ಬೆಂಗಳೂರು: ಮದುವೆ ಮಂಟಪಗಳಿಗೆ ಪರಿಚಿತನಂತೆ ನುಗ್ಗಿ ಚಿನ್ನಾಭರಣ ಎಗರಿಸುತ್ತಿದ್ದವನ ಬಂಧನ - ಚಿನ್ನಾಭರಣ ಕಳವು
🎬 Watch Now: Feature Video
Published : Jan 24, 2024, 5:33 PM IST
|Updated : Jan 24, 2024, 5:59 PM IST
ಬೆಂಗಳೂರು: ರಾಜಧಾನಿಯ ಕಲ್ಯಾಣ ಮಂಟಪಗಳಿಗೆ ತೆರಳಿ ವಧು-ವರರಿಗೆ ಶುಭ ಕೋರುವ ನೆಪದಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಖತರ್ನಾಕ್ ಖದೀಮನನ್ನು ಮಾಗಡಿ ರೋಡ್ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಬಂಧಿತ ನಿಖಿಲ್ ನಗರದ ಮದುವೆ ಮಂಟಪಗಳಿಗೆ ಒಳ್ಳೆ ಉಡುಗೆಗಳನ್ನು ಧರಿಸಿ ಹೋಗುತ್ತಿದ್ದ. ಈತನನ್ನ ನೋಡಿದವರು ವಧು-ವರನ ಕಡೆಯವರೇ ಅಂದುಕೊಳ್ಳುವಷ್ಟು ಈತ ಮುಗ್ಧನಂತೆ ನಟಿಸುತ್ತಿದ್ದ.
ಎಲ್ಲರನ್ನು ನಗುಮುಖದಿಂದ ಮಾತನಾಡಿಸಿ ಸಮಯ ನೋಡಿಕೊಂಡು ವಧು-ವರರ ಕೊಠಡಿಗೆ ನುಗ್ಗುತ್ತಿದ್ದ. ಇದೇ ರೀತಿ ಕಳೆದ ನವೆಂಬರ್ 28 ರಂದು ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿರುವ ಜಲರಾಂ ಕಲ್ಯಾಣ ಮಂಟಪಕ್ಕೆ ಹೋಗಿ ಮದುಮಗಳ ರೂಮ್ಗೆ ನುಗ್ಗಿ 1.81 ಲಕ್ಷ ಮೌಲ್ಯದ 31 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಚಾಲಾಕಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈ ಹಿಂದೆ ಹಾಸನದ ರೈಲ್ವೇ ನಿಲ್ದಾಣದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದಡಿ ಜೈಲು ಸೇರಿದ್ದು. ಬಳಿಕ ಜಾಮೀನಿನ ಮೇರೆಗೆ ಬಿಡುಗಡೆಯಾದರೂ ಹಳೆ ಚಾಳಿ ಪ್ರವೃತ್ತಿಯನ್ನು ಮುಂದುವರೆಸಿರುವುದು ಗೊತ್ತಾಗಿದೆ. ಬಂಧಿತನಿಂದ 1.81 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ತಂಗಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಹತ್ಯೆ: ಸ್ನೇಹಿತರಿಬ್ಬರ ಬಂಧನ