ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲೇ ಇಬ್ಬರ ನಡುವೆ ಹೊಡೆದಾಟ - ಮಿನಿ ವಿಧಾನಸೌಧ ಹೊಡೆದಾಟ
🎬 Watch Now: Feature Video
Published : Jan 24, 2024, 11:30 AM IST
ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಹೊಡೆದಾಡಿಕೊಂಡು ಪೊಲೀಸ್ ಠಾಣೆಗೆ ನುಗ್ಗಿದ ಘಟನೆ ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿ ಮಂಗಳವಾರ ನಡೆಯಿತು. ಹನುಮಂತಪ್ಪ ನಿಲಿ ಎಂಬಾತನ ಮೇಲೆ ಮಹೇಶ ಗೌಡ ಪಾಟೀಲ್ ಹಾಗೂ ಸಹೋದರ ಚಾಕು ಹಿಡಿದುಕೊಂಡು ಮಿನಿ ವಿಧಾನಸೌಧಕ್ಕೆ ಏಕಾಏಕಿ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಹನಮಂತಪ್ಪ ಪಕ್ಕದಲ್ಲಿದ್ದ ಉಪನಗರ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾರೆ. ಪೊಲೀಸ್ ಠಾಣೆಗೆ ಓಡಿ ಹೋದರೂ ಬಿಡದೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಜಗಳ ಬಿಡಿಸಿ ವಿಚಾರಣೆ ನಡೆಸಿದರು.
ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಮಿನಿ ವಿಧಾನಸೌಧಕ್ಕೆ ಬೀಟ್ ಪೊಲೀಸ್ ನಿಯೋಜಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಘಟನೆಯ ವೇಳೆ ಸ್ಥಳದಲ್ಲಿದ್ದವರು ವಿಡಿಯೋ ಸೆರೆ ಹಿಡಿದಿದ್ದಾರೆ. ಮಿನಿ ವಿಧಾನಸೌಧ ಎಂಬುದನ್ನೂ ಮರೆತು ಇಬ್ಬರು ಬಡಿದಾಡಿಕೊಂಡಿದ್ದಾರೆ. ತಂದೆ, ತಾಯಿಗೆ ತೊಂದರೆ ಕೊಟ್ಟಿರುವ ವಿಚಾರದ ಹಿನ್ನೆಲೆಯಲ್ಲೂ ಈ ಜಗಳ ನಡೆದಿದೆ ಎಂಬ ಮಾಹಿತಿಯೂ ದೊರೆತಿದೆ.
ಇದನ್ನೂ ಓದಿ : ಮ್ಯಾಜಿಸ್ಟ್ರೇಟ್ ಕಾರು ಓವರ್ಟೇಕ್ ಮಾಡಿದ್ದಕ್ಕೆ ಯುವಕರಿಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ