ಚುನಾವಣಾ ನೀತಿ ಸಂಹಿತೆ ಜಾರಿ, ಫೀಲ್ಡಿಗಿಳಿದು ವಾಹನ ತಪಾಸಣೆ ಮಾಡಿದ ದಾವಣಗೆರೆ ಜಿಲ್ಲಾಧಿಕಾರಿ - Election Code of Conduct
🎬 Watch Now: Feature Video
Published : Mar 19, 2024, 5:33 PM IST
ದಾವಣಗೆರೆ: ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆ ಕ್ಷೇತ್ರಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ಡಾ. ಎಂ ವಿ ವೆಂಕಟೇಶ್ ಅವರು ಆ್ಯಕ್ಟಿವ್ ಆಗಿದ್ದಾರೆ. ದಿಢೀರ್ ಫೀಲ್ಡಿಗೆ ಎಂಟ್ರಿಕೊಟ್ಟಿರುವ ಅವರು, ಚೆಕ್ ಪೋಸ್ಟ್ ವಿಸಿಟ್ ಮಾಡ್ತಿದ್ದಾರೆ. ಜಿಲ್ಲಾಧಿಕಾರಿಗಳು ದಾವಣಗೆರೆ ಜಿಲ್ಲೆಯ ಬಹುತೇಕ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ, ಸ್ವತಃ ಅವರೇ ವಾಹನಗಳನ್ನ ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಶಿವಮೊಗ್ಗ ಜಿಲ್ಲೆಗೆ ಹೋಗುವ ಚೆಕ್ಪೋಸ್ಟ್ಗೆ ಅನಿರೀಕ್ಷಿತ ಭೇಟಿ ನೀಡಿ ವಾಹನಗಳನ್ನು ತಪಾಸಣೆ ನಡೆಸಿದರು. ಬಳಿಕ ವಾಹನದ ರಿಜಿಸ್ಟರ್ ಪುಸ್ತಕ ಗಮನಿಸಿ ಪರಿಶೀಲನೆ ನಡೆಸಿದರು. ಇದಲ್ಲದೇ ಜಿಲ್ಲಾದ್ಯಂತ ಚೆಕ್ ಪೋಸ್ಟ್‌ಗಳಲ್ಲಿ ಹೈ ಅಲರ್ಟ್ ಇರುವಂತೆ ಸಿಬ್ಬಂದಿಗೆ ಸೂಚಿಸಿದರು. ಜಿಲ್ಲೆಯ ಎಂಟ್ರಿ, ಎಕ್ಸಿಟ್ ಪಾಯಿಂಟ್ಗಳಲ್ಲಿ ವಾಹನಗಳ ಮೇಲೆ ತೀವ್ರ ನಿಗಾ ವಹಿಸಿದ್ದು, ಅನುಮತಿ ಇಲ್ಲದೇ ದಾಖಲೆ ಇಲ್ಲದ ಹಣ, ಅಕ್ರಮ ಮದ್ಯ ಸಾಗಣಿಕೆ, ಬೆಲೆಬಾಳುವ ವಸ್ತುಗಳ ಸಾಗಣೆ ಮೇಲೆ ಸೆಕ್ಟರ್ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
35 ಕಡೆ ಚೆಕ್ ಪೋಸ್ಟ್ ತೆರೆದಿರುವ ಜಿಲ್ಲಾಡಳಿತ : ಲೋಕಸಭಾ ಚುನಾವಣೆ ಮೇಲೆ ಕಣ್ಣಿಡಲು ಜಿಲ್ಲಾ ಚುನಾವಣಾಧಿಕಾರಿಗಳು ಜಿಲ್ಲೆಯಲ್ಲಿ ಒಟ್ಟು 35 ಚೆಕ್ ಪೋಸ್ಟ್ಗಳನ್ನು ತೆಗೆದಿದ್ದಾರೆ. ಈ ಪೈಕಿ 20 ಅಂತರ್ ಜಿಲ್ಲಾ ಚೆಕ್ಪೋಸ್ಟ್, 15 ಜಿಲ್ಲೆಯ ಒಳಗೆ ಚೆಕ್ಪೋಸ್ಟ್ ತೆರೆಯಲಾಗಿದೆ.
ಹನ್ನೊಂದು ವಲ್ನರೆಬಲ್ (ದುರ್ಬಲ) ಪ್ರದೇಶ ಅಥವಾ ಸ್ಥಳಗಳಲ್ಲಿ 387 ಕ್ರಿಟಿಕಲ್ ಪೋಲಿಂಗ್ ಸ್ಟೇಷನ್ ಗುರುತು ಮಾಡಲಾಗಿದೆ. ಅಪರಾಧ ಪ್ರವೃತ್ತಿಯ ವ್ಯಕ್ತಿಗಳಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. ಅಂತಹ ಸ್ಥಳಗಳಲ್ಲಿ ಸಿಆರ್ಪಿಎಫ್ ತುಕಡಿ ನಿಯೋಜನೆ ಮಾಡಲಾಗಿದೆ. ಮುಕ್ತ, ನ್ಯಾಯಸಮ್ಮತ ಎಲೆಕ್ಷನ್ ನಡೆಸುವ ಉದ್ದೇಶದಿಂದ ದಾವಣಗೆರೆ ಜಿಲ್ಲಾಡಳಿತ ಈ ರೀತಿ ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ : ಬಾಗಲಕೋಟೆ, ದಾವಣಗೆರೆ ಚೆಕ್ಪೋಸ್ಟ್ಗಳಲ್ಲಿ ಲಕ್ಷಾಂತರ ಮೌಲ್ಯದ ಮದ್ಯ, ನಗದು ವಶಕ್ಕೆ