ಬೆಣ್ಣೆನಗರಿಯಲ್ಲಿ ಶ್ರೀ ರಾಮನ ಶಿವ ಧನಸ್ಸು ರೂಪಕ ತಯಾರಿಸಿದ ಭಕ್ತ; ಸೆಲ್ಫಿಗೆ ಮುಗಿಬಿದ್ದ ಜನ
🎬 Watch Now: Feature Video
ದಾವಣಗೆರೆ: ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಾಗೂ ರಾಮಮಂದಿರ ಲೋಕಾರ್ಪಣೆಗೆ ಕೇವಲ ಒಂದೇ ದಿನ ಬಾಕಿ ಇದೆ. ಈ ರಾಮಮಂದಿರ ಲೋಕಾರ್ಪಣೆ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಸೋಮವಾರ ಶ್ರೀರಾಮ ಮಂದಿರ ಉದ್ಘಾಟನೆ ಸಂಭ್ರಮ ದೇಶದ ಮೂಲೆ ಮೂಲೆಗೂ ಪಸರಿಸಲಿದ್ದು, ಜನರಲ್ಲಿ ಕುತೂಹಲ ಮನೆ ಮಾಡಿದೆ.
ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ನಗರದ ಆಂಜನೇಯ ಬಡಾವಣೆ ನಿವಾಸಿ ಕಲಾವಿದ ಶಿವಕುಮಾರ್ ಶ್ರೀ ರಾಮನ ಆಯುಧವಾದ ಶಿವ ಧನಸ್ಸು ರೂಪಕ ನಿರ್ಮಿಸಿದ್ದಾರೆ. ಈ ಶಿವ ಧನಸ್ಸು ರೂಪಕ ಆಂಜನೇಯ ಬಡಾವಣೆಯ ಆಂಜನೇಯ ದೇಗುಲಕ್ಕೆ ಸಮರ್ಪಿಸುವ ಮೂಲಕ ರಾಮನ ಕೃಪೆಗೆ ಕಲಾವಿದ ಶಿವಕುಮಾರ್ ಪಾತ್ರರಾಗಿದ್ದಾರೆ.
ನಂತರ ಶ್ರೀರಾಮನ ಆಯುಧ ಶಿವ ಧನಸ್ಸು ರೂಪಕವನ್ನು ತಮ್ಮ ನಿವಾಸದ ಮುಂದೆ ಸಾರ್ವಜನಿಕರ ದರ್ಶನಕ್ಕಿಟ್ಟಿದ್ದಾರೆ. ನಗರದ ಬಹಳಷ್ಟು ಶ್ರೀರಾಮ ಭಕ್ತರು ಈ ಶಿವ ಧನಸ್ಸು ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.
ಈಟಿವಿ ಭಾರತದೊಂದಿಗೆ ಕಲಾವಿದ ಶಿವಕುಮಾರ್ ಮಾತನಾಡಿ, ಅಯೋಧ್ಯೆಯಲ್ಲಿ ಸೋಮವಾರ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಇದೆ. ಈ ಹಬ್ಬವನ್ನು ಸಡಗರ ಸಂಭ್ರಮದಿoದ ಆಚರಿಸಲಾಗುತ್ತಿದೆ. ಈ ಸಂಭ್ರಮದಲ್ಲಿ ಏನಾದ್ರೂ ಮಾಡಬೇಕು ಅಂತಾ ಕಡಿಮೆ ವೆಚ್ಚದಲ್ಲಿ ಶ್ರೀರಾಮನ ಶಿವ ಧನಸ್ಸು ರೂಪಕ ನಿರ್ಮಿಸಿರುವೆ. ಇದಕ್ಕೆ ಪ್ಲಾಸ್ಟಿಕ್ ಪಿವಿಸಿ ಪೈಪ್, ಹೋಮ್ ಶೀಟ್ ಮತ್ತು ಲೇಸ್ ಬಳಸಿ ತಯಾರಿಸಿರುವ ಎಂದು ತಿಳಿಸಿದ್ದಾರೆ.
ಇದನ್ನೂಓದಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ವಿಶ್ವ ಹಿಂದೂ ಪರಿಷತ್ ಗೋಶಾಲೆಯಲ್ಲಿ ಹಣತೆ ತಯಾರಿಕೆ