ಶ್ರಾವಣಮಾಸದ ಮೊದಲ ಹಬ್ಬ: ಸೋಮೇಶ್ವರ ಸನ್ನಿಧಾನದಲ್ಲಿ ಮಹಿಳೆಯರಿಂದ ನಾಗರಪಂಚಮಿ ಆಚರಣೆ - Nagara Panchami Celebration - NAGARA PANCHAMI CELEBRATION
🎬 Watch Now: Feature Video
Published : Aug 8, 2024, 8:01 AM IST
|Updated : Aug 8, 2024, 9:48 AM IST
ಧಾರವಾಡ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆ ಧಾರವಾಡದ ನೃತ್ಯ ದಿ ಡ್ಯಾನ್ಸ್ ಅಕಾಡೆಮಿಯ ಮಹಿಳೆಯರು ಕಲರ್ಫುಲ್ ಆಗಿ ನಾಗರಪಂಚಮಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಹೌದು, ತಂಡದ ಮಹಿಳೆಯರು ತರಹೇವಾರಿ ಅಡುಗೆ ಮಾಡಿಕೊಂಡು ಬಂದು, ಧಾರವಾಡದ ಸೋಮೇಶ್ವರ ದೇವಸ್ಥಾನದಲ್ಲಿ ಬಣ್ಣ ಬಣ್ಣದ ಉಡುಗೆ ತೊಟ್ಟು ಹಾಡಿ, ಕುಣಿದು ಸಂಭ್ರಮಿಸಿದರು. ಉಂಡೆ, ಚಕ್ಕುಲಿ, ನೆನೆಸಿದ ಕಡಲೆ, ಒಣ ಕೊಬ್ಬರಿ ಹೀಗೆ ನಾನಾ ಬಗೆಯ ತಿನಿಸುಗಳನ್ನು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ತಂದಿದ್ದರು. ನಾಗರ ಮೂರ್ತಿಗೆ ಹಾಲೆರೆದು ಪಂಚಮಿ ಹಬ್ಬದ ಜಾನಪದ ಹಾಡುಗಳನ್ನು ಹಾಡಿದರು.
ಇನ್ನೂ ಕೆಲ ಮಹಿಳೆಯರು ಬಾಲಿವುಡ್ ಹಾಡುಗಳಿಗೆ ಕ್ಯಾಟ್ ವಾಕ್ ಮಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಇತ್ತೀಚಿನ ಯುವ ಪೀಳಿಗೆ ಯಾವ ಹಬ್ಬಗಳನ್ನೂ ಸಾಂಪ್ರದಾಯಿಕವಾಗಿ ಆಚರಿಸದೇ ನೆಪಕ್ಕೆ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೆ ಹಬ್ಬದ ಮಹತ್ವ ತಿಳಿಸಲು ಮಹಿಳೆಯರು ಸೋಮೇಶ್ವರ ದೇವಸ್ಥಾನ ಆವರಣದಲ್ಲಿ ಹಬ್ಬದಾಚರಣೆ ಮಾಡಿದರು. ಆ ಮೂಲಕ ಮಕ್ಕಳಿಗೆ ಹಬ್ಬದ ಆಚರಣೆಗಳನ್ನು ತಿಳಿಸಿಕೊಟ್ಟರು.
ಇದನ್ನೂ ನೋಡಿ: ದೇವರ ಹೆಸರಿನಲ್ಲಿ ಹಾಲಿನ ವ್ಯರ್ಥ ಬೇಡ, ಅಗತ್ಯವಿದ್ದವರಿಗೆ ನೀಡಿ: ಜಯಮೃತ್ಯುಂಜಯ ಸ್ವಾಮೀಜಿ - Jaya Mruthyunjaya Swamiji