ಚಾರ್ಮಾಡಿ ಘಾಟ್​​​ ರಸ್ತೆಯಲ್ಲಿ ಒಂಟಿ ಸಲಗದ ಸಂಚಾರ: ವಿಡಿಯೋ - Charmadi Ghat - CHARMADI GHAT

🎬 Watch Now: Feature Video

thumbnail

By ETV Bharat Karnataka Team

Published : Sep 11, 2024, 10:56 AM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ವರ್ಷದ ಮುಂಗಾರು ಮಳೆ ಕ್ಷೀಣಿಸುತ್ತಿದ್ದು, ರಸ್ತೆ ಸಂಚಾರ ಸುಗಮವಾಗುತ್ತಿದೆ. ಇದರ ನಡುವೆ ಗಜರಾಜ ಘಾಟಿಯ ರಸ್ತೆಯಲ್ಲಿ ಸಂಚಾರ ನಡೆಸಿ ಆತಂಕ ಸೃಷ್ಟಿಸಿದ್ದಾನೆ. ಆದರೆ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಆನೆ ಯಾವುದೇ ತೊಂದರೆ ನೀಡಿಲ್ಲ.  

ಘಾಟ್‌ನಲ್ಲಿ ಗಂಟೆಗಳ ಕಾಲ ಆನೆ ನಿಂತಲ್ಲೇ ನಿಂತಿತ್ತು. ಕತ್ತಲಲ್ಲಿ ಅದರ ಓಡಾಟ ಕಂಡು ಪ್ರಯಾಣಿಕರು ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ. ವಾಹನಗಳ ಸಮೀಪವೇ ಓಡಾಟ ನಡೆಸುತ್ತಿದ್ದರೂ ಯಾವುದೇ ಅನಾಹುತ ಸಂಭವಿಸಿಲ್ಲ. ಯಾರಿಗೂ ತೊಂದರೆ ಕೊಡದೆ ಓಡಾಡುತ್ತಿದ್ದ ಆನೆಯನ್ನು ಕಂಡು ಕೆಲವರು ವಿಡಿಯೋ ಮಾಡಿದ್ದಾರೆ. ಸವಾರರು ನಿಧಾನವಾಗಿ ವಾಹನ ಚಲಾಯಿಸಿದ್ದಾರೆ.

ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕದ ಚಾರ್ಮಾಡಿ ಘಾಟ್‌ನಲ್ಲಿ ಆಗಾಗ್ಗೆ ಸಲಗದ ದರ್ಶನವಾಗುತ್ತಿದೆ. ಅರಣ್ಯ ಸಿಬ್ಬಂದಿ ಕೂಡಲೇ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಹೋಟೆಲ್ ಗೆ ಬಂದ ಗಜರಾಜ, ನಂತರ ಆಗಿದ್ದೇನು? - Wild elephant at hotel

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.