ಬಾದಾಮಿಯಲ್ಲಿ ಧುಮ್ಮುಕ್ಕುತ್ತಿದೆ ಅಕ್ಕ ತಂಗಿಯರ ಫಾಲ್ಸ್ - WATCH VIDEO - Akka Thangi Falls - AKKA THANGI FALLS
🎬 Watch Now: Feature Video


Published : Jun 7, 2024, 1:33 PM IST
ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆಯ ಚಾಲುಕ್ಯರ ನಾಡು ಬಾದಾಮಿಯಲ್ಲಿ ಅಕ್ಕ ತಂಗಿಯರ ಫಾಲ್ಸ್ ಧುಮ್ಮುಕ್ಕುತ್ತಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಬಾದಾಮಿ ಭೂತನಾಥ ದೇವಾಲಯದ ಹಿಂದೆ ಇರುವ ಬೆಟ್ಟದ ಮೇಲಿಂದ ನೀರು ಬೀಳುತ್ತಿದೆ.
ಜೋಡಿಯಾಗಿ ಫಾಲ್ಸ್ನ ಎರಡು ಕಡೆಯಿಂದ ನೀರು ಬೀಳುವುದರಿಂದ ಈ ಫಾಲ್ಸ್ನ್ನು ಅಕ್ಕ ತಂಗಿಯರ ಫಾಲ್ಸ್ ಎಂದೇ ಕರೆಯಗುತ್ತದೆ. ಬಿಳಿಬಿಳಿಯಾಗಿ ಹಾಲಿನ ನೊರೆಯಂತೆ ಬೀಳುತ್ತಿರುವ ಈ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆಂದು ಬರುವ ಪ್ರವಾಸಿಗರಿಗೆ ಅಕ್ಕತಂಗಿಯರ ಫಾಲ್ಸ್ ಸಹ ಮೆರೆಗು ನೀಡುತ್ತಿದೆ. ಬೆಟ್ಟದ ಮೇಲಿಂದ ನೀರು ಅಗಸ್ತತೀರ್ಥ ಹೊಂಡಕ್ಕೆ ಬರುತ್ತಿದ್ದು, ಮೈ ದುಂಬಿ ಹರಿಯುತ್ತಿದೆ. ಐತಿಹಾಸಿಕ ಸ್ಮಾರಕಗಳ ಜೊತೆಗೆ ಪ್ರಕೃತಿಯ ರಮಣೀಯ ಸೌಂದರ್ಯದ ಮಧ್ಯೆ ಅಕ್ಕ-ತಂಗಿ ಫಾಲ್ಸ್ ನೋಡುವುದೇ ಕಣ್ಣಿಗೆ ಸೋಜಿಗ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ - Chikkamagaluru Rains