಮೇಲುಕೋಟೆ ಬೆಟ್ಟದ ಯೋಗನರಸಿಂಹ ಸ್ವಾಮಿಗೆ ಹರಕೆ ಮಾಡಿಕೊಂಡಿದ್ದೆ. ನನ್ನ ಬೇಡಿಕೆ ಫಲಿಸಿದ್ದರಿಂದ ಇಲ್ಲಿಗೆ ಬಂದು ಹರಕೆ ತಿರಿಸಿದ್ದೇನೆ ಎಂದು ಹೇಳಿದರು.

ಲೋಕೇಶ್ ದೇವಾಲಯ ತೆರೆಯುವ ಮುನ್ನವೇ ಬೆಟ್ಟ ಹತ್ತುವ ಮೂಲಕ ಅಭಿಮಾನ ಮೆರೆದಿದ್ದಾರೆ.

8 ಕಾಲು 2 ತಲೆಯ ಕರುವಿಗೆ ಜನ್ಮವಿತ್ತ ಎಮ್ಮೆ: ಮತ್ತೊಂದೆಡೆ, ಎಮ್ಮೆಯೊಂದು ಎಂಟು ಕಾಲು, ಎರಡು ತಲೆಯುಳ್ಳ ಕರುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಕೆ.ಆರ್‌.ಪೇಟೆ ತಾಲೂಕಿನ ಚಟ್ಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ದುರದೃಷ್ಟವಶಾತ್ ಕರು ಸಾವನ್ನಪ್ಪಿದೆ. ಗ್ರಾಮದ ಶಿವಲಿಂಗಯ್ಯ ಎಂಬವರಿಗೆ ಸೇರಿದ ಎಮ್ಮೆ ಗುರುವಾರ ಕರು ಹಾಕಿದ್ದು, ಕರು ಎಂಟು ಕಾಲು, ಎರಡು ತಲೆ, ಎರಡು ಬಾಲ ಹೊಂದಿತ್ತು. ಆದರೆ, ಕರು ಎಮ್ಮೆಯ ಹೊಟ್ಟೆಯಲ್ಲೇ ಮೃತಪಟ್ಟಿದೆ. 

ಇದನ್ನೂ ಓದಿ: ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ ಪ್ರಹ್ಲಾದ್ ಜೋಶಿಗೆ ಭವ್ಯ ಸ್ವಾಗತ - Pralhad Joshi

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.