ದೊಡ್ಡಬಳ್ಳಾಪುರ: ನಿರಂತರ ಮಳೆ, ತೋಟದಲ್ಲೇ ಕೊಳೆತ ಅಲಂಕಾರಿಕ ಹೂವಿನ ಬೆಳೆ - FLOWER DAMAGED
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/22-10-2024/640-480-22732585-thumbnail-16x9-sanjuuuu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 22, 2024, 10:18 AM IST
ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಲಂಕಾರಿಕ ಗಿಡಗಳು ಕೊಳೆಯುತ್ತಿವೆ. ಬೆಳೆ ನಾಶದಿಂದ ಕಂಗಲಾದ ರೈತರು ಅಲಂಕಾರಿಕ ಹೂ - ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನಾರಸಿಂಹನಹಳ್ಳಿಯ ಶ್ರೀಕಾಂತ್ ಮತ್ತು ನರಸೇಗೌಡ ಹೂವಿನ ಗಿಡವನ್ನ ಬೆಳೆದಿದ್ದರು. ನಿರಂತರ ಮಳೆಯಿಂದಾಗಿ ಕೊಳೆತ ಹೂ ಗಿಡಗಳನ್ನು ಬುಡ ಸಮೇತ ಕಿತ್ತು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಒಂದು ಎಕರೆ ಜಮೀನಿನಲ್ಲಿ ಸುಮಾರು 8 ಲಕ್ಷ ರೂಪಾಯಿ ಹಣ ಖರ್ಚು ಮಾಡಿ, ಸಿಲೋಷಿಯ ಜಾತಿಯ ಹೂ ಬೆಳೆದಿದ್ದೆವು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೇರೆಡೆಗೆ ಹೂಗಳನ್ನು ರಫ್ತು ಮಾಡಲಾಗುತ್ತಿತ್ತು. ಬಾಂಬೆ, ಕಲ್ಕತ್ತಾ, ಹೈದರಾಬಾದ್, ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿತ್ತು. ಮಳೆಯಿಂದಾಗಿ ಬೆಳೆ ಸಂಪೂರ್ಣ ಹಾಳಾಗಿದೆ' ಎಂದು ರೈತ ಶ್ರೀಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
'ಕಳೆದ ಮೂರು ತಿಂಗಳಿಂದ ಮಗುವಿನ ರೀತಿಯಲ್ಲಿ ಅಲಂಕಾರಿಕ ಹೂವಿನ ಬೆಳೆಯನ್ನ ಬೆಳೆಯಲಾಗಿದ್ದು, ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗಿಡಗಳು ಬುಡ ಸಮೇತ ಕೊಳೆಯುತ್ತಿವೆ' ಎಂದು ರೈತ ನರಸೇಗೌಡ ತಮ್ಮ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ತುಂತುರು ಮಳೆಗೆ ಹೂವು ಬೆಳೆಗಾರರ ಬದುಕು ತತ್ತರ: ಗಿಡದಲ್ಲೇ ಕೊಳೆಯುತ್ತಿರುವ ಸೇವಂತಿಗೆ