ತುಮಕೂರಿನಲ್ಲಿ ಅಯೋಧ್ಯೆಯ ಶ್ರೀಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಅದ್ಧೂರಿ ಮೆರವಣಿಗೆ: ವಿಡಿಯೋ - GRAND PROCESSION TO ARUN YOGIRAJ
🎬 Watch Now: Feature Video


Published : Nov 12, 2024, 7:12 PM IST
ತುಮಕೂರು: ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಚಿನ್ನ ಬೆಳ್ಳಿ ವರ್ತಕರ ಸಂಘದ 25ನೇ ರಜತ ಮಹೋತ್ಸವದ ನಿಮಿತ್ತ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸನ್ಮಾನಿಸಲಾಯಿತು. ನೂರಾರು ಮಂದಿ ಚಿನ್ನ ಬೆಳ್ಳಿ ವರ್ತಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಚನ್ನಕೇಶವ ದೇವಾಲಯಕ್ಕೆ ಸಚಿವ ಪರಮೇಶ್ವರ್, ಅರುಣ್ ಯೋಗಿರಾಜ್ ಭೇಟಿ: ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಶಿಲ್ಪಿ ಅರುಣ್ ಯೋಗಿರಾಜ್ ಇಂದು ಐತಿಹಾಸಿಕ ಕೈದಾಳ ಶ್ರೀಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು. ನಂತರ ದೇವಸ್ಥಾನದ ಅಚ೯ಕರು ಐತಿಹಾಸಿಕ ದೇವಸ್ಥಾನ ಇತಿಹಾಸ ಮತ್ತು ವಿಶೇಷತೆ ಬಗ್ಗೆ ಸಚಿವ ಜಿ.ಪರಮೇಶ್ವರ್ ಹಾಗೂ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ತಿಳಿಸಿದರು. ಬಳಿಕ ಸಚಿವರು ದೇವಸ್ಥಾನದ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು, ಎಸ್‌ಪಿ ಅಶೋಕ್, ತಹಶೀಲ್ದಾರ್ ರಾಜೇಶ್ವರಿ ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಪ್ರಪಂಚದ ಪ್ರಸಿದ್ಧ ಹಿಂದೂ ದೇವಾಲಯಗಳಿವು: ಯಾವೆಲ್ಲಾ ದೇಶಗಳಲ್ಲಿ ಆಲಯಗಳಿವೆ ನಿಮಗೆ ಗೊತ್ತಾ?